More

    ಸನ್‌ರೈಸರ್ಸ್‌ ತಂಡಕ್ಕೆ ಸತತ 4ನೇ ಜಯ ; ಪಂಜಾಬ್ ಕಿಂಗ್ಸ್ ಎದುರು 7 ವಿಕೆಟ್ ಗೆಲುವು

    ಮುಂಬೈ: ಆಲ್ರೌಂಡ್ ನಿರ್ವಹಣೆ ತೋರಿದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-15ರಲ್ಲಿ ಸತತ 4ನೇ ಗೆಲುವಿನ ನಗೆ ಬೀರಿತು. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಬಳಗ 7 ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ಆರಂಭಿಕ ಎರಡು ಸೋಲುಗಳೊಂದಿಗೆ ಲೀಗ್ ಅಭಿಯಾನ ಕಂಡಿದ್ದ ಸನ್‌ರೈಸರ್ಸ್‌ ಜಯದ ಸಂಖ್ಯೆನ್ನು ವಿಸ್ತರಿಸಿಕೊಂಡಿದೆ. ಮತ್ತೊಂದೆಡೆ, 3ನೇ ಸೋಲು ಕಂಡ ಪಂಜಾಬ್ ಕಿಂಗ್ಸ್ ಅಂಕ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿಯಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಲಿಯಾಮ್ ಲಿವಿಂಗ್‌ಸ್ಟೋನ್ (60ರನ್, 33 ಎಸೆತ, 5 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಡುವೆಯೂ ಉಮ್ರಾನ್ ಮಲಿಕ್ (28ಕ್ಕೆ 4) ಹಾಗೂ ಭುವನೇಶ್ವರ್ ಕುಮಾರ್ (22ಕ್ಕೆ 3) ಮಾರಕ ದಾಳಿಗ ನಲುಗಿ 20 ಓವರ್‌ಗಳಲ್ಲಿ 151 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಸನ್‌ರೈಸರ್ಸ್‌ , ಏಡನ್ ಮಾರ್ಕ್ರಮ್ (41ರನ್, 27 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ನಿಕೋಲಸ್ ಪೂರನ್ (35*ರನ್, 30 ಎಸೆತ, 1 ಬೌಂಡರಿ, 1 ಸಿಕ್ಸರ್) ಮುರಿಯದ 4ನೇ ವಿಕೆಟ್‌ಗೆ 75 ಜತೆಯಾಟದ ಫಲವಾಗಿ 18.5 ಓವರ್‌ಗಳಲ್ಲಿ 3 ವಿಕೆಟ್‌ಗೆ 152 ರನ್‌ಗಳಿಸಿ ಜಯದ ನಗೆ ಬೀರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts