More

    ಅಲುಗಾಡುತ್ತಿದೆಯಾ ಬಿಜೆಪಿ ಬುಡ ?

    ಮಡಿಕೇರಿ:

    ಕೊಡಗಿನಲ್ಲಿ ಏಕಸ್ವಾಮ್ಯ ಮೆರೆದಿದ್ದ ಬಿಜೆಪಿಯ ಬುಡ ಈಗ ಸಡಿಲವಾಗುತ್ತಿದೆಯಾ ಎನ್ನುವ ಅನುಮಾನ ಜನ ಸಾಮಾನ್ಯರನ್ನು ಕಾಡುತ್ತಿದೆ. ಈ ಲೋಕಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ಗೆ ಹೋಲಿಸಿದರೆ ಜಿಲ್ಲೆಯಲ್ಲಿ ದುರ್ಬಲ ಸಂಘಟನೆ ಹೊಂದಿರುವ ಜೆಡಿಎಸ್ ಬಲವನ್ನು ನೆಚ್ಚಿಕೊಂಡAತೆ ವರ್ತಿಸುತ್ತಿರುವ ಬಿಜೆಪಿ ನಾಯಕರ ವರ್ತನೆ ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೂ ಕಾರಣವಾಗಿದೆ. ಮತ್ತೊಂದು ಕಡೆ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಜಾತ್ಯತೀತ ನಿಲುವಿನ ನಾಯಕರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ.

    2023ರ ವಿಧಾನಸಭಾ ಚುನಾವಣೆ ತನಕ ಕೊಡಗು ಬಿಜೆಪಿಯ ಭದ್ರಕೋಟೆ ಎಂದೇ ಗುರುತಿಸಿಕೊಂಡಿತ್ತು. ಸತತ 5 ಮತ್ತು 4 ಬಾರಿ ಗೆಲುವು ಸಾಧಿಸಿದ್ದ ಪಕ್ಷದ ಇಬ್ಬರು ಶಾಸಕರು ಜಿಲ್ಲೆಯಲ್ಲಿದ್ದರು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳ ಆಡಳಿತವೂ ಬಿಜೆಪಿ ಕೈಯಲ್ಲಿ ಇತ್ತು. ಆದರೆ ಕಳೆದ ವರ್ಷದ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಿಂದ ಎ.ಎಸ್. ಪೊನ್ನಣ್ಣ ಮತ್ತು ಮಡಿಕೇರಿ ಕ್ಷೇತ್ರದಿಂದ ಡಾ. ಮಂತರ್ ಗೌಡ ಆಯ್ಕೆ ಆಗುತ್ತಿದ್ದಂತೆಯೇ ಕೊಡಗಿನಲ್ಲಿ ತಮ್ಮದೇ ಹವಾ ಎನ್ನುವ ಭ್ರಮೆಯಿಂದ ಬಿಜೆಪಿಗರು ಹೊರಬರಬೇಕಾಯಿತು. ಕಾಂಗ್ರೆಸ್‌ನ ಇಬ್ಬರು ಶಾಸಕರು ಅಂದು ಕೊಟ್ಟಿರುವ ಶಾಕ್‌ನಿಂದ ಬಿಜೆಪಿ ಕಾರ್ಯಕರ್ತರು ಇರಲಿ ನಾಯಕರು ಕೂಡ ಹೊರಬರಲು ಪ್ರಯತ್ನ ನಡೆಸುತ್ತಲೇ ಇದ್ದಾರೆ.

    ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬಲು ಈ ಲೋಕಸಭಾ ಚುನಾವಣೆಯನ್ನು ಬಳಸಿಕೊಳ್ಳುವ ಅವಕಾಶ ಬಿಜೆಪಿ ನಾಯಕರ ಮುಂದೆ ಇತ್ತು. ಆದರೆ ಇದರ ಸದ್ಬಳಕೆ ಆಗುತ್ತಿರುವಂತೆ ಕಾಣುತ್ತಿಲ್ಲ.
    ಕೆಲವು ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರುವ ವಿದ್ಯಮಾನಗಳು ದಿನನಿತ್ಯ ವರದಿಯಾಗುತ್ತಿದೆ. ಹೀಗೆ ಅನ್ಯ ಪಕ್ಷದ ಕಡೆಗೆ ಹೋಗುವವರನ್ನು ತಡೆಯುವ ಕನಿಷ್ಠ ಪ್ರಯತ್ನವೂ ಮುಖಂಡರಿAದ ನಡೆಯುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಾಯಕರು. ಪ್ರಚಾರ ಕಾರ್ಯದಲ್ಲೂ ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿ ತೀರಾ ಮಂಕಾಗಿರುವAತೆ ಕಂಡುಬರುತ್ತಿದೆ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿದೆ.

    ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಸಂಘಟನೆ ಜಿಲ್ಲೆಯ ಗ್ರಾಮೀಣ ಮಟ್ಟದಲ್ಲೂ ಸದೃಢವಾಗಿದೆ. ಕಾರ್ಯಕರ್ತರಲ್ಲಿ ಹುರಿದುಂಬಿಸುವ ಕೆಲಸ ಮಾಡಿದರೆ ಸದೃಢ ಸಂಘಟನೆಯ ಪ್ರಯೋಜನ ಪಕ್ಷಕ್ಕೆ ಸಿಗಬಹುದು ಎನ್ನುವುದು ಹೆಸರು ಹೇಳಲು ಇಚ್ಛಿಸದ ಹಿರಿಯ ಕಾರ್ಯಕರ್ತರ ಅಭಿಪ್ರಾಯ. ಈ ಮಧ್ಯೆ ಈ ಲೋಕಸಭಾ ಚುನಾವಣೆಗೆ ರಾಷ್ಟಿçÃಯ ಮಟ್ಟದಲ್ಲಿ ಜೆಡಿಎಸ್ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿAದ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಬಿಜೆಪಿ ನಾಯಕರು ಮಣೆ ಹಾಕುತ್ತಿರುವುದು ಕೂಡ ಕಮಲ ಪಾಳೆಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

    ಬಿಜೆಪಿಗೆ ಹೋಲಿಸಿದರೆ ಜೆಡಿಎಸ್ ಸಂಘಟನೆ ಜಿಲ್ಲೆಯಲ್ಲಿ ಏನೇನೂ ಇಲ್ಲ. ಆದರೂ ‘ಜೆಡಿಎಸ್ ಕೈ ಜೋಡಿಸಿರುವುದರಿಂದ ನಮ್ಮ ಪಕ್ಷಕ್ಕೆ ಆನೆ ಬಲ ಬಂದAತಾಗಿದೆ’ ಎನ್ನುವ ಬಿಜೆಪಿ ನಾಯಕರ ಹೇಳಿಕೆಗಳು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಜೆಡಿಎಸ್ ಜತೆಗಿನ ಮೈತ್ರಿ ಸಮರ್ಥನೆ ಬರದಲ್ಲಿ ಬಿಜೆಪಿಯ ಕೆಲ ನಾಯಕರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಹೊಗಳುತ್ತಿರುವುದರಿಂದ ಇರಿಸುಮುರಿಸು ಎದುರಿಸುವಂತಾಗಿದೆ ಎನ್ನುವ ಕಾರ್ಯಕರ್ತರು, ‘2018ರ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕುಮಾರಸ್ವಾಮಿ, ಸಾ.ರಾ. ಮಹೇಶ್ ಕೊಡುಗೆಯನ್ನು ಮಾತ್ರ ಸ್ಮರಿಸುತ್ತಿದ್ದಾರೆ. ಹಾಗಾದರೆ ನಮ್ಮ ಅಂದಿನ ಶಾಸಕರು ಏನೂ ಮಾಡಲೇ ಇಲ್ವಾ ?’ ಎಂದು ಪ್ರಶ್ನಿಸುತ್ತಿದ್ದಾರೆ.

    ವಿಭಿನ್ನ ಸಿದ್ಧಾಂತಗಳನ್ನು ನಂಬಿಕೊAಡಿರುವ ಎರಡು ಪಕ್ಷಗಳ ಮಧ್ಯೆ ಆಗಿರುವ ಮೈತ್ರಿ ಕಾರ್ಯಕರ್ತರಲ್ಲೂ ಗೊಂದಲಕ್ಕೆ ಕಾರಣವಾಗಿದೆ. ಜಾತ್ಯತೀತ ನಿಲುವು ಹೊಂದಿದ್ದು, ಜೆಡಿಎಸ್‌ನಲ್ಲಿ ಗುರುತಿಸಿಕೊಂಡು ಕೆಲಸ ಮಾಡುತ್ತಿದ್ದವರು ತಾವು ‘ಕೋಮುವಾದಿ’ ಎಂದು ಕರೆಯುತ್ತಿದ್ದ ಪಕ್ಷದ ಜತೆಗೆ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಈ ಮೈತ್ರಿ ಜೆಡಿಎಸ್ ತಳಮಟ್ಟದ ಸಂಘಟನೆ ಮೇಲೆಯೇ ನೇರವಾಗಿ ಪರಿಣಾಮ ಬೀರುತ್ತಿದೆ. ಮಡಿಕೇರಿ ಸೇರಿದಂತೆ ವಿವಿಧೆಡೆ ಅಸಮಾಧಾನಿರತ ಜೆಡಿಎಸ್ ಕಾರ್ಯಕರ್ತರು, ನಾಯಕರು ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ. ಕೆಲವರು ಒಂದು ಹೆಜ್ಜೆ ಹೊರಗೆ ಇಟ್ಟಿದ್ದಾರೆ. ಮತ್ತೆ ಕೆಲವರು ಈ ಚುನಾವಣೆ ಮಟ್ಟಿಗೆ ತಟಸ್ಥವಾಗಿ ಉಳಿಯಲು ನಿರ್ಧರಿಸಿದ್ದಾರೆ.

    ಬಿಜೆಪಿ ಜತೆಗೆ ಜೆಡಿಎಸ್ ಕೈ ಜೋಡಿಸಿರುವುದರಿಂದ ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಆನೆ ಬಲ ಬಂದAತಾಗಿದೆ. ದೇಶದ ಭದ್ರತೆಗೋಸ್ಕರ ಬಿಜೆಪಿಗೆ ಜೆಡಿಎಸ್ ಬೆಂಬಲ ಕೊಟ್ಟಿದೆ. ಪ್ರಧಾನಿಯಾಗಿ ದೇವೇಗೌಡ, ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಾ.ರಾ. ಮಹೇಶ್ ಮಾಡಿರುವ ಕೆಲಸಗಳನ್ನು ಜನತೆ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಜೆಡಿಎಸ್ ಜತೆ ಉತ್ತಮ ಸಂಬAಧ ಇರುವುದರಿಂದ ನಮ್ಮ ಅಭ್ಯರ್ಥಿಗೆ ಜಿಲ್ಲೆಯಿಂದ 1.5 ಲಕ್ಷ ಲೀಡ್ ಕೊಡಲಾಗುವುದು.
    ಎಂ.ಪಿ. ಸುನಿಲ್ ಸುಬ್ರಮಣಿ, ಮಾಜಿ ವಿಧಾನ ಪರಿಷತ್ತು ಸದಸ್ಯ

    ಬಿಜೆಪಿ ಮತ್ತು ಜೆಡಿಎಸ್ ನಾಯಕರು ಜಿಲ್ಲೆಯಲ್ಲಿ ಜೋಡೆತ್ತುಗಳ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಮತ್ತು ಪ್ರಧಾನಿ ನರೇಂದ್ರ ಮೋದಿ ಜಂಟಿ ನಾಯಕತ್ವದಲ್ಲಿ ಈ ಚುನಾವಣೆ ಎದುರಿಸಲಾಗುತ್ತಿದೆ. ಕೊಡಗಿನಲ್ಲಿ 2018ರ ಜಲಪ್ರಳಯ ಸಂದರ್ಭ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಕೊಡಗಿಗೆ 7 ಬಾರಿ ಭೇಟಿ ಕೊಟ್ಟಿದ್ದರು. ಸಂತ್ರಸ್ತರಿಗಾಗಿ ಉತ್ತಮ ಗುಣಮಟ್ಟದ ಮನೆ ನಿರ್ಮಿಸಿಕೊಟ್ಟಿದ್ದರು. ಅಂದು ಉಸ್ತುವಾರಿ ಸಚಿವರಾಗಿದ್ದ ಸಾ.ರಾ. ಮಹೇಶ್ ಕೊಡುಗೆಯೂ ಕಡಿಮೆ ಏನಲ್ಲ. ಪೊನ್ನಂಪೇಟೆ ಮತ್ತು ಕುಶಾಲನಗರ ತಾಲೂಕು ಮಂಜೂರು ಮಾಡಿದ್ದು ಕೂಡ ಕುಮಾರಸ್ವಾಮಿ. ಇವೆಲ್ಲಾ ಈ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗೆ ಪೂರಕವಾಗಲಿದೆ.
    ಸಿ.ಎಲ್. ವಿಶ್ವ, ಅಧ್ಯಕ್ಷ, ಜೆಡಿಎಸ್ ಯುವ ಘಟಕ, ಕೊಡಗು

    ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾತ್ರ ನಾನು ರಾಜೀನಾಮೆ ಕೊಟ್ಟಿದ್ದೇನೆ. ಆದರೆ ಪಕ್ಷದಲ್ಲಿ ಮುಂದುವರಿದಿದ್ದೇನೆ. ಪಕ್ಷ ಸೇರುವಂತೆ ಕಾಂಗ್ರೆಸ್‌ನವರೇ ನನ್ನ ಮನೆ ಬಾಗಿಲಿಗೆ ಬಂದಿದ್ದರು. ನಾನು ಕಾಂಗ್ರೆಸ್‌ಗೆ ಹೋಗುವುದಿಲ್ಲ. ಆ ಬಗ್ಗೆ ಯೋಚನೆಯನ್ನೂ ಮಾಡಿಲ್ಲ. ಸ್ನೇಹಿತರು, ಬೆಂಬಲಿಗರ ಇಚ್ಛೆಯಂತೆ ಈ ಚುನಾವಣೆಗೆ ತಟಸ್ಥವಾಗಿ ಇರುತ್ತೇನೆ. ಮುಂದಿನ ನಿರ್ಧಾರ ಸದ್ಯದಲ್ಲೇ ಪ್ರಕಟಿಸುತ್ತೇನೆ.
    ಕೆ.ಎಂ. ಗಣೇಶ್, ಜಿಡಿಎಸ್ ಮಾಜಿ ಜಿಲ್ಲಾಧ್ಯಕ್ಷ

    ಕೊಡಗು ಜೆಡಿಎಸ್ ಕೆಲವೇ ವ್ಯಕ್ತಿಗಳ ಕೈಯಲ್ಲಿ ನಲುಗುತ್ತಿದೆ. ನಮ್ಮಂಥ ಹಿರಿಯರನ್ನು ಕಡೆಗಣಿಸಿ ಸಭೆ ನಡೆಸಲಾಗುತ್ತಿದೆ. ಜೆಡಿಎಸ್‌ನಲ್ಲಿ ಇರಬೇಕೋ ಬೇಡವೋ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಾಗುವುದು. ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಈಗಾಗಲೇ ಆಹ್ವಾನ ಇದೆ. ಪಕ್ಷದ ಹೊಂದಾಣಿಕೆ ಕೊರತೆಯಿಂದ ಬೇಸತ್ತು ತಟಸ್ಥವಾಗಿ ಉಳಿಯಲು ನಿರ್ಧಾರ ಮಾಡಿದ್ದೇನೆ. ವಿಷಯವನ್ನು ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಗಮನಕ್ಕೆ ತರಲಾಗುವುದು.
    ಮನ್ಸೂರ್ ಅಲಿ, ಜಿಲ್ಲಾ ಜೆಡಿಎಸ್ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts