More

    ಪ್ಲೇಆಫ್ ಖಾತ್ರಿಗೆ ಲಖನೌ ಸೂಪರ್ ಜೈಂಟ್ಸ್ ಸಜ್ಜು ; ಗೆಲುವಿನ ಒತ್ತಡದಲ್ಲಿ ರಾಜಸ್ಥಾನ ರಾಯಲ್ಸ್

    ಮುಂಬೈ: ಪ್ಲೇಆಫ್ ಹಂತಕ್ಕೇರಲು ಕೇವಲ ಒಂದು ಹೆಜ್ಜೆಯಷ್ಟೆ ಹಿಂದಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್‌ಜೈಂಟ್ಸ್ ಹಾಗೂ ಗೆಲುವಿನ ಒತ್ತಡದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್-15ರ ಹಣಾಹಣಿಯಲ್ಲಿ ಭಾನುವಾರ ಎದುರಾಗಲಿವೆ. ಅಂತಿಮ ನಾಲ್ಕರಘಟ್ಟ ಪ್ರವೇಶಿಸುವ ದೃಷ್ಟಿಯಿಂದ ಉಭಯ ತಂಡಗಳ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ. ಎರಡು ತಂಡಗಳ ನಡುವಿನ ಕದನ ಕುತೂಹಲ ಮೂಡಿಸಿದ್ದು, ಲಖನೌ ಜಯ ದಾಖಲಿಸಿದರೆ ಪ್ಲೇಆಫ್ ಹಂತವನ್ನು ಖಾತ್ರಿ ಪಡಿಸಿಕೊಳ್ಳಲಿದೆ. ರಾಹುಲ್ ಪಡೆ ಮೊದಲ ಮುಖಾಮುಖಿಯಲ್ಲಿ ರಾಯಲ್ಸ್ ಎದುರು ಅನುಭವಿಸಿದ ಸೋಲಿಗೆ ಸೇಡಿನ ತವಕದಲ್ಲಿದೆ.
    * ರಾಹುಲ್ ಪಡೆಗೆ ಸೇಡಿನ ತವಕ
    ಟೂರ್ನಿಯಲ್ಲಿ ಹೊಸ ತಂಡವಾದರೂ ಇದುವರೆಗೆ ಗುಜರಾತ್ ಬಿಟ್ಟರೆ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಎಲ್‌ಎಸ್‌ಜಿ, ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ. ಇದುವರೆಗೂ ಆಡಿರುವ 12 ಪಂದ್ಯಗಳಿಂದ 8 ಜಯ ದಾಖಲಿಸಿರುವ ರಾಹುಲ್ ಪಡೆ, 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇನ್ನು ಒಂದು ಜಯ ದಾಖಲಿಸಿದರೂ 2ನೇ ತಂಡವಾಗಿ ಪ್ಲೇಆಫ್ ಖಾತ್ರಿಪಡಿಸಿಕೊಳ್ಳಳಿದೆ. ರಾಯಲ್ಸ್ ತನ್ನ ಕಡೇ ಪಂದ್ಯವನ್ನು ಕೆಕೆಆರ್ ಎದುರು ಬುಧವಾರ (ಮೇ.18) ಆಡಲಿದೆ.
    * ರಾಯಲ್ಸ್‌ಗೆ ಗೆಲುವಿನ ಹಂಬಲ
    ರಾಜಸ್ಥಾನ ತಂಡಕ್ಕೆ ಪ್ಲೇಆಫ್ ಖಾತ್ರಿಗಾಗಿ ಗೆಲುವು ಅನಿವಾರ್ಯವಾಗಿದೆ. ಇದುವರೆಗೂ ಆಡಿರುವ 12 ಪಂದ್ಯಗಳಿಂದ 7 ಜಯ ಕಂಡಿರುವ ರಾಯಲ್ಸ್ 14 ಪಾಯಿಂಟ್ಸ್ ಹೊಂದಿದ್ದು, ಈ ಪಂದ್ಯದಲ್ಲಿ ಗೆದ್ದರೆ ಮುಂದಿನ ಹಂತಕ್ಕೆ ಮತ್ತಷ್ಟು ಸನಿಹವಾಗಲಿದೆ. ಜೋಸ್ ಬಟ್ಲರ್ (625ರನ್) ಅದ್ಭುತ ಫಾರ್ಮ್‌ನಲ್ಲಿದ್ದರೆ ತಂಡದ ಇತರ ಆಟಗಾರರು ಅವರಿಗೆ ಸೂಕ್ತ ಸಾಥ್ ನೀಡುತ್ತಿಲ್ಲ. ನಾಯಕ ಸಂಜು ಸ್ಯಾಮ್ಸನ್, ದೇವದತ್ ಪಡಿಕಲ್ ಲಯಕ್ಕೆ ಮರಳಬೇಕಿದೆ. ಉತ್ತಮ ಬೌಲಿಂಗ್ ದಾಳಿ ಹೊಂದಿರುವ ಲಖನೌಗೆ ಬಟ್ಲರ್ ಸವಾಲಾಗಬಲ್ಲರು.

    ಟೀಮ್ ನ್ಯೂಸ್:
    ಎಲ್‌ಎಸ್‌ಜಿ: ಹಿಂದಿನ ಪಂದ್ಯದಲ್ಲೂ ಸೋತಿದ್ದರೂ ತಂಡದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ.
    ಕಳೆದ ಪಂದ್ಯ: ಗುಜರಾತ್ ಟೈಟಾನ್ಸ್ ಎದುರು 62 ರನ್ ಸೋಲು

    ರಾಜಸ್ಥಾನ ರಾಯಲ್ಸ್: ರಾಸೀ ವ್ಯಾನ್ ಡರ್ ಡುಸೆನ್ ಹಾಗೂ ಕುಲದೀಪ್ ಸೆನ್ ಅವರನ್ನು ಹೊರಗಿಟ್ಟದರೆ ಜೇಮ್ಸ್ ನೀಶಾಮ್, ಕರುಣ್ ನಾಯರ್ ತಂಡಕ್ಕೆ ವಾಪಸಾಗಬಹುದು.
    ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ಎದುರು 8 ವಿಕೆಟ್ ಸೋಲು

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 1, ರಾಜಸ್ಥಾನ: 1, ಎಲ್‌ಎಸ್‌ಜಿ: 0
    ಮೊದಲ ಹಣಾಹಣಿ: ರಾಜಸ್ಥಾನ ತಂಡಕ್ಕೆ 3 ರನ್ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts