More

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!

    ಬೆಂಗಳೂರು: ಒಂದೂವರೆ ತಿಂಗಳ ಹಿಂದಷ್ಟೇ ಐಪಿಎಲ್ ಹಬ್ಬ ಮುಗಿದಿದ್ದು, ಇನ್ನು ಮೂರು ತಿಂಗಳಲ್ಲಿ ಮತ್ತೊಂದು ಚುಟುಕು ಕ್ರಿಕೆಟ್ ಆವೃತ್ತಿ ಎದುರಾಗಲಿದೆ. ಇದರ ನಡುವೆ ದೇಶೀಯ ಕ್ರಿಕೆಟ್‌ನಲ್ಲೂ ಟಿ20 ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. ಕರೊನಾ ಹಾವಳಿಯಿಂದ ವಿಳಂಬಗೊಂಡಿರುವ ದೇಶೀಯ ಕ್ರಿಕೆಟ್ ಋತುವಿಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಮೂಲಕ ಭಾನುವಾರ ಚಾಲನೆ ಸಿಗಲಿದೆ. ಐಪಿಎಲ್‌ನಲ್ಲಿ ಆಡಿರುವ ಹಲವು ಪ್ರಮುಖ ಆಟಗಾರರು ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಮುಂದಿನ ಆವೃತ್ತಿ ಸಿದ್ಧತೆ ಮತ್ತು ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದ ಯುವ-ಅನುಭವಿ ಆಟಗಾರರಿಗೆ ಇದು ಪ್ರಮುಖ ಸವಾಲೆನಿಸಿದೆ.

    ಸುರೇಶ್ ರೈನಾ (ಉತ್ತರ ಪ್ರದೇಶ)

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!
    ಕಳೆದ ವರ್ಷ ಧೋನಿ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಸುರೇಶ್ ರೈನಾ, ಬಳಿಕ ವೈಯಕ್ತಿಕ ಕಾರಣ ನೀಡಿ ಐಪಿಎಲ್‌ನಲ್ಲೂ ಆಡಿರಲಿಲ್ಲ. ಹೀಗಾಗಿ 34 ವರ್ಷದ ರೈನಾಗೆ ಈ ಬಾರಿಯ ದೇಶೀಯ ಟಿ20 ಟೂರ್ನಿ ಪ್ರಮುಖವೆನಿಸಿದ್ದು, ಮುಂದಿನ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್‌ಕಿಂಗ್ಸ್‌ಗೆ ಮರಳುವ ಮುನ್ನ ಹಳೆಯ ಫಾರ್ಮ್ ಪ್ರದರ್ಶಿಸಬೇಕಿದೆ.

    ಇದನ್ನೂ ಓದಿ: VIDEO | ಸ್ಟೀವನ್ ಸ್ಮಿತ್‌ರನ್ನು ರವೀಂದ್ರ ಜಡೇಜಾ ರನೌಟ್ ಮಾಡಿದ ರೀತಿಗೆ ಕ್ರಿಕೆಟ್​ ಪ್ರೇಮಿಗಳು ಫಿದಾ!

    ಇಶಾನ್ ಕಿಶನ್ (ಜಾರ್ಖಂಡ್)

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!
    ಅರಬ್ ನಾಡಿನ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಸಿಕ್ಸರ್ ಸುರಿಮಳೆ ಸುರಿಸಿ ಗಮನಸೆಳೆದಿದ್ದ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಟೂರ್ನಿಯಲ್ಲಿ ಜಾರ್ಖಂಡ್ ತಂಡದ ನಾಯಕತ್ವನ್ನೂ ವಹಿಸಲಿದ್ದು, ಮುಂಬರುವ ಇಂಗ್ಲೆಂಡ್ ವಿರುದ್ಧದ ತವರಿನ ಸೀಮಿತ ಓವರ್ ಸರಣಿಗೆ ಭಾರತ ತಂಡದ ಕದ ತಟ್ಟುವ ದೃಷ್ಟಿಯಿಂದ ಅವರಿಗೆ ಇದು ಮಹತ್ವದ ಟೂರ್ನಿಯಾಗಿದೆ.

    ಸೂರ್ಯಕುಮಾರ್ ಯಾದವ್ (ಮುಂಬೈ)

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!
    ಅನುಭವಿ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಪ್ರದರ್ಶಿಸಿದ ಪ್ರಬುದ್ಧ ಆಟದಿಂದ ಇನ್ನೇನು ಟೀಮ್ ಇಂಡಿಯಾ ಪ್ರವೇಶಿಸಿಯೇ ಬಿಟ್ಟರು ಎನ್ನುವಷ್ಟರಲ್ಲಿ ಆಸೀಸ್ ಪ್ರವಾಸದಿಂದ ಸ್ಥಾನವಂಚಿತರಾಗಿದ್ದರು. ಟೂರ್ನಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸಲಿರುವ ಅವರು, ಅದೇ ಆಟವನ್ನು ಮುಂದುವರಿಸಿದರೆ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದು.

    ಇದನ್ನೂ ಓದಿ: PHOTO | ಬೆಂಗಳೂರಿನ ಬಿಲಿಯರ್ಡ್ಸ್ ತಾರೆ ಪಂಕಜ್ ಆಡ್ವಾಣಿ ವಿವಾಹ

    ದೇವದತ್ ಪಡಿಕಲ್ (ಕರ್ನಾಟಕ)

    ಕಳೆದ ದೇಶೀಯ ಕ್ರಿಕೆಟ್‌ನಲ್ಲಿ ರನ್‌ಪ್ರವಾಹ ಹರಿಸಿದ್ದ ಕರ್ನಾಟಕದ ಯುವ ಎಡಗೈ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್, ಬಳಿಕ ಐಪಿಎಲ್‌ನಲ್ಲೂ ಆರ್‌ಸಿಬಿ ಪರ ಸ್ಟಾರ್ ಕ್ರಿಕೆಟಿಗರ ನಡುವೆ ಮಿಂಚಿದ್ದರು. ಈ ಬಾರಿ ಕರ್ನಾಟಕದ ಪ್ರಮುಖ ಬ್ಯಾಟ್ಸ್‌ಮನ್‌ಗಳ ಗೈರಿನಲ್ಲಿ ಬ್ಯಾಟಿಂಗ್ ವಿಭಾಗದ ಜವಾಬ್ದಾರಿ ನಿಭಾಯಿಸಬೇಕಿದ್ದು, ಟೀಮ್ ಇಂಡಿಯಾದ ಬಾಗಿಲು ತಟ್ಟುವ ಅವಕಾಶವೂ ಇದೆ.

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!

    ಕರುಣ್ ನಾಯರ್ (ಕರ್ನಾಟಕ)
    ಕಳೆದ ಕೆಲ ಸಮಯದಿಂದ ರನ್‌ಬರ ಎದುರಿಸುತ್ತಿರುವ ಕರುಣ್ ನಾಯರ್, ಐಪಿಎಲ್‌ನಲ್ಲೂ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ವೈಲ್ಯ ಕಂಡಿದ್ದರು. ಮನೀಷ್ ಪಾಂಡೆ ಗೈರಿನಲ್ಲಿ ರಾಜ್ಯ ತಂಡದ ನಾಯಕತ್ವವನ್ನೂ ವಹಿಸಿಕೊಂಡಿರುವ ಟೆಸ್ಟ್ ಕ್ರಿಕೆಟ್ ತ್ರಿಶತಕವೀರ ಕರುಣ್ ಹಳೆಯ ಲಯಕ್ಕೆ ಮರಳುವ ಹಂಬಲದಲ್ಲಿದ್ದಾರೆ.

    ಶಿಖರ್ ಧವನ್ (ದೆಹಲಿ)

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!
    ಐಪಿಎಲ್‌ನಲ್ಲಿ ಸತತ 2 ಶತಕ ಸಿಡಿಸಿ ಮಿಂಚಿದ್ದ ಶಿಖರ್ ಧವನ್ ಆಸೀಸ್ ಪ್ರವಾಸದಲ್ಲಿ ಅಸ್ಥಿರ ಫಾರ್ಮ್ ಪ್ರದರ್ಶಿಸಿದ್ದರು. ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳುವ ದೃಷ್ಟಿಯಿಂದ ಧವನ್‌ಗೆ ಇದು ಪ್ರಮುಖ ಟೂರ್ನಿ. ಜತೆಗೆ ದೆಹಲಿ ನಾಯಕತ್ವವನ್ನೂ ನಿಭಾಯಿಸಬೇಕಿದೆ.

    ಇದನ್ನೂ ಓದಿ:  VIDEO | ಸಿಡ್ನಿಯಲ್ಲಿ ಟೀಮ್​ ಇಂಡಿಯಾ ವೇಗಿ ಮೊಹಮದ್ ಸಿರಾಜ್ ಭಾವುಕರಾಗಿದ್ದು ಯಾಕೆ ಗೊತ್ತೇ?

    ಎಸ್. ಶ್ರೀಶಾಂತ್ (ಕೇರಳ)

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!
    ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ 7 ವರ್ಷಗಳ ನಿಷೇಧ ಶಿಕ್ಷೆ ಮುಗಿಸಿ ಕ್ರಿಕೆಟ್ ಮೈದಾನಕ್ಕೆ ಮರಳಲು ಸಜ್ಜಾಗಿರುವ ಟೀಮ್ ಇಂಡಿಯಾದ ಮಾಜಿ ವೇಗಿ ಶ್ರೀಶಾಂತ್, ಮುಂದಿನ ಐಪಿಎಲ್ ಮಾತ್ರವಲ್ಲದೆ, 2023ರ ವಿಶ್ವಕಪ್‌ನಲ್ಲೂ ಆಡುವ ಕನಸು ಹಂಚಿಕೊಂಡಿದ್ದಾರೆ. ಆದರೆ 37 ವರ್ಷದ ಅವರಿಗೆ ಇದು ಹೇಳಿದಷ್ಟು ಸುಲಭದ ಮಾತಲ್ಲ. ಹೀಗಾಗಿ ಅವರು ಪುನರಾಗಮನದ ಟೂರ್ನಿಯಲ್ಲಿ ಸಾಮರ್ಥ್ಯವನ್ನು ಮರಳಿ ಸಾಬೀತು ಪಡಿಸುವುದು ಅಗತ್ಯವಾಗಿದೆ.

    ಸಂಜು ಸ್ಯಾಮ್ಸನ್ (ಕೇರಳ)

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!
    ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಮಿಂಚಿ ಆಸೀಸ್ ಪ್ರವಾಸಕ್ಕೆ ಟಿ20 ತಂಡದಲ್ಲಿ ಸ್ಥಾನ ಪಡೆದರೂ, ಸಮರ್ಥ ಆಟವಾಡುವಲ್ಲಿ ವಿಲರಾಗಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್, ಇಂಗ್ಲೆಂಡ್ ವಿರುದ್ಧದ ಸರಣಿಗೂ ಸ್ಥಾನ ಉಳಿಸಿಕೊಳ್ಳುವ ದೃಷ್ಟಿಯಿಂದ ಈ ಟೂರ್ನಿ ಪ್ರಮುಖವಾಗಿದೆ. ಮೊದಲ ಬಾರಿ ಕೇರಳ ತಂಡವನ್ನು ಮುನ್ನಡೆಸುವ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.

    ದಿನೇಶ್ ಕಾರ್ತಿಕ್ (ತಮಿಳುನಾಡು)

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!
    ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಎಡವಿದ್ದ ದಿನೇಶ್ ಕಾರ್ತಿಕ್, ಟೂರ್ನಿಯ ನಡುವೆಯೇ, ಬ್ಯಾಟಿಂಗ್‌ನತ್ತ ಗಮನಹರಿಸುವ ಸಲುವಾಗಿ ನಾಯಕತ್ವ ತ್ಯಜಿಸಿದ್ದರು. ಆದರೂ ಅವರ ರನ್‌ಬರ ಮುಂದುವರಿದಿತ್ತು. ಹೀಗಾಗಿ ಈ ಬಾರಿ ತಮಿಳುನಾಡು ತಂಡವನ್ನು ಮುನ್ನಡೆಸುವ ಜತೆಗೆ ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡಿ ಲಯಕ್ಕೆ ಮರಳಬೇಕಾಗಿದೆ.

    ಇದನ್ನೂ ಓದಿ:  ವಿದ್ಯುತ್ ಉತ್ಪಾದಿಸುತ್ತಿರುವ ಕರ್ನಾಟಕದ ರೈತನಿಗೆ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ

    ರಾಬಿನ್ ಉತ್ತಪ್ಪ (ಕೇರಳ)

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!
    ಕರ್ನಾಟಕ ತಂಡವನ್ನು ತೊರೆದ ಬಳಿಕ ಸೌರಾಷ್ಟ್ರ ಸೇರಿ ನಿರಾಸೆ ಅನುಭವಿಸಿದ್ದ ರಾಬಿನ್ ಉತ್ತಪ್ಪ, ಕಳೆದ ವರ್ಷದಿಂದ ಕೇರಳ ಪರ ಆಡುತ್ತಿದ್ದಾರೆ. ಕಳೆದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದರೂ, ನಿರೀಕ್ಷಿತ ನಿರ್ವಹಣೆ ತೋರಿರಲಿಲ್ಲ. ಹೀಗಾಗಿ 35 ವರ್ಷದ ಬ್ಯಾಟ್ಸ್‌ಮನ್ ಉತ್ತಪ್ಪಗೆ ಇನ್ನಷ್ಟು ಸಮಯ ಚಾಲ್ತಿಯಲ್ಲಿ ಉಳಿಯಲು ಈ ಟೂರ್ನಿ ಪ್ರಮುಖವೆನಿಸಿದೆ.

    ಯಶಸ್ವಿ ಜೈಸ್ವಾಲ್ (ಮುಂಬೈ)

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!
    ಮುಂಬೈ ರಸ್ತೆಬದಿಯಲ್ಲಿ ಪಾನಿಪುರಿ ಮಾರುತ್ತ ಕ್ರಿಕೆಟ್‌ನಲ್ಲಿ ಯಶೋಗಾಥೆ ಬರೆದ ಯಶಸ್ವಿ ಜೈಸ್ವಾಲ್ ಕಳೆದ ವರ್ಷ 19 ವಯೋಮಿತಿ ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಸಿಡಿಸಿದ ಸಾಧನೆಯೊಂದಿಗೆ ಮಿಂಚಿದರೂ, ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಲಭಿಸಿದ ಕೆಲ ಅವಕಾಶಗಳಲ್ಲಿ ಅಂಥದ್ದೇ ನಿರ್ವಹಣೆ ಪುನರಾವರ್ತಿಸಲು ವಿಲರಾಗಿದ್ದರು. ಟೀಮ್ ಇಂಡಿಯಾದ ಎಡಗೈ ಬ್ಯಾಟ್ಸ್‌ಮನ್‌ಗಳ ಕೊರತೆ ನೀಗಿಸಬಲ್ಲ ಛಾಪು ಹೊಂದಿರುವ ಜೈಸ್ವಾಲ್‌ಗೆ ಯಶಸ್ಸಿನ ಹಾದಿಗೆ ಮರಳಲು ಈ ಟೂರ್ನಿ ಪ್ರಮುಖವೆನಿಸಿದೆ.

    ಇದನ್ನೂ ಓದಿ: ಸುರೇಶ್ ರೈನಾ ಭಾರತ ಪರ ಪದಾರ್ಪಣೆ ಮಾಡಿದಾಗ 5 ವರ್ಷದ ಬಾಲಕ, ಈಗ ಅವರಿಗೆ ನಾಯಕ!

    ಋತುರಾಜ್ ಗಾಯಕ್ವಾಡ್ (ಮಹಾರಾಷ್ಟ್ರ)

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!
    ಭಾರತ ಎ ತಂಡದ ಪರ ತೋರಿದ ಉತ್ತಮ ನಿರ್ವಹಣೆಯಿಂದ ಕಳೆದ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪರ ಅವಕಾಶ ಪಡೆದರೂ, ಆರಂಭಿಕ ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದರು. ಸಿಎಸ್‌ಕೆ ಪ್ಲೇಆಫ್​ ರೇಸ್‌ನಿಂದ ಹೊರಬಿದ್ದ ಬಳಿಕ ತಂಡಕ್ಕೆ ಮರಳಿ ಸತತ 3 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಋತುರಾಜ್‌ಗೆ ಇನ್ನಷ್ಟು ಗಮನ ಸೆಳೆಯಲು ಈ ಟೂರ್ನಿ ವೇದಿಕೆಯಾಗಿದೆ.

    ಭುವನೇಶ್ವರ್ ಕುಮಾರ್ (ಉತ್ತರ ಪ್ರದೇಶ)

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!
    ಐಪಿಎಲ್ ವೇಳೆ ತೊಡೆ ಗಾಯಕ್ಕೊಳಗಾದ ಕಾರಣದಿಂದಾಗಿ ವೇಗಿ ಭುವನೇಶ್ವರ್ ಕುಮಾರ್ ಆಸ್ಟ್ರೇಲಿಯಾ ಪ್ರವಾಸ ತಪ್ಪಿಸಿಕೊಂಡಿದ್ದರು. ಇದೀಗ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರ ಮುಗಿಸಿ ಈ ಟೂರ್ನಿಯ ಮೂಲಕ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸಂಭಾವ್ಯರಲ್ಲಿ ಸ್ಥಾನ ಪಡೆಯದೇ ಇದ್ದರೂ ಈಗ ಉತ್ತರ ಪ್ರದೇಶ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಭುವಿ, ಲಯ ಕಂಡುಕೊಳ್ಳುವ ಮೂಲಕ ಟೀಮ್ ಇಂಡಿಯಾಗೆ ಮರಳುವ ಯೋಜನೆಯಲ್ಲಿದ್ದಾರೆ.

    VIDEO | ಸೀರೆಯುಟ್ಟು ಪಲ್ಟಿ ಹೊಡೆದ ಮಹಿಳಾ ಜಿಮ್ನಾಸ್ಟ್, ವಿಡಿಯೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts