More

    ರೋಹಿತ್​ ಸ್ಫೋಟಕ ಬ್ಯಾಟಿಂಗ್​: ಕೋಲ್ಕತ ಗೆಲುವಿಗೆ ಬೃಹತ್​ ಗುರಿ ನೀಡಿದ ಮುಂಬೈ!

    ಅಬುದಾಬಿ: ಇಲ್ಲಿನ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ ಟೂರ್ನಿಯ 5ನೇ ಪಂದ್ಯದಲ್ಲಿ ನಾಯಕ ರೋಹಿತ್​ ಶರ್ಮಾ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಮುಂಬೈ ಇಂಡಿಯನ್ಸ್​ ತಂಡವು ಕೋಲ್ಕತ ನೈಟ್​ ರೈಡರ್ಸ್​ಗೆ 196 ರನ್​ಗಳ ಬೃಹತ್​ ಗುರಿ ನೀಡಿದೆ.

    ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಮುಂಬೈ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 195 ರನ್​ ಕಲೆಹಾಕಿತು.

    ತಂಡದ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್​ ಡಿ ಕಾಕ್​ ಕೇವಲ 1 ರನ್​ ಗಳಿಸಿ ಔಟಾಗುವ ಮೂಲಕ ಆರಂಭಿಕ ಆಘಾತ ನೀಡಿದರು. ಬಳಿಕ ರೋಹಿತ್​ ಶರ್ಮಾ ಜತೆಗೂಡಿದ ಸೂರ್ಯಕುಮಾರ್​ ಯಾದವ್​ 90 ರನ್​ಗಳ ಜತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ವೇಳೆ 47 ರನ್​ ಕಲೆಹಾಕಿದ್ದ ಯಾದವ್​ ರನೌಟ್​ ಆಗುವ ಮೂಲಕ ಅರ್ಧಶತಕದಿಂದ ವಂಚಿತರಾದರು. ಬಳಿಕ ಬಂದ ಸೌರಭ್​ ತಿವಾರಿಯು ಸಹ 21 ರನ್​ಗಳ ಕಾಣಿಕೆ ನೀಡಿ ಪೆವಲಿಯನ್​​ ಸೇರಿದರು.

    ಇತ್ತ ಆರಂಭದಿಂದಲೂ ಸ್ಫೋಟಿಸಿದ ರೋಹಿತ್​ ಶರ್ಮಾ 6 ಸಿಕ್ಸರ್​, 3 ಬೌಂಡರಿ ನೆರವಿನೊಂದಿಗೆ ಭರ್ಜರಿ 80 ರನ್​ ಕಲೆಹಾಕುವ ಮೂಲಕ ನಾಯಕ ಜವಬ್ದಾರಿಯುತ ಆಟವಾಡಿದರು. ಉಳಿದಂತೆ ಹಾರ್ದಿಕ್​ ಪಾಂಡ್ಯ (18) ರನ್​ ಗಳಿಸಿ ಔಟಾದರೆ, ಕೀರನ್​ ಪೊಲಾರ್ಡ್​ (11*) ಮತ್ತು ಕೃನಾಲ್​ ಪಾಂಡ್ಯ (1*) ಅಜೇಯರಾಗಿ ಉಳಿದರು.

    ಕೋಲ್ಕತ ಪರ ಶಿವಮ್​ ಮವಿ 2 ವಿಕೆಟ್​ ಪಡೆದರೆ, ಸುನೀಲ್​ ನರೇನ್​ ಮತ್ತು ಆ್ಯಂಡ್ರೆ ರಸೆಲ್​ ತಲಾ 1 ವಿಕೆಟ್​ ಪಡೆದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts