More

    ‘ಫೇಸ್​ಬುಕ್​ ಶಾಪ್ಸ್​’ನಲ್ಲಿ Buy ಗೆ ಮಾರ್ಪಾಡಾಗುತ್ತೆ Like; ಆನ್​ಲೈನ್​ ಶಾಪಿಂಗ್​ನಲ್ಲಿ ಅಮೆಜಾನ್​ ವಿರುದ್ಧ ಸೆಣಸು

    ವಾಷಿಂಗ್ಟನ್​: ವಾಣಿಜ್ಯ ವಹಿವಾಟಿಗೆ ಪ್ರಸ್ತುತ ಆನ್​ಲೈನ್​ ವೇದಿಕೆ ಅತಿ ಮುಖ್ಯ ಎಂಬುದು ಸಾಬೀತಾಗಿರುವ ಅಂಶ. ಹೀಗಾಗಿ ಹೆಚ್ಚು ಹೆಚ್ಚು ಕಂಪನಿಗಳು ಇ-ಕಾಮರ್ಸ್​ಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಇದೀಗ ಫೇಸ್​ಬುಕ್​ ಕೂಡ ಇದರತ್ತ ಗಮನ ಹರಿಸಿದೆ ಎಂಬುದು ಇನ್ನಿಲ್ಲದ ಕುತೂಹಲಕ್ಕೆ ಕಾರಣವಾಗಿದೆ.

    ಹೌದು.. ಫೇಸ್​ಬುಕ್​ ಶಾಪ್ಸ್​​​ ಓಪನ್​ ಆಗಲಿದೆ. ನಮ್ಮ ‘ಲೈಕ್​’ಗಳನ್ನು buyಗೆ ಮಾರ್ಪಾಡಿಸಲು ಕಂಪನಿ ಯೋಜನೆ ರೂಪಿಸಿದೆ. ಇ-ಕಾಮರ್ಸ್​ನ ದೈತ್ಯ ಕಂಪನಿ ಅಮೆಜಾನ್​ಗೆ ಟಕ್ಕರ್​ ಕೊಡಲು ಎಲ್ಲ ರೀತಿಯಿಂದಲೂ ಸಜ್ಜಾಗುತ್ತಿದೆ.

    ಇದನ್ನೂ ಓದಿ; ರಸ್ತೆಯಲ್ಲಿ ಸಿಕ್ಕ 75 ಲಕ್ಷ ರೂ. ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ ದಂಪತಿ..! 

    ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಬಳಕೆದಾರರನ್ನೇ ಗುರಿಯಾಗಿಸಿಕೊಂಡು ವಾಣಿಜ್ಯ ವಹಿವಾಟಿಗೆ ಕಂಪನಿ ಮುಂದಾಗಿದೆ. ಇದಷ್ಟೇ ಅಲ್ಲ, ವಾಟ್ಸ್​ಆ್ಯಪ್​ ಹಾಗೂ ಮೆಸೆಂಜರ್​ನಲ್ಲೂ ಕೂಡ ಇದನ್ನು ಪರಿಚಯಿಸಲಿದೆ. ಜಾಗತಿಕವಾಗಿ ಇದರ ಸ್ವರೂಪ ಹೇಗಿರಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

    ಫೇಸ್​ಬುಕ್​ ಜಗತ್ತಿನಲ್ಲಿಯೇ ಅತಿದೊಡ್ಡ ಸಾಮಾಜಿಕ ಜಾಲತಾಣದ ಆ್ಯಪ್​ ಆಗಿದೆ. ಇದಲ್ಲದೇ. ಇನ್​ಸ್ಟಾಗ್ರಾಂ, ವಾಟ್ಸ್​ಆ್ಯಪ್​, ಮೆಸೆಂಜರ್​ ಮೊದಲಾದ ಆ್ಯಪ್​ಗಳನ್ನು ತನ್ನ ಬತ್ತಳಿಕೆಯಲ್ಲಿ ಹೊಂದಿದೆ. ಇವೆಲ್ಲವುಗಳನ್ನು ಬಳಸಿಕೊಂಡು ಬಳಕೆದಾರರಿಗೆ ಆನ್​ಲೈನ್ ಶಾಪಿಂಗ್​ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿದೆ. ಇದಕ್ಕಾಗಿ ‘ಫೇಸ್​ಬುಕ್​ ಶಾಪ್ಸ್​’ ತೆರೆಯಲಿದೆ. ಇಲ್ಲಿ ಯಾವುದೇ ವಸ್ತುವನ್ನು ಮಾರಾಟ ಮಾಡಲು ವಹಿವಾಟುದಾರರಿಗೆ ಅವಕಾಶ ಕಲ್ಪಿಸಲಿದೆ. ಇದು ಅಕ್ಷರಶಃ ಅಮೆಜಾನ್​ ವರ್ಸ್​ಸ್​ ಫೇಸ್​ಬುಕ್​ ಆಗಿರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

    ಇದನ್ನೂ ಓದಿ; ಈ ವರ್ಷ ನರ್ಸರಿ ಸ್ಕೂಲ್​ ತೆರೆಯಲ್ವಾ…? ಆಡ್ಮಿಷನ್​ ಮಾಡಿಸ್ಬೇಕೋ ಬೇಡ್ವೋ? 

    ಸದ್ಯ ಸಣ್ಣ ಉದ್ದಿಮೆದಾರರು ಸಂಕಷ್ಟದಲ್ಲಿದ್ದಾರೆ. ತಮ್ಮ ವಹಿವಾಟುಗಳನ್ನು ಮುಚ್ಚುತ್ತಿದ್ದಾರೆ. ಹೆಚ್ಚಿನವರು ತಮ್ಮ ವಹಿವಾಟುಗಳನ್ನು ಆನ್​ಲೈನ್​ಗೆ ತರಲು ಬಯಸುತ್ತಿದ್ದಾರೆ. ಶಾಪಿಂಗ್​ಅನ್ನು ಸರಾಗವಾಗಿಸಿ ಸಣ್ಣ ಉದ್ದಿಮೆದಾರರಿಂದ ಹಿಡಿದು ಜಾಗತಿಕ ಬ್ರ್ಯಾಂಡ್​ವರೆಗಿನ ಎಲ್ಲ ಉತ್ಪನ್ನಗಳನ್ನು ನಮ್ಮ ಆ್ಯಪ್​ಗಳ ಮೂಲಕ ಗ್ರಾಹಕರ ಜತೆ ಸಂಪರ್ಕ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಫೇಸ್​ಬುಕ್​ ತಿಳಿಸಿದೆ.

    ಈಗಾಗಲೇ ರಿಲಯನ್ಸ್​ ಜಿಯೋ ಫ್ಲಾಟ್​ಫಾರ್ಮ್​ನಲ್ಲಿ ಫೇಸ್​ಬುಕ್​ 43 ಸಾವಿರ ಕೋಟಿ ರೂ. ಗೂ ಅಧಿಕ ಹೂಡಿಕೆ ಮಾಡಿದೆ. ಇದು ಕಂಪನಿ ವಾಣಿಜ್ಯ ವಹಿವಾಟಿನ ವಿಸ್ತರಣೆ ಭಾಗವಾಗಿದೆ. ಕೋವಿಡ್​ ಕಾರಣದಿಂದಾಗಿ ಜಾಹೀರಾತು ಆದಾಯದಲ್ಲಿ ಭಾರಿ ಇಳಿಕೆಯಾಗಿರುವುದರಿಂದ ಇತರ ಅವಕಾಶಗಳತ್ತ ಕಂಪನಿ ಕಣ್ಣುಹಾಕಿದೆ.

    ಬೇಬಿ ಪೌಡರ್​ನಿಂದ ಕ್ಯಾನ್ಸರ್​ ವಿವಾದ; ಅಮೆರಿಕ, ಕೆನಡಾದಲ್ಲಿ ಮಾರಾಟ ನಿಲ್ಲಿಸಿದ ಜಾನ್​ಸನ್​ ಆ್ಯಂಡ್​ ಜಾನ್​ಸನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts