More

    ಡಿವಿಲಿಯರ್ಸ್​ ಸೂಪರ್​ ಮ್ಯಾನ್​ ಕ್ಯಾಚ್​ ಮರುಸೃಷ್ಟಿಸಿ ಸಾಮರ್ಥ್ಯ ಪ್ರದರ್ಶಿಸಿದ ವಿರಾಟ್​!

    ನವದೆಹಲಿ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಅಖಾಡಕ್ಕೆ ಇಳಿಯಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಸಿದ್ಧವಾಗಿದೆ. ಕಠಿಣ ತರಬೇತಿಯಲ್ಲಿ ಆರ್​ಸಿಬಿ ತಂಡ ತೊಡಗಿಕೊಂಡಿದ್ದು, ನಾಯಕ ವಿರಾಟ್​ ಕೊಹ್ಲಿ ತಂಡದ ಸಹ ಆಟಗಾರ ಎಬಿ ಡಿವಿಲಿಯರ್ಸ್​ ಅವರ ಲೆಂಜೆಂಡರಿ ಸೂಪರ್​ ಮ್ಯಾನ್​ ಕ್ಯಾಚ್​ ಅನ್ನು ಮರುಸೃಷ್ಟಿಸುವ ಮೂಲಕ ಎದುರಾಳಿ ತಂಡಕ್ಕೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

    ಕಳೆದ ಸಂಜೆ ನಡೆದ ತರಬೇತಿ ವೇಳೆ ಕೊಹ್ಲಿ ಅವರು ಲೆಜೆಂಡರಿ ಸೂಪರ್​ ಮ್ಯಾನ್​ ಕ್ಯಾಚ್​ ಅನ್ನು ಮರು ಸೃಷ್ಟಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಆರ್​ಸಿಬಿ ಅಧಿಕೃತ ಖಾತೆಯಲ್ಲಿ ಫೋಟೋ ಪೋಸ್ಟ್​ ಮಾಡಲಾಗಿದೆ. ಚಿತ್ರದಲ್ಲಿ ಒಂದು ಕಡೆ ಎಬಿಡಿ ಮತ್ತೊಂದು ಕಡೆ ಕೊಹ್ಲಿ ಕ್ಯಾಚ್​ ಹಿಡಿಯುತ್ತಿರುವ ದೃಶ್ಯವಿದೆ. ಸದ್ಯ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    2018ರ ಐಪಿಎಲ್​ ಟೂರ್ನಿಯಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಬಿಡಿ ಅದ್ಭುತ ಕ್ಯಾಚ್​ ಹಿಡಿದಿದ್ದರು. ಆಂಗ್ಲ ಆಟಗಾರ ಅಲೆಕ್ಸ್​ ಹೇಲ್ಸ್​ ಬಲವಾಗಿ ಬಾರಿಸಿದ ಚೆಂಡ್​ ಗಾಳಿಯಲ್ಲಿ ಹಾರಿ ಬೌಂಡರಿ ಗೆರೆಯನ್ನು ದಾಟುವಾಗ ಎಬಿಡಿ ಸೂಪರ್​ ಮ್ಯಾನ್​ ರೀತಿಯಲ್ಲಿ ಮೇಲಕ್ಕೆ ಜಿಗಿದು ಒಂದೇ ಕೈಯಲ್ಲಿ ಕ್ಯಾಚ್​ ಹಿಡಿದಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಸಹ ಆಗಿತ್ತು.

    ಇದೀಗ ಇದೇ ದೃಶ್ಯವನ್ನು ಕೊಹ್ಲಿ ಮರು ಸೃಷ್ಟಿಸಿದ್ದಾರೆ. ಇಬ್ಬರು ಆಟಗಾರರು ಸಹ ಆರ್​ಸಿಬಿ ತಂಡದ ಪ್ರಧಾರ ಆಧಾರಸ್ತಂಭಗಳಾಗಿದ್ದಾರೆ. ಇಬ್ಬರ ನಡುವಿನ ಸ್ನೇಹವು ಸಹ ಐಪಿಎಲ್​ನಿಂದಾಗಿ ಗಟ್ಟಿಯಾಗಿದ್ದು, ಕರೊನಾ ಲಾಕ್​ಡೌನ್​ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಚರ್ಚಿಸಿದ್ದು ಒಂದು ಉದಾಹರಣೆ. (ಏಜೆನ್ಸೀಸ್​)

    ಅವಧಿಗೂ ಮುನ್ನವೇ ಅಧಿವೇಶನ ಮುಕ್ತಾಯ? ಸಂಸತ್ತಿಗೂ ತಟ್ಟಿದ ಕರೊನಾ ಬಾಧೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts