More

    ಐಪಿಎಸ್​ ರೂಪಾ-ಐಎಎಸ್​ ರೋಹಿಣಿ ಜಟಾಪಟಿ ಮತ್ತೊಂದು ಹಂತಕ್ಕೆ: ಇಲ್ಲಿದೆ ಇಂದಿನ ಲೇಟೆಸ್ಟ್ ಬೆಳವಣಿಗೆ

    ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಇದೀಗ ನ್ಯಾಯಾಲಯದ ಅಂಗಳ ತಲುಪಿದೆ. ತಮ್ಮ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಡಿ. ರೂಪಾ ಅವರಿಗೆ ಹಾಗೂ ರೂಪಾ ಹೇಳಿಕೆಗಳನ್ನು ಆಧರಿಸಿ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಪ್ರತಿಬಂಧಕಾದೇಶ ಹೊರಡಿಸಬೇಕೆಂದು ಕೋರಿ ರೋಹಿಣಿ ಸಿಂಧೂರಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ಅಸಲು ದಾವೆ ಹೂಡಿದ್ದಾರೆ.

    ದಾವೆಯನ್ನು ಬುಧವಾರ ವಿಚಾರಣೆ ನಡೆಸಿದ ನಗರದ 73ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ಎಸ್. ಗಂಗಣ್ಣವರ್ ಅವರ ಪೀಠ, ರೋಹಿಣಿ ಸಿಂಧೂರಿ ಪರ ವಕೀಲರ ವಾದ ಆಲಿಸಿ, ಆದೇಶವನ್ನು ಗುರುವಾರಕ್ಕೆ (ಫೆ.23) ಕಾಯ್ದಿರಿಸಿದೆ.

    ರೋಹಿಣಿ ಆಕ್ಷೇಪವೇನು?

    ರೋಹಿಣಿ ಸಿಂಧೂರಿ ಪರ ವಕೀಲರು ವಾದ ಮಂಡಿಸಿ, ಸೈಬರ್ ವಿಭಾಗದ ಮುಖ್ಯಸ್ಥರಾಗಿದ್ದ ಐಪಿಎಸ್ ಅಧಿಕಾರಿ ರೂಪಾ, ರೋಹಿಣಿ ಅವರ ಮೊಬೈಲ್‌ನಲ್ಲಿನ ಮಾಹಿತಿ ಪಡೆದುಕೊಂಡಿದ್ದಾರೆ. ಇದು ಕಾನೂನುಬಾಹಿರ ಕ್ರಮವಾಗಿದ್ದು, ರೂಪಾ ಅವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಸಾಧ್ಯತೆ ಇದೆ. ಸಾಲದೆಂಬಂತೆ ರೋಹಿಣಿ ಅವರ ಖಾಸಗಿ ಫೋಟೋ, ಮೊಬೈಲ್​ಫೋನ್​ ನಂಬರ್ ಅನ್ನು ರೂಪಾ ತಮ್ಮ ಫೇಸುಬುಕ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ ಎಂದು ದೂರಿದರು.

    ಇದನ್ನೂ ಓದಿ: ವಿಜ್ಞಾನಿಗಳಿಂದಷ್ಟೇ ಅಲ್ಲ, ಕಾಲಜ್ಞಾನದಲ್ಲೂ ಭೂಕಂಪದ ಎಚ್ಚರಿಕೆ; ದೇಶಕ್ಕೆ ಕಾದಿದ್ಯಾ ಭಾರಿ ಗಂಡಾಂತರ?

    ಅದಕ್ಕೆ ನ್ಯಾಯಾಧೀಶರು, ಈ ಕುರಿತು ರೂಪಾ ವಿರುದ್ಧ ಸೂಕ್ತ ಪ್ರಾಧಿಕಾರದಲ್ಲಿ ದೂರು ನೀಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು. ರೋಹಿಣಿ ಪರ ವಕೀಲರು ಉತ್ತರಿಸಿ, ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಲಾಗಿದೆ ಎಂದರು. ಪ್ರಕರಣದಲ್ಲಿ ದೂರು ಸಲ್ಲಿಸಲು ಮುಖ್ಯ ಕಾರ್ಯದರ್ಶಿ ಸೂಕ್ತ ಪ್ರಾಧಿಕಾರವೇ ಎಂಬ ನ್ಯಾಯಪೀಠದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ವಕೀಲರು, ನಾಗರಿಕ ಸೇವಾ ನಿಯಮಗಳ ಅನುಸಾರ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ಸೂಚನೆಯನ್ನೂ ರೂಪಾ ಪಾಲಿಸುತ್ತಿಲ್ಲ. ಸರ್ಕಾರದ ಸುತ್ತೋಲೆ ಧಿಕ್ಕರಿಸಿ ಹೇಳಿಕೆ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.

    ಇದನ್ನೂ ಓದಿ: ಕೋವಿಶೀಲ್ಡ್ ಕೊಡಬಾರದಿತ್ತು, ಭಾರತದಲ್ಲಿನ್ನು ವ್ಯಾಕ್ಸಿನ್​ ಅನಗತ್ಯ; ಲಸಿಕೆ ಅಡ್ಡಪರಿಣಾಮಗಳ ಕುರಿತು ದನಿ ಎತ್ತಿದ ಡಾಕ್ಟರ್​

    ರೋಹಿಣಿ ಅವರ ಖಾಸಗಿ ಸಂಖ್ಯೆ ಬಹಿರಂಗಪಡಿಸಿರುವುದರಿಂದ, ನೂರಾರು ಅಪರಿಚಿತರು ರೋಹಿಣಿ ಅವರಿಗೆ ಕರೆ ಮಾಡುತ್ತಿದ್ದಾರೆ. ರೂಪಾ ಅವರು ಕಾನೂನು ಚೌಕಟ್ಟು ಮೀರಿ ಹೇಳಿಕೆ ನೀಡುತ್ತಿದ್ದು, ರೋಹಿಣಿ ಅವರ ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ಆದ್ದರಿಂದ, ದಾವೆದಾರರ ವಿರುದ್ಧ ಆಕ್ಷೇಪಾರ್ಹ ಮತ್ತು ಮಾನಹಾನಿ ಹೇಳಿಕೆ ನೀಡದಂತೆ ರೂಪ ಅವರನ್ನು ನಿರ್ಬಂಧಿಸಬೇಕು. ರೂಪಾ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೂ ಪ್ರತಿಬಂಧಕಾದೇಶ ಹೊರಡಿಸಬೇಕು ಎಂದು ಕೋರಿದರು. ವಾದ ಆಲಿಸಿದ ನ್ಯಾಯಾಲಯ, ಗುರುವಾರಕ್ಕೆ ಆದೇಶ ಕಾಯ್ದಿರಿಸಿತು.

    ಬೇರೆ ಜಿಲ್ಲೆಗೆ ವರ್ಗಾವಣೆ; ಮೊಬೈಲ್​ಫೋನ್​ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಪೊಲೀಸ್ ಕಾನ್​ಸ್ಟೆಬಲ್!

    ಅಳಿಯನನ್ನೇ ಅಪಹರಿಸಿ ಮಾನಸಿಕ ಅಸ್ವಸ್ಥ ಎಂದು ಬಿಂಬಿಸಿದ ಅತ್ತೆ; ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಮತ್ತು ಕುಟುಂಬಸ್ಥರ ವಿರುದ್ಧ ಕೇಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts