More

    ಆರ್‌ಸಿಬಿ ಪ್ಲೇಆಫ್ ಆಸೆಗೆ ಬಲ ತುಂಬಿದ ಗೆಲುವು; ಸನ್‌ರೈಸರ್ಸ್‌ಗೆ ತಿರುಗೇಟು ಕೊಟ್ಟ ಪ್ಲೆಸಿಸ್ ಪಡೆ

    ಮುಂಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ನಿಯಂತ್ರಣ ಸಾಧಿಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಐಪಿಎಲ್-15ರ ತನ್ನ ನಿರ್ಣಾಯಕ ಪಂದ್ಯದಲ್ಲಿ 67 ರನ್‌ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಮಣಿಸಿ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು. ನಾಯಕ ಫಾಫ್ ಡು ಪ್ಲೆಸಿಸ್ (73*ರನ್, 50 ಎಸೆತ, 8 ಬೌಂಡರಿ, 2 ಸಿಕ್ಸರ್) ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೆ, ವನಿಂದು ಹಸರಂಗ (18ಕ್ಕೆ 5) ಮಾರಕ ದಾಳಿಯಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನಿಂದ ಆರ್‌ಸಿಬಿ 12 ಪಂದ್ಯಗಳಿಂದ 14 ಪಾಯಿಂಟ್ಸ್ ಕಲೆಹಾಕಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡರೆ, ಸನ್‌ರೈಸರ್ಸ್‌ ಸತತ 4ನೇ ಸೋಲಿಗೆ ಶರಣಾಯಿತು. ಮೊದಲ ಮುಖಾಮುಖಿಯಲ್ಲಿ ಸನ್‌ರೈಸರ್ಸ್‌ ಎದುರು ಅನುಭವಿಸಿದ್ದ ಹೀನಾಯ ಸೋಲಿಗೂ ಪ್ಲೆಸಿಸ್ ಪಡೆ ಸೇಡು ತೀರಿಸಿಕೊಂಡಿತು.

    ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 3 ವಿಕೆಟ್‌ಗೆ 192 ರನ್‌ಗಳಿಸಿದರೆ, ಸನ್‌ರೈಸರ್ಸ್‌ ಹೈದರಾಬಾದ್ ತಂಡ 19.2 ಓವರ್‌ಗಳಲ್ಲಿ 125 ರನ್‌ಗಳಿಗೆ ಸರ್ವಪತನ ಕಂಡಿತು.

    ಆರ್‌ಸಿಬಿ: 3 ವಿಕೆಟ್‌ಗೆ 192 (ಫಾಫ್ ಡು ಪ್ಲೆಸಿಸ್ 73*, ರಜತ್ ಪಾಟಿದಾರ್ 48, ಗ್ಲೆನ್ ಮ್ಯಾಕ್ಸ್‌ವೆಲ್ 33, ದಿನೇಶ್ ಕಾರ್ತಿಕ್ 30*, ಜೆ.ಸುಚಿತ್ 30ಕ್ಕೆ 2, ಕಾರ್ತಿಕ್ ತ್ಯಾಗಿ 42ಕ್ಕೆ 1), ಸನ್‌ರೈಸರ್ಸ್‌ ಹೈದರಾಬಾದ್: 19.2 ಓವರ್‌ಗಳಲ್ಲಿ 125 (ರಾಹುಲ್ ತ್ರಿಪಾಠಿ 58, ಏಡನ್ ಮಾರ್ಕ್ರಮ್ 21, ನಿಕೋಲಸ್ ಪೂರನ್ 19, ವನಿಂದು ಹಸರಂಗ 18ಕ್ಕೆ 5, ಜೋಸ್ ಹ್ಯಾಸಲ್‌ವುಡ್ 17ಕ್ಕೆ2, ಗ್ಲೆನ್ ಮ್ಯಾಕ್ಸ್‌ವೆಲ್ 13ಕ್ಕೆ 1)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts