More

    ಐಪಿಎಲ್ ರಿಟೇನ್ ಆಟಗಾರರ ಪಟ್ಟಿ ಪ್ರಕಟ; ರೋಹಿತ್, ಜಡೇಜಾ, ಪಂತ್‌ಗೆ ಜಾಕ್‌ಪಾಟ್

    ಬೆಂಗಳೂರು: ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ (ಆರ್‌ಸಿಬಿ), ಎಂಎಸ್ ಧೋನಿ, ರವೀಂದ್ರ ಜಡೇಜಾ (ಸಿಎಸ್‌ಕೆ), ರೋಹಿತ್ ಶರ್ಮ ಮತ್ತು ಜಸ್‌ಪ್ರೀತ್ ಬುಮ್ರಾ(ಮುಂಬೈ) ಮುಂದಿನ ವರ್ಷದ ಐಪಿಎಲ್ 15ನೇ ಆವೃತ್ತಿಗೆ ತಮ್ಮ ತಂಡಗಳಲ್ಲೇ ಭಾರಿ ಮೊತ್ತಕ್ಕೆ ರಿಟೇನ್ ಆಗಿದ್ದಾರೆ. ಕೆಎಲ್ ರಾಹುಲ್ (ಪಂಜಾಬ್ ಕಿಂಗ್ಸ್), ಹಾರ್ದಿಕ್ ಪಾಂಡ್ಯ (ಮುಂಬೈ), ಡೇವಿಡ್ ವಾರ್ನರ್, ರಶೀದ್ ಖಾನ್ (ಸನ್‌ರೈಸರ್ಸ್‌), ಶ್ರೇಯಸ್ ಅಯ್ಯರ್ (ಡೆಲ್ಲಿ) ಸಹಿತ ಹಲವು ಪ್ರಮುಖ ಆಟಗಾರರು ತಮ್ಮ ತಂಡಗಳ ಜತೆಗಿನ ಕಳೆದ ಕೆಲ ವರ್ಷಗಳ ಒಡನಾಟವನ್ನು ತೊರೆದಿದ್ದು, ಹರಾಜಿಗೆ ಒಳಪಡಲು ಸಜ್ಜಾಗಿದ್ದಾರೆ. ತಂಡಗಳಿಂದ ಬಿಡುಗಡೆ ಹೊಂದಿರುವ ಆಟಗಾರರು ಮುಂಬರುವ ಹರಾಜಿನಲ್ಲಿ ಹೊಸ ತಂಡಗಳಿಗೆ ಸೇರ್ಪಡೆಗೊಳ್ಳುವ ಅಥವಾ ಹಳೆಯ ತಂಡಕ್ಕೆ ಮರಳುವ ಅವಕಾಶ ಮುಕ್ತವಾಗಿ ಉಳಿದಿದೆ.
    ಮುಂಬೈ ಇಂಡಿಯನ್ಸ್‌ಗೆ 5 ಬಾರಿ ಪ್ರಶಸ್ತಿ ಗೆದ್ದುಕೊಟ್ಟಿರುವ ನಾಯಕ ರೋಹಿತ್ ಶರ್ಮ ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಆಲ್ರೌಂಡರ್ ಹಾಗೂ ಭವಿಷ್ಯದ ನಾಯಕ ಎನಿಸಿರುವ ರವೀಂದ್ರ ಜಡೇಜಾ ಗರಿಷ್ಠ 16 ಕೋಟಿ ರೂ.ಗೆ ರಿಟೇನ್ ಆಗಿದ್ದಾರೆ. ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಿಂದಿಗಿಂತ 2 ಕೋಟಿ ರೂ. ಕಡಿಮೆ ಅಂದರೆ 15 ಕೋಟಿ ರೂ.ಗೆ ರಿಟೇನ್ ಆಗಿದ್ದಾರೆ. ಸಿಎಸ್‌ಕೆ ನಾಯಕ ಎಂಎಸ್ ಧೋನಿ 12 ಕೋಟಿ ರೂ.ಗೆ ತಂಡದಲ್ಲಿ ಉಳಿದುಕೊಂಡಿದ್ದಾರೆ. ಕನ್ನಡಿಗ ಮಯಾಂಕ್ ಅಗರ್ವಾಲ್ 12 ಕೋಟಿ ರೂ. ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ರಿಟೇನ್ ಆಗಿದ್ದಾರೆ.

    ರಿಟೇನ್ ಆಟಗಾರರು:
    ಆರ್‌ಸಿಬಿ: ವಿರಾಟ್ ಕೊಹ್ಲಿ (₹15 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್ (₹11ಕೋಟಿ), ಮೊಹಮದ್ ಸಿರಾಜ್ (₹7 ಕೋಟಿ).
    ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ (₹16 ಕೋಟಿ), ಜಸ್‌ಪ್ರೀತ್ ಬುಮ್ರಾ (₹12 ಕೋಟಿ), ಸೂರ್ಯಕುಮಾರ್ ಯಾದವ್ (₹8 ಕೋಟಿ), ಕೈರಾನ್ ಪೊಲ್ಲಾರ್ಡ್ (₹6 ಕೋಟಿ).
    ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (₹12 ಕೋಟಿ), ಅರ್ಷದೀಪ್ ಸಿಂಗ್ (₹4 ಕೋಟಿ).
    ಸನ್‌ರೈಸರ್ಸ್‌: ಕೇನ್ ವಿಲಿಯಮ್ಸನ್ (₹14 ಕೋಟಿ), ಅಬ್ದುಲ್ ಸಮದ್ (₹4 ಕೋಟಿ), ಉಮ್ರಾನ್ ಮಲಿಕ್ (₹4 ಕೋಟಿ).
    ಸಿಎಸ್‌ಕೆ: ರವೀಂದ್ರ ಜಡೇಜಾ (₹16 ಕೋಟಿ), ಎಂಎಸ್ ಧೋನಿ (₹12 ಕೋಟಿ), ಮೊಯಿನ್ ಅಲಿ (₹8 ಕೋಟಿ), ಋತುರಾಜ್ ಗಾಯಕ್ವಾಡ್ (₹6 ಕೋಟಿ).
    ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ (₹16 ಕೋಟಿ ರೂ), ಅಕ್ಷರ್ ಪಟೇಲ್ (₹9 ಕೋಟಿ), ಪೃಥ್ವಿ ಷಾ (₹7.50 ಕೋಟಿ), ಅನ್ರಿಚ್ ನೋಕಿಯ (₹6.50ಕೋಟಿ).
    ಕೆಕೆಆರ್: ಆಂಡ್ರೆ ರಸೆಲ್ (₹12 ಕೋಟಿ), ವರುಣ್ ಚಕ್ರವರ್ತಿ (₹8 ಕೋಟಿ), ವೆಂಕಟೇಶ್ ಅಯ್ಯರ್ (₹8 ಕೋಟಿ), ಸುನೀಲ್ ನಾರಾಯಣ್ (₹6 ಕೋಟಿ).
    ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (₹14 ಕೋಟಿ), ಜೋಸ್ ಬಟ್ಲರ್ (₹10 ಕೋಟಿ), ಯಶಸ್ವಿ ಜೈಸ್ವಾಲ್ (₹4 ಕೋಟಿ).

    ಹರಾಜಿಗೆ ಉಳಿಕೆ ಮೊತ್ತ
    ಆರ್‌ಸಿಬಿ: 57 ಕೋಟಿ ರೂ.
    ಮುಂಬೈ: 48 ಕೋಟಿ ರೂ.
    ಪಂಜಾಬ್: 74 ಕೋಟಿ ರೂ.
    ಸನ್‌ರೈಸರ್ಸ್‌: 68 ಕೋಟಿ ರೂ.
    ಸಿಎಸ್‌ಕೆ: 48 ಕೋಟಿ ರೂ.
    ಡೆಲ್ಲಿ: 47.5 ಕೋಟಿ ರೂ.
    ಕೆಕೆಆರ್: 48 ಕೋಟಿ
    ರಾಜಸ್ಥಾನ: 62

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts