More

    ಬೆಳ್ತಂಗಡಿಯ ಇಶಾ ಶರ್ಮಾಗೆ ಮೊದಲ ಐಎಂ ನಾರ್ಮ್ ಪ್ರಶಸ್ತಿ ಗರಿ

    ಬೆಳ್ತಂಗಡಿ: ಜು.18ರಂದು ಮುಕ್ತಾಯಗೊಂಡ ಸ್ಲೋವಾಕಿಯಾ ಓಪನ್ ಪಿಯೆಸ್ಟನಿ 2022 ಪಂದ್ಯಾವಳಿಯಲ್ಲಿ ಕರ್ನಾಟಕದ ಪ್ರತಿಭೆ ಇಶಾ ಶರ್ಮಾ ತನ್ನ ಚೊಚ್ಚಲ ಇಂಟರ್ನ್ಯಾಷನಲ್ ಮಾಸ್ಟರ್ ಮತ್ತು ಒಮನ್ ಗ್ರ್ಯಾಂಡ್ ಮಾಸ್ಟರ್ ನಾರ್ಮ್ ಮುಡಿಗೇರಿಸಿದ್ದಾರೆ.
    ಮೂರನೇ ಸುತ್ತಿನಲ್ಲಿ ಇಶಾ ಪೋಲಿಷ್ ದಂತಕಥೆ ಗ್ರ್ಯಾಂಡ್‌ಮಾಸ್ಟರ್ ಕ್ರಾಸೆಂಕೋವ್ ಮಿಚಾಲ್ (2569) ವಿರುದ್ಧ ಗೆಲುವು ಸಾಧಿಸಿದರು, ಇದು ಅವರ ಈವರೆಗಿನ ಅತ್ಯುತ್ತಮ ಗೆಲುವಾಗಿದೆ. ಇಶಾ ಎಫ್‌ಐಡಿಇ ತರಬೇತುದಾರ ಕೆ.ವಿಶ್ವೇಶ್ವರನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
    ಇಶಾ ಉಜಿರೆ ಎಸ್‌ಡಿಎಂ ಕಾಲೇಜಿನ ಅಂತಿಮ ವರ್ಷದ ಅರ್ಥಶಾಸತ್ರ ವ್ಯಾಸಂಗ ಮಾಡುತ್ತಿದ್ದು ಕರ್ನಾಟಕದ ಮೊದಲ ಮಹಿಳಾ ಇಂಟರ್‌ನ್ಯಾಶನಲ್ ಮಾಸ್ಟರ್ ಆಗಿದ್ದಾರೆ. ಐ.ಎಂ. ನಾರ್ಮ್ ಗೆಲುವಿನ ಹಾದಿಯಲ್ಲಿ ಇಶಾ ಮೊದಲಿಗೆ ಅಧಿಕ ಶ್ರೇಯಾಂಕದ ಸ್ಲೋವಾಕಿಯಾದ ಐಎಂ ನ್ಯೂಗೆಬೌರ್ ಮಾರ್ಟಿನ್ (2528) ಅವರನ್ನು ಸೋಲಿಸಿದರು ಮತ್ತು ಐಸ್‌ಲ್ಯಾಂಡ್‌ನ ಐಎಂ ಸ್ಟೆಫಾನ್ಸನ್ ವಿಗ್ನಿರ್ ವಟ್ನಾರ್ ಅವರೊಂದಿಗೆ ಡ್ರಾ ಮಾಡಿಕೊಂಡರು. ಇವರು 2019ರಲ್ಲಿ ಕರ್ನಾಟಕದ ಮೊದಲ ಮಹಿಳಾ ಇಂಟರ್ನ್ಯಾಷನಲ್ ಮಾಸ್ಟರ್ ತನ್ನ ಹೆಸರಿನಲ್ಲಿ ಬರೆದಿದ್ದರು. ಮಾತ್ರವಲ್ಲದೆ 2015 ರಲ್ಲಿ ಏಷ್ಯನ್ ಶಾಲೆಗಳ ಯು-15 ಕಂಚಿನ ಪದಕ ವಿಜೇತೆ ಮತ್ತು 2017ರಲ್ಲಿ ಇರಾನ್‌ನಲ್ಲಿ ನಡೆದ ಏಷ್ಯನ್ ಜೂನಿಯರ್ ಬಾಲಕಿಯರ ಚಾಂಪಿಯನ್‌ಶಿಪ್‌ನ್ನು ಗೆದ್ದಿದ್ದಾರೆ, ಸದ್ಯ ತನ್ನ ಹೆಸರಿನಲ್ಲಿ ಮತ್ತಷ್ಟ್ಟು ಗೆಲುವಿನ ಸಾಧನೆ ಮುಂದುವರಿಸುತ್ತಿರುವ ಇಶಾ ಪ್ರಸ್ತುತ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ವೆಜೆರ್ಕೆಪ್ಜೊ ಕ್ಲೋಸ್ಡ್ ಜಿಎಂ ಪಂದ್ಯಾವಳಿಯನ್ನು ಆಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts