More

    ಗುಕೇಶ್​ಗೆ ಗೆಲುವು, ಜಂಟಿ ಅಗ್ರಸ್ಥಾನ: ಪ್ರಶಸ್ತಿ ರೇಸ್​ನಿಂದ ಪ್ರಜ್ಞಾನಂದ, ವಿದಿತ್​ ಔಟ್​

    ಟೊರಾಂಟೊ: ಕ್ಯಾಂಡಿಡೇಟ್ಸ್​ ಚೆಸ್​ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ಮುಂದುವರಿಸಿರುವ ಭಾರತದ ಗ್ರಾಂಡ್​ ಮಾಸ್ಟರ್​ ಡಿ.ಗುಕೇಶ್​ ಟೂರ್ನಿಯ 12ನೇ ಸುತ್ತಿನಲ್ಲಿ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಇದರೊಂದಿಗೆ ಹಾಲಿ ವಿಶ್ವ ಚೆಸ್​ ಚಾಂಪಿಯನ್​ಗೆ ಸವಾಲೊಡ್ಡುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಟೂರ್ನಿಯ ಅಗ್ರಸ್ಥಾನಕ್ಕೆ ಮೂವರು ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದೆ. ಮತ್ತೊಂದೆಡೆ ಭಾರತದ ಇತರ ಸ್ಪರ್ಧಿಗಳಾದ ಆರ್​. ಪ್ರಜ್ಞಾನಂದ ಮತ್ತು ವಿದಿತ್​ ಗುಜರಾತಿ ರೇಸ್​ನಿಂದ ಹೊರಬಿದ್ದಿದ್ದಾರೆ.

    ಶುಕ್ರವಾರ ನಡೆದ ಪಂದ್ಯದಲ್ಲಿ 17 ವರ್ಷದ ಗುಕೇಶ್​, ಅಜರ್​ಬೈಜಾನ್​ನ ನಿಜತ್​ ಅಬಾಸೊವ್​ ಎದುರು ಜಯಗಳಿಸಿ, ಅಮೆರಿಕದ ಹಿಕರು ನಕಮುರಾ, ರಷ್ಯಾದ ಇಯಾನ್​ ನೆಪೊಮ್ನಿಯಾಚಿ ಅವರೊಂದಿಗೆ 7.5 ಅಂಕ ಕಲೆಹಾಕಿ ಜಂಟಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಇನ್ನೊಂದು ಮುಖಾಮುಖಿಯಲ್ಲಿ ಪ್ರಜ್ಞಾನಂದ, ಇಯಾನ್​ ನೆಪೊಮ್ನಿಯಾಚಿ ವಿರುದ್ಧ ಡ್ರಾ ಸಾಧಿಸಿದ್ದು, ಆರು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಐದು ಅಂಕ ಹೊಂದಿರುವ ವಿದಿತ್​ ಗುಜರಾತಿ ನಂತರದ ಸ್ಥಾನದಲ್ಲಿದ್ದಾರೆ. ಮಹಿಳಾ ವಿಭಾಗದಲ್ಲಿ ಭಾರತದ ಕೊನೆರು ಹಂಪಿ ರಷ್ಯಾದ ಅಲೆಕ್ಸಾಂಡ್ರಾ ಗೊರಿಯಾಚ್ಕಿನಾ ವಿರುದ್ಧ ಡ್ರಾಗಳಿಸಿದರೆ, ಆರ್​. ವೈಶಾಲಿ ಯೂಕ್ರೇನ್​ನ ಅನ್ನಾ ಮುಜಿಚುಕ್​ ವಿರುದ್ಧ ಸತತ ಎರಡನೇ ಗೆಲುವು ಸಾಧಿಸಿದರು. ಕೊನೆರು ಹಂಪಿ ಆರು ಪಾಯಿಂಟ್​ನೊಂದಿಗೆ ಜಂಟಿ ಮೂರನೇ ಸ್ಥಾನ, ವೈಶಾಲಿ 5.5 ಅಂಕಗಳಿಸಿ ಆರನೇ ಸ್ಥಾನ ಪಡೆದಿದ್ದಾರೆ.

    ಡಿಡೇಟ್​ ಟೂರ್ನಿಯ ವಿಜೇತರು 43 ಲಕ್ಷ ರೂ. ಬಹುಮಾನ ಪಡೆಯಲಿದ್ದರೆ, 2ನೇ ಸ್ಥಾನ ಪಡೆದವರಿಗೆ 32 ಲಕ್ಷ ರೂ. ಮತ್ತು 3ನೇ ಸ್ಥಾನ ಪಡೆದವರಿಗೆ 21 ಲಕ್ಷ ರೂ. ಬಹುಮಾನ ನೀಡಲಾಗುವುದು. ಜತೆಗೆ ಟೂರ್ನಿಯಲ್ಲಿ ಆಟಗಾರರು ಗಳಿಸುವ ಪ್ರತಿ 0.5 ಅಂಕಗಳಿಗೆ ತಲಾ 3 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಪುರುಷರ ವಿಭಾಗದ ವಿಜೇತರು ವರ್ಷಾಂತ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್​ ಚೀನಾದ ಡಿಂಗ್​ ಲಿರೆನ್​ಗೆ ಸವಾಲೊಡ್ಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts