More

    ಐಪಿಎಲ್ 15ನೇ ಆವೃತ್ತಿಗೆ ಮುಹೂರ್ತ ಫಿಕ್ಸ್ ಮಾಡಿದ ಬಿಸಿಸಿಐ

    ನವದೆಹಲಿ: ಮುಂದಿನ ವರ್ಷ ಏಪ್ರಿಲ್ 2ರಂದು ಚೆನ್ನೈನಲ್ಲಿ ಐಪಿಎಲ್ 15ನೇ ಆವೃತ್ತಿಗೆ ಚಾಲನೆ ನೀಡಲು ಬಿಸಿಸಿಐ ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ. 2 ಹೊಸ ತಂಡಗಳ ಸೇರ್ಪಡೆಯೊಂದಿಗೆ ಮುಂದಿನ ಐಪಿಎಲ್‌ನಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿದ್ದು, ಒಟ್ಟು ಪಂದ್ಯಗಳ ಸಂಖ್ಯೆಯೂ 74ಕ್ಕೆ ಏರಲಿದೆ. ಹಿಂದಿನಂತೆ ಎಲ್ಲ ತಂಡಗಳು ಲೀಗ್ ಹಂತದಲ್ಲಿ 14 ಪಂದ್ಯಗಳನ್ನೇ ಆಡಲಿವೆ.

    ಜೂನ್ ಮೊದಲ ವಾರದಲ್ಲಿ ಅಂದರೆ ಜೂನ್ 4 ಅಥವಾ 5ರಂದು ಫೈನಲ್ ಪಂದ್ಯ ನಿಗದಿಪಡಿಸಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗುವ ಸಾಧ್ಯತೆ ಇದೆ.

    ಈ ವರ್ಷ ಐಪಿಎಲ್ 14ನೇ ಆವೃತ್ತಿ ಭಾರತದಲ್ಲೇ ಆರಂಭಗೊಂಡರೂ, ಬಳಿಕ ಕರೊನಾ ಹಾವಳಿಯಿಂದ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ನಂತರ ಯುಎಇಯಲ್ಲಿ ಟೂರ್ನಿ ಪೂರ್ಣಗೊಂಡಿತ್ತು.

    ಡಿಸೆಂಬರ್ 8ರಂದು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ
    ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಡಿಸೆಂಬರ್ 8ರಂದು ತೆರಳಲಿದೆ. ಡಿಸೆಂಬರ್ 7ರಂದು ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಮುಗಿದ ಬಳಿಕ ಮರುದಿನ ಮುಂಬೈನಿಂದಲೇ ಭಾರತ ತಂಡ ಡರ್ಬನ್‌ಗೆ ಪ್ರಯಾಣ ಬೆಳೆಸಲಿದೆ. ಪ್ರವಾಸದಲ್ಲಿ ಭಾರತ ತಂಡ 3 ಟೆಸ್ಟ್, 3 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಲಿದೆ.

    ವಿರಾಟ್ ಕೊಹ್ಲಿ ಶತಕವಿಲ್ಲದೆ 2 ವರ್ಷ! ಕರೊನಾ ಕಾಲದಲ್ಲಿ ಸೆಂಚುರಿ ಸಿಡಿಸುವುದನ್ನು ಮರೆತ ಸ್ಟಾರ್ ಬ್ಯಾಟರ್

    ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಭಾರತಕ್ಕೆ ಆರಂಭದಲ್ಲೇ ಫ್ರಾನ್ಸ್ ಆಘಾತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts