More

    ಅರ್ಜುನ್​ ಸರ್ಜಾ ಪುತ್ರಿ ಐಶ್ವರ್ಯಾಗೆ ಕರೊನಾ ಸೋಂಕು 

    ನಟ ಅರ್ಜುನ್​ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಅವರಿಗೆ ಕರೊನಾ ಸೋಂಕು ತಗುಲಿದೆ. ಐಶ್ವರ್ಯಾ ಅರ್ಜುನ್ ಸರ್ಜಾ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

    ಇತ್ತೀಚೆಗೆ ಕೊವಿಡ್​-19 ಟೆಸ್ಟ್​ಗೆ ಒಳಗಾಗಿದ್ದೆ. ಸೋಂಕು ತಗುಲಿದ್ದು ದೃಢಪಟ್ಟಿದೆ. ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ವೃತ್ತಿಪರ ವೈದ್ಯಕೀಯ ತಂಡದ ಸಲಹೆ ಮೇರೆಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಎಲ್ಲರೀತಿಯ ಮುನ್ನೆಚ್ಚರಿಕೆ ಕ್ರಮವನ್ನೂ ವಹಿಸಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಎಲ್ಲರೂ ಕೊವಿಡ್​-19 ಟೆಸ್ಟ್​ಗೆ ಒಳಗಾಗಿ. ಕಾಳಜಿ ವಹಿಸಿ, ತಪ್ಪದೆ ಮಾಸ್ಕ್​ ಧರಿಸಿ. ನನ್ನ ಆರೋಗ್ಯದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.

    ಇತ್ತೀಚೆಗಷ್ಟೇ ಧ್ರುವಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಅವರಲ್ಲೂ ಕರೊನಾ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಸೇರಿದ ಒಂದೇ ದಿನದಲ್ಲಿ ಡಿಸ್​ಚಾರ್ಜ್​ ಆಗಿರುವ ದಂಪತಿ, ಸದ್ಯ ಹೋಂ ಕ್ವಾರಂಟೈನ್​​ನಲ್ಲಿದ್ದಾರೆ.

    ಅರ್ಜುನ್​ ಸರ್ಜಾ ಪುತ್ರಿ ಐಶ್ವರ್ಯಾಗೆ ಕರೊನಾ ಸೋಂಕು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts