More

    ಕ್ಷಿಪಣಿಗೆ 19 ಯೋಧರ ದೇಹ ಛಿದ್ರ- ಇದು ನಮ್ಮದೇ ತಪ್ಪು ಎಂದು ಇರಾನ್​ ಬಾರಿಬಾರಿ ಹೇಳುತ್ತಿರುವುದೇಕೆ?

    ಟೆಹರಾನ್: ನೌಕಾ ಸಮರಾಭ್ಯಸದಲ್ಲಿ ನಿರತವಾಗಿದ್ದ ಯುದ್ಧ ಹಡಗಿಗೆ ಮತ್ತೊಂದು ಹಡಗಿನಿಂದ ಹಾರಿಬಂದ ಕ್ಷಿಪಣಿ ಬಡಿದು 19 ಯೋಧರು ಸ್ಥಳದಲ್ಲಿಯೇ ಛಿದ್ರವಾಗಿರುವ ಘಟನೆ ಇರಾನ್​ನಲ್ಲಿ ನಡೆದಿದೆ.

    ಇರಾನ್‌ನ ದಕ್ಷಿಣ ಕರಾವಳಿಯ ಬಂಡಾರ್-ಎ-ಜಾಸ್ಕ್ ಬಳಿ ನೌಕಾಪಡೆಯ ಯುದ್ಧ ಹಡಗುಗಳು ಸಮರಾಭ್ಯಾಸದಲ್ಲಿ ನಿರತವಾಗಿದ್ದಾಗ ಈ ಘಟನೆ ಸಂಭವಿಸಿದೆ, ಅನೇಕ ಹಡಗುಗಳು ಸಮರಾಭ್ಯಾಸದಲ್ಲಿ ನಿರತವಾಗಿದ್ದವು. ಆದರೆ ಅಚಾನಕ್​ ಆಗಿ ಒಂದು ಹಡಗಿನಿಂದ ಸಿಡಿದ ಕ್ಷಿಪಣಿ ಸಮೀಪವೇ ಇದ್ದ ಇನ್ನೊಂದು ಹಡಗಿಗೆ ಬಡಿದು ಈ ಅನಾಹುತ ಸಂಭವಿಸಿದೆ.

    ಇದನ್ನೂ ಓದಿ: ಅರೆ ಹೊಟ್ಟೆ, ಬಗಲಲ್ಲಿ ಪುಟ್ಟ ಮಕ್ಕಳು… 1,100 ಕಿ.ಮೀ ನಡೆದ ದಂಪತಿ… ಮುಂದೆ?

    ಕ್ಷಿಪಣಿ ಬಡಿದ ಕೂಡಲೇ ಹಡಗು ಸ್ಫೋಟಿಸಿದೆ. ಈ ಹಡಗಿನಲ್ಲಿದ್ದ ಅಷ್ಟೋ ಯೋಧರು ಮೃತಪಟ್ಟಿದ್ದಾರೆ. ಸಿಬ್ಬಂದಿಯ ಅಚಾತುರ್ಯದಿಂದ ಕ್ಷಿಪಣಿ ಹಾರಿಸಲಾಗಿದ್ದು, ಅದು ತುಸು ದೂರದಲ್ಲಿ ಅಭ್ಯಾಸದಲ್ಲಿ ನಿರತವಾಗಿದ್ದ ಕೊನಾರಕ್ ಹಡಗಿಗೆ ಬಡಿದು ಸ್ಫೋಟಗೊಂಡಿದೆ ಎಂದು ಇರಾನ್ ನೌಕಾಪಡೆ ವಕ್ತಾರ ಸ್ಪಷ್ಟಪಡಿಸಿದ್ದಾರೆ.

    ತನ್ನ ಯೋಧರನ್ನು ಕಳೆದುಕೊಂಡಿರುವ ನೋವಿಗಿಂತ ಇರಾನ್​ಗೆ ಈಗ ಸ್ಪಷ್ಟನೆ ನೀಡುವುದೇ ದೊಡ್ಡ ತಲೆನೋವಾಗಿಬಿಟ್ಟಿದೆ. ಏಕೆಂದರೆ ವೈರಿ ರಾಷ್ಟ್ರ ಅಮೆರಿಕ ಕೊನಾರಕ್ ನೌಕೆಯನ್ನು ಹೊಡೆದುರುಳಿಸಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇರಾನ್-ಅಮೆರಿಕ ನಡುವೆ ತಿಕ್ಕಾಟ ನಡೆಯುತ್ತಿರುವ ಸಂದರ್ಭದಲ್ಲೇ ಈ ದುರ್ಘಟನೆ ಸಂಭವಿಸಿರುವುದರಿಂದ, ಅಮೆರಿಕವೇ ಕೊನಾರಕ್ ಯುದ್ಧ ಹಡಗನ್ನು ಹೊಡೆದುರುಳಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಇದನ್ನೂ ಓದಿ: ಸತ್ತರೂ ಚಿಂತೆಯಿಲ್ಲ, ಮಾಸ್ಕ್​ ಹಾಕದೇ ಸೇವೆ ಸಲ್ಲಿಸು ಎಂದು ವೈದ್ಯನಿಗೆ ಅಪ್ಪ ಹೇಳಿದ್ದೇಕೆ?ಇಲ್ಲಿದೆ…

    ಇದರಿಂದ ತುಂಬಾ ನೊಂದುಕೊಂಡಿರುವ ಇರಾನ್​, ಇದಕ್ಕೆ ನಮ್ಮ ನೌಕಾ ಸಿಬ್ಬಂದಿಯೇ ಕಾರಣ ವಿನಾ ಅಮೆರಿಕ ಅಲ್ಲ, ಯಾರೂ ದಯವಿಟ್ಟು ವದಂತಿಗಳನ್ನು ನಂಬಬೇಡಿ ಎನ್ನುತ್ತಿದೆ. ಆದರೂ ಸರ್ಕಾರ ಸುಳ್ಳು ಹೇಳುತ್ತಿದ್ದು ಅಮೆರಿಕವೇ ಈ ಕೃತ್ಯ ಎಸಗಿದೆ ಎಂಬ ಮಾತೇ ಎಲ್ಲೆಡೆ ಕೇಳಿಬರುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts