More

    ಗುಜರಾತ್ ಟೈಟಾನ್ಸ್ ಗೆಲುವಿನ ಓಟಕ್ಕೆ ಸನ್‌ರೈಸರ್ಸ್‌ ಬ್ರೇಕ್

    ಮುಂಬೈ: ಕರಾರುವಾಕ್ ಬೌಲಿಂಗ್ ದಾಳಿ ಹಾಗೂ ನಾಯಕ ಕೇನ್ ವಿಲಿಯಮ್ಸನ್ (57 ರನ್, 46 ಎಸೆತ, 2 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-15ರ ತನ್ನ 4ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿದ್ದ ಹಾರ್ದಿಕ್ ಪಾಂಡ್ಯ ಪಡೆಯ ಅಜೇಯ ಓಟಕ್ಕೆ ವಿಲಿಯಮ್ಸನ್ ಬಳಗ ಬ್ರೇಕ್ ಹಾಕುವುದರ ಜತೆಗೆ ಸತತ 2ನೇ ಜಯ ದಾಖಲಿಸಿತು.

    ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ, ಹಾರ್ದಿಕ್ ಪಾಂಡ್ಯ (50*ರನ್, 42 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಕನ್ನಡಿಗ ಅಭಿನವ್ ಮನೋಹರ್ (35 ರನ್, 21 ಎಸೆತ, 5 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದ ಫಲವಾಗಿ 7 ವಿಕೆಟ್‌ಗೆ 162 ರನ್ ಪೇರಿಸಿತು. ಪ್ರತಿಯಾಗಿ ಸನ್‌ರೈಸರ್ಸ್‌ 19.1 ಓವರ್‌ಗಳಲ್ಲಿ 2 ವಿಕೆಟ್‌ಗೆ 168 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    ಗುಜರಾತ್ ಟೈಟಾನ್ಸ್: 7 ವಿಕೆಟ್‌ಗೆ 162 (ಮ್ಯಾಥ್ಯೂ ವೇಡ್ 19, ಹಾರ್ದಿಕ್ ಪಾಂಡ್ಯ 50*, ಅಭಿನವ್ 35, ಭುವನೇಶ್ವರ್ ಕುಮಾರ್ 37ಕ್ಕೆ 2, ಟಿ.ನಟರಾಜನ್ 34ಕ್ಕೆ 2), ಸನ್‌ರೈಸರ್ಸ್‌ ಹೈದರಾಬಾದ್: 19.1 ಓವರ್‌ಗಳಲ್ಲಿ 2 ವಿಕೆಟ್‌ಗೆ 168 (ಅಭಿಷೇಕ್ ಶರ್ಮ 42, ವಿಲಿಯಮ್ಸನ್ 57, ಪೂರನ್ 34*, ಹಾರ್ದಿಕ್ ಪಾಂಡ್ಯ 27ಕ್ಕೆ 1, ರಶೀದ್ ಖಾನ್ 28ಕ್ಕೆ1)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts