More

    ಐಪಿಎಲ್ ಆಟಗಾರರ ಹರಾಜು ಪಟ್ಟಿ ಪ್ರಕಟ; 1,214 ಆಟಗಾರರು ನೋಂದಣಿ; 49 ಆಟಗಾರರ ಮೂಲ ಬೆಲೆ 2 ಕೋಟಿ ರೂ.

    ನವದೆಹಲಿ: ಭಾರತದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್, ಸ್ಪಿನ್ನರ್ ಯಜುವೇಂದ್ರ ಚಾಹಲ್ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್, ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡ ಸೇರಿದಂತೆ ಕೆಲ ಪ್ರಮುಖ ಆಟಗಾರರು ಮುಂಬರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಪ್ರಮುಖ ಕೇಂದ್ರ ಬಿಂದುವಾಗಲಿದ್ದಾರೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಗೆ 1,214 ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 896 ಭಾರತೀಯ, 318 ವಿದೇಶಿ ಆಟಗಾರರು ಸೇರಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ 10 ತಂಡಗಳು ಆಟಗಾರರನ್ನು ಖರೀದಿಸಲಿವೆ. ಒಟ್ಟು 49 ಆಟಗಾರರು ಮೂಲ ಬೆಲೆ 2 ಕೋಟಿ ರೂಪಾಯಿ ಹೊಂದಿದ್ದಾರೆ.

    * 33 ಆಟಗಾರರು ರಿಟೇನ್
    33 ಆಟಗಾರರನ್ನು 10 ಫ್ರಾಂಚೈಸಿಗಳು ಉಳಿಸಿಕೊಂಡಿದ್ದು ಈ ಪೈಕಿ 8 ತಂಡಗಳಿಂದ 27 ಆಟಗಾರರನ್ನು ಉಳಿಸಿಕೊಂಡಿದ್ದರೆ, ಎರಡು ಹೊಸ ತಂಡಗಳು ತಲಾ ಮೂವರು ಆಟಗಾರರನ್ನು ಈಗಾಗಲೇ ಹೊಂದಿವೆ. ಅಹಮದಾಬಾದ್ ಫ್ರಾಂಚೈಸಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ವಹಿಸಿದರೆ, ಲಖನೌ ತಂಡ ಕನ್ನಡಿಗ ಕೆಎಲ್ ರಾಹುಲ್‌ಗೆ ಸಾರಥ್ಯ ವಹಿಸಿದೆ.

    * ಮೂಲ ಬೆಲೆ 2 ಕೋಟಿ ರೂ. ಹೊಂದಿರುವವರು
    17 ಭಾರತೀಯರು ಸೇರಿದಂತೆ 49 ಮಂದಿ ಆಟಗಾರರು ಮೂಲ ಬೆಲೆ 2 ಕೋಟಿ ರೂಪಾಯಿ ಹೊಂದಿದ್ದಾರೆ. ಭಾರತೀಯ ಆಟಗಾರರು: ಆರ್.ಅಶ್ವಿನ್, ಯಜುವೇಂದ್ರ ಚಾಹಲ್, ದೀಪಕ್ ಚಹರ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಇಶಾನ್ ಕಿಶನ್, ಭುವನೇಶ್ವರ್ ಕುಮಾರ್, ದೇವದತ್ ಪಡಿಕಲ್, ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಸುರೇಶ್ ರೈನಾ, ಅಂಬಟಿ ರಾಯುಡು, ಮೊಹಮದ್ ಶಮಿ, ಶಾರ್ದೂಲ್ ಠಾಕೂರ್, ರಾಬಿನ್ ಉತ್ತಪ್ಪ, ಉಮೇಶ್ ಯಾದವ್.
    ವಿದೇಶಿ ಆಟಗಾರರು: ಮುಜೀಬ್ ಜರ್ದಾನ್, ಅಶ್ಟೊನ್ ಅಗರ್, ನಾಥನ್ ಕೌಲ್ಟರ್ ನಿಲ್, ಪ್ಯಾಟ್ ಕಮ್ಮಿನ್ಸ್, ಜೋಸ್ ಹ್ಯಾಸಲ್‌ವುಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಂ ಜಂಪಾ, ಶಕೀಬ್ ಅಲ್ ಹಸನ್, ಮುಸ್ತಾಫಿಜುರ್ ರೆಹಮಾನ್, ಸ್ಯಾಮ್ ಬಿಲ್ಲಿಂಗ್ಸ್, ಸಾದಿಕ್ ಮೊಹಮೂದ್, ಕ್ರೀಸ್ ಜೋರ್ಡಾನ್, ಕ್ರೇಗ್ ಓವರ್‌ಟನ್, ಆದಿಲ್ ರಶೀದ್, ಜೇಸನ್ ರಾಯ್, ಜೇಮ್ಸ್ ವಿನ್ಸ್, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಟ್ರೆಂಟ್ ಬೌಲ್ಟ್, ಲಾಕಿ ರ್ಗ್ಯೂಸನ್, ಕ್ವಿಂಟನ್ ಡಿ ಕಾಕ್, ಮರ್ಚೆಂಟ್ ಡಿ ಲಾಂಗೆ, ಡು ಪ್ಲೆಸಿಸ್, ಕಗಿಸೊ ರಬಾಡ, ಇಮ್ರಾನ್ ತಾಹಿರ್, ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೊ, ಎವಿನ್ ಲೆವಿಸ್, ಒಡೆನ್ ಸ್ಮಿತ್.

    * 1.5 ಕೋಟಿ ಹೊಂದಿರುವವರು
    ಅಮಿತ್ ಮಿಶ್ರಾ, ಇಶಾಂತ್, ಶರ್ಮ, ವಾಷಿಂಗ್ಟನ್ ಸುಂದರ್, ಆರನ್ ಫಿಂಚ್, ಕ್ರಿಸ್ ಲ್ಯಾನ್, ನಾಥನ್ ಲ್ಯಾನ್, ಕೇನ್ ರಿಚರ್ಡ್‌ಸನ್, ಜಾನಿ ಬೇರ್‌ಸ್ಟೋ, ಅಲೆಕ್ಸ್ ಹೆಲ್ಸ್, ಇವೊಯಿನ್ ಮಾರ್ಗನ್, ಡೇವಿಡ್ ಮಲನ್, ಆಡಂ ಮಿಲ್ನೆ, ಕಾಲಿನ್ ಮುನ್ರೊ, ಜಿಮ್ಮಿ ನೀಶಾಮ್, ಗ್ಲೆನ್ ಫಿಲಿಪ್ಸ್, ಟಿಮ್ ಸೌಥಿ, ಕಾಲಿನ್ ಇನ್‌ಗ್ರಾಮ್, ಶಿಮ್ರೋನ್ ಹೆಟ್ಮೆಯೆರ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್.
    * 1 ಕೋಟಿ ರೂ ಹೊಂದಿರುವವರು (ಭಾರತೀಯರು)
    ಪೀಯುಷ್ ಚಾವ್ಲಾ, ಕೇದಾರ್ ಜಾಧವ್, ಪ್ರಸಿದ್ಧ ಕೃಷ್ಣ, ಟಿ.ನಟರಾಜ್, ಮನೀಷ್ ಪಾಂಡೆ, ಅಜಿಂಕ್ಯ ರಹಾನೆ, ನಿತೀಶ್ ರಾಣಾ, ವೃದ್ಧಿಮಾನ್ ಸಾಹ, ಕುಲದೀಪ್ ಯಾದವ್, ಜಯಂತ್ ಯಾದವ್,

    * ಪ್ರಮುಖರ ಗೈರು
    ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್, ಟಿ20 ದೈತ್ಯ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್, ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಸ್ಯಾಮ್ ಕರ‌್ರನ್ ಹರಾಜಿನಲ್ಲಿ ಗೈರಾಗುತ್ತಿರುವ ಪ್ರಮುಖರ ಆಟಗಾರರಾಗಿದ್ದಾರೆ.

    ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿರುವ 200ಕ್ಕೂ ಅಧಿಕ ವಿದೇಶಿ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದು, 62 ಮಂದಿ ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಬಿಡ್ಡಿಂಗ್ ರೇಸ್‌ನಲ್ಲಿದ್ದಾರೆ. ಮೊದಲ ಬಾರಿಗೆ ಭೂತಾನ್ ಆಟಗಾರನೊರ್ವ ಕೂಡ ಹೆಸರು ನೋಂದಾಯಿಸಿಕೊಂಡಿದ್ದು, ಯುಎಸ್‌ಎಯಿಂದ ದಾಖಲೆಯ 14 ಆಟಗಾರರು, ಆಸ್ಟ್ರೇಲಿಯಾದಿಂದ ಅತಿಹೆಚ್ಚು ಅಂದರೆ 59 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ದಕ್ಷಿಣ ಆಫ್ರಿಕಾದಿಂದ 48 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ, ವೆಸ್ಟ್ ಇಂಡೀಸ್ (41), ಶ್ರೀಲಂಕಾ (36), ಇಂಗ್ಲೆಂಡ್ (30), ನ್ಯೂಜಿಲೆಂಡ್ (29), ಅ್ಘಾನಿಸ್ತಾನ (20), ನೇಪಾಳ (15), ನಮೀಬಿಯ (5), ನೆದರ್ಲೆಂಡ್ಸ್ (1), ಓಮನ್ (3), ಸ್ಕಾಟ್ಲೆಂಡ್ (1), ಜಿಂಬಾಬ್ವೆ (2), ಐರ್ಲೆಂಡ್ (3) ಹಾಗೂ ಯುಎಇ (1) ಆಟಗಾರರು ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts