More

    ನೀರಾವರಿ ಅನುಷ್ಠಾನಕ್ಕೆ ಕ್ರಮ

    ನಾಗರಮುನ್ನೋಳಿ: ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಲಾಗುವುದು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದ್ದಾರೆ.

    ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಡಿ 50 ಲಕ್ಷ ರೂ.ವೆಚ್ಚದಲ್ಲಿ ರಾಯಬಾಗ-ಹುಕ್ಕೇರಿ ಮುಖ್ಯ ರಸ್ತೆಯಿಂದ ಇಟ್ನಾಳ ಕೂಡುವ ರಸ್ತೆ ಅಭಿವೃದ್ಧಿ ಹಾಗೂ ನೀರಾವರಿ ಇಲಾಖೆಯಡಿ 50 ಲಕ್ಷ ರೂ.ವೆಚ್ಚದಲ್ಲಿ ಮಕ್ಕಾನಕೋಡಿಯಿಂದ ಜೋಡಕುರಳಿ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಯಬಾಗ ಕ್ಷೇತ್ರವನ್ನು ಮಡ್ಡಿ ಮುಕ್ತ ಪ್ರದೇಶವಾಗಿಸಲು ಕರಗಾಂವ, ಹನುಮಾನ, ಬೆಂಢವಾಡ ಏತ ನೀರಾವರಿ ಯೋಜನೆಗಳಿಗೆ ಮುಂಬರುವ ಬಜೆಟ್‌ನಲ್ಲಿ ಅನುಮೋದನೆ ಪಡೆಯಲಾಗುವುದು. ಮೂರೂ ಯೋಜನೆಗಳ ಸರ್ವೇ ಕಾರ್ಯ ಮುಗಿದಿದ್ದು, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಜತೆಗೂಡಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

    ಜಿಪಂ ಸದಸ್ಯ ಪವನ ಕತ್ತಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಾನು ಸ್ಪರ‌್ಸುವ ಕುರಿತು ಸಚಿವ ಉಮೇಶ ಕತ್ತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹಾಗೂ ಶಾಸಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುವೆ ಎಂದರು. ಹಿರಾ ಶುಗರ್ಸ್ ಸದಸ್ಯ ಸುರೇಶ ಬೆಲ್ಲದ, ಭೂ ನ್ಯಾಯ ಮಂಡಳಿ ಸದಸ್ಯ ದಾನಪ್ಪ ಕೊಟಬಾಗಿ, ಕೆಎಂಎ್ ನಿರ್ದೇಶಕ ವಿ.ಬಿ.ಈಟಿ, ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಟೋಣಪೆ, ಗುಲಾಬ ಜಮಾದರ, ರಾಜು ಕುಂಬಾರ, ಸದಾಶಿವ ಹಳಿಗಂಳಿ, ಅಣ್ಣಾಸಾಹೇಬ ಖೇಮಲಾಪುರೆ, ಎಂ.ಎಸ್.ಈಟಿ, ಡಿ.ಆರ್.ಕೋಟ್ಯಪಗೋಳ, ಭೀಮಪ್ಪ ಖಗಣ್ಣವರ, ನಿಜಾಮ್ ೆಂಡಾರಿ, ಎಂ.ಬಿ.ಆಲೂರೆ, ಜೋತ್ಯಪ್ಪ ಖಗಣ್ಣವರ, ಪ್ರಕಾಶ ಮನಗೂಳಿ, ಲಾಡಜಿ ಮುಲ್ತಾನಿ, ಅರುಣ ಮರ‌್ಯಾಯಿ, ಯಲ್ಲಪ್ಪ ಕಟ್ಟಿಕಾರ, ಸಚಿನ ಕಟ್ಟಿಕಾರ, ಸಿದ್ದು ಈಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts