More

    ಬ್ರಬೋರ್ನ್‌ನಲ್ಲಿ ಮುಂಬೈ ಇಂಡಿಯನ್ಸ್ – ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ

    ಮುಂಬೈ: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ 2020ರ ರನ್ನರ್‌ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಭಾನುವಾರದ ಮೊದಲ ಪಂದ್ಯದಲ್ಲಿ ಎದುರಾಗಲಿವೆ. ಉಭಯ ತಂಡಗಳ ಜಿದ್ದಾಜಿದ್ದಿನ ಹಣಾಹಣಿಗೆ ಬ್ರಬೋರ್ನ್ ಸ್ಟೇಡಿಯಂ ವೇದಿಕೆಯಾಗಲಿದೆ. ಭಾರತದ ಮೂರೂ ಮಾದರಿಯ ತಂಡದ ನಾಯಕ ರೋಹಿತ್ ಶರ್ಮ ಹಾಗೂ ಭವಿಷ್ಯದ ನಾಯಕ ಎಂದೇ ಗುರುತಿಸಿಕೊಂಡಿರುವ ರಿಷಭ್ ಪಂತ್ ನಡುವಿನ ಕದನ ಕುತೂಹಲ ಕೆರಳಿಸಿದೆ.

    ಕಳೆದ ಮೆಗಾ ಹರಾಜಿನ ದುಬಾರಿ ಆಟಗಾರ ಇಶಾನ್ ಕಿಶನ್ (15.25 ಕೋಟಿ ರೂ) ಮುಂಬೈ ತಂಡದ ಕೇಂದ್ರಬಿಂದುವಾಗಿದ್ದಾರೆ. ರೋಹಿತ್ ಉತ್ತರಾಧಿಕಾರಿ ಎನಿಸಿಕೊಂಡಿರುವ ಇಶಾನ್ ಕಿಶನ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಉಭಯ ತಂಡಗಳಿಗೂ ಗಾಯದ ಸಮಸ್ಯೆ ಎದುರಾಗಿದೆ. ಮುಂಬೈ ತಂಡದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬೆಂಗಳೂರಿನ ಎನ್‌ಸಿಎನಲ್ಲೇ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಡೆಲ್ಲಿ ವೇಗಿ ಅನ್ರಿಚ್ ನೋಕಿಯ ಕೂಡ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅನ್ರಿಚ್ ಕಳೆದ 6 ತಿಂಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಉಭಯ ತಂಡಗಳಲ್ಲೂ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆಗಳಿವೆ.

    ಟೀಮ್ ನ್ಯೂಸ್:
    ಮುಂಬೈ ಇಂಡಿಯನ್ಸ್: ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಜತೆಗೆ ಜೈದೇವ್ ಉನಾದ್ಕತ್ ಹೊಸ ಚೆಂಡು ಹಂಚಿಕೊಳ್ಳಲಿದ್ದಾರೆ. ಸೂರ್ಯಕುಮಾರ್ ಅನುಪಸ್ಥಿತಿಯಲ್ಲಿ ತಿಲಕ್ ವರ್ಮ ಅವಕಾಶ ಪಡೆಯಲಿದ್ದಾರೆ. ರಿಟೇನ್ ಮಾಡಿಕೊಂಡ 4 ಆಟಗಾರರ ಪೈಕಿ ಮೂವರು ಕಣಕ್ಕಿಳಿಯಲಿದ್ದಾರೆ. 19 ವಯೋಮಿತಿ ವಿಶ್ವಕಪ್‌ನಲ್ಲಿ ಅದ್ಭುತ ನಿರ್ವಹಣೆ ತೋರಿದ ದ.ಆಫ್ರಿಕಾದ ಡಿವಾಲ್ಡ್ ಬ್ರೆವಿಸ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
    ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಇಶಾನ್ ಕಿಶನ್ (ವಿಕೀ), ತಿಲಕ್ ವರ್ಮ, ಟಿಮ್ ಡೇವಿಡ್/ಡಿವಾಲ್ಡ್ ಬ್ರೆವಿಸ್, ಕೈರಾನ್ ಪೊಲ್ಲಾರ್ಡ್, ಡೇನಿಯಲ್ ಸ್ಯಾಮ್ಸ್, ಸಂಜಯ್ ಯಾದವ್, ಮಯಾಂಕ್ ಮಾರ್ಕಂಡೆ, ಜೈದೇವ್ ಉನಾದ್ಕತ್, ಜಸ್‌ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್.

    ಡೆಲ್ಲಿ ಕ್ಯಾಪಿಟಲ್ಸ್: 19 ವಯೋಮಿತಿ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಯಶ್ ಧುಲ್ ಐಪಿಎಲ್‌ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಅನುಭವಿಗೆ ಅವಕಾಶ ನೀಡಿದರೆ ರ್ಸ್ರಾಜ್ ಖಾನ್ ಅವಕಾಶ ಪಡೆಯಬಹುದು. ಅನ್ರಿಚ್ ನೋಕಿಯ ಬರುವವರೆಗೂ ಖಲೀಲ್ ಅಹ್ಮದ್, ಸಕಾರಿಯಾ, ಶಾರ್ದೂಲ್ ಠಾಕೂರ್ ಹೆಚ್ಚಿನ ಜವಾಬ್ದಾರಿ ನಿಭಾಯಿಸಬೇಕಿದೆ. ಶಾರ್ದೂಲ್, ಅಕ್ಷರ್ ಪಟೇಲ್ ಜತೆಗೂಡಿ ಫಿನಿಷರ್ ಸ್ಥಾನವನ್ನೂ ತುಂಬಬೇಕಿದೆ.
    ಸಂಭಾವ್ಯ ತಂಡ: ಟಿಮ್ ಸೀರ್ಟ್, ಪೃಥ್ವಿ ಷಾ, ಕೆಎಸ್ ಭರತ್, ರಿಷಭ್ ಪಂತ್ (ನಾಯಕ/ವಿಕೀ), ರೊವ್ಮನ್ ಪೊವೆಲ್, ಅಕ್ಷರ್ ಪಟೇಲ್, ರ್ಸ್ರಾಜ್ ಖಾನ್/ಯಶ್ ಧುಲ್, ಶಾರ್ದೂಲ್ ಠಾಕೂರ್, ಚೇತನ್ ಸಕಾರಿಯಾ, ಕುಲದೀಪ್ ಯಾದವ್, ಖಲೀಲ್ ಅಹ್ಮದ್.

    ಮುಖಾಮುಖಿ: 30, ಮುಂಬೈ: 16, ಡೆಲ್ಲಿ: 14, ಆರಂಭ: ಮಧ್ಯಾಹ್ನ 3.30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts