More

    ಮಾಜಿ ತಂಡಕ್ಕೆ ಆಘಾತ ನೀಡಿದ ಕುಲದೀಪ್ ಯಾದವ್; ಕೆಕೆಆರ್ ಎದುರು ಡೆಲ್ಲಿಗೆ ಸುಲಭ ಜಯ

    ಮುಂಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-15ರಲ್ಲಿ ಗೆಲುವಿನ ಹಳಿಗೇರಿತು. ಬ್ರಬೋರ್ನ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ 44 ರನ್‌ಗಳಿಂದ ಕೋಲ್ಕತ ನೈಟ್ ರೈಡರ್ಸ್‌ ತಂಡವನ್ನು ಮಣಿಸಿತು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಕೆಆರ್ ನಿರಾಸೆ ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ, ಪೃಥ್ವಿ ಷಾ (51ರನ್, 29 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಡೇವಿಡ್ ವಾರ್ನರ್ (61ರನ್, 45 ಎಸೆತ, 6 ಬೌಂಡರಿ, 2 ಸಿಕ್ಸರ್) ಉತ್ತಮ ಆರಂಭದ ನೆರವಿನಿಂದ 5 ವಿಕೆಟ್‌ಗೆ 215 ರನ್‌ಗಳಿಸಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡ, ಕುಲದೀಪ್ ಯಾದವ್ (35ಕ್ಕೆ 4), ಖಲೀಲ್ ಅಹಮದ್ (25ಕ್ಕೆ 3) ಮಾರಕ ದಾಳಿಗೆ ನಲುಗಿ 19.4 ಓವರ್‌ಗಳಲ್ಲಿ 171 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಕುಲದೀಪ್ ಯಾದವ್ ಮಾಜಿ ತಂಡದ ವಿರುದ್ಧ ಸೇಡು ತೀರಿಸಿಕೊಂಡರು.

    * ಸ್ಫೋಟಿಸಿದ ಪೃಥ್ವಿ ಷಾ-ವಾರ್ನರ್
    ಉತ್ತಮ ಫಾರ್ಮ್‌ನಲ್ಲಿರುವ ಯುವ ಬ್ಯಾಟರ್ ಪೃಥ್ವಿ ಷಾ ಹಾಗೂ ಡೇವಿಡ್ ವಾರ್ನರ್ ಜೋಡಿ ಬಿರುಸಿನ ಬ್ಯಾಟಿಂಗ್‌ನಿಂದ ಉತ್ತಮ ಆರಂಭ ನೀಡಿತು. ಕೆಕೆಆರ್ ಬೌಲರ್‌ಗಳನ್ನು ಬೆಂಡೆತ್ತಿದ ಈ ಜೋಡಿ ಪ್ರತಿ ಓವರ್‌ಗೆ ಸರಾಸರಿ 10 ರಂತೆ ರನ್ ಪೇರಿಸಿತು. ಅದ್ಭುತ ಬ್ಯಾಟಿಂಗ್‌ನಿಂದ ಗಮನಸೆಳೆದ ಪೃಥ್ವಿ-ವಾರ್ನರ್ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಈ ಜೋಡಿ 52 ಎಸೆತಗಳಲ್ಲಿ 93 ರನ್ ಜತೆಯಾಟವಾಡಿ ತಂಡ ಬೃಹತ್ ಮೊತ್ತ ಕಲೆಹಾಕಲು ಉತ್ತಮ ಅಡಿಪಾಯ ಹಾಕಿತು. ಪೃಥ್ವಿ ಷಾ ಅವರನ್ನು ಬೌಲ್ಡ್ ಮಾಡುವ ಮೂಲಕ ಈ ಜೋಡಿ ಅಬ್ಬರಕ್ಕೆ ವರುಣ್ ಚಕ್ರವರ್ತಿ ಬ್ರೇಕ್ ಹಾಕಿದರು. ಬಳಿಕ ಬಂದ ರಿಷಭ್ ಪಂತ್ (27ರನ್, 14 ಎಸೆತ, 2 ಬೌಂಡರಿ, 2 ಸಿಕ್ಸರ್) ಪೃಥ್ವಿ ಷಾಗೆ ಮುಂದುವರಿದ ಭಾಗದಂತೆ ಬ್ಯಾಟ್ ಬೀಸಿದರು. ವಾರ್ನರ್ ಹಾಗೂ ಪಂತ್ 2ನೇ ವಿಕೆಟ್‌ಗೆ 55 ರನ್ ಜತೆಯವಾಡಿತು. ಈ ವೇಳೆ ಸುನೀಲ್ ನಾರಾಯಣ್ (21ಕ್ಕೆ 2) ದಾಳಿಗೆ ಡೆಲ್ಲಿ ತಂಡದ ದಿಢೀರ್ ಕುಸಿತ ಅನುಭವಿಸಿತು. ಈ ಹಂತದಲ್ಲಿ 18 ರನ್‌ಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು. ಸ್ಲಾಗ್ ಓವರ್‌ಗಳಲ್ಲಿ ಅಕ್ಷರ್ ಪಟೇಲ್ (22) ಹಾಗೂ ಶಾರ್ದೂಲ್ ಠಾಕೂರ್ (29) ಮುರಿಯದ 6 ವಿಕೆಟ್‌ಗೆ 49 ರನ್ ಪೇರಿಸಿ ತಂಡದ ಮೊತ್ತವನ್ನು 210ರ ಗಡಿ ದಾಟಿಸಿದರು.

    * ಕೆಕೆಆರ್‌ಗೆ ಕುಲದೀಪ್ ಕಡಿವಾಣ
    ಕೆಕೆಆರ್ ತಂಡದ ಮಾಜಿ ಆಟಗಾರ ಕುಲದೀಪ್ ಯಾದವ್ ಹಾಗೂ ಖಲೀಲ್ ಅಹಮದ್ ಕಡಿವಾಣ ಹೇರಿದರು. ನಾಯಕ ಶ್ರೇಯಸ್ ಅಯ್ಯರ್ (54ರನ್, 33 ಎಸೆತ, 5 ಬೌಂಡರಿ, 2 ಸಿಕ್ಸರ್), ನಿತೀಶ್ ರಾಣಾ (30ರನ್, 20 ಎಸೆತ, 3 ಸಿಕ್ಸರ್) ಕೆಲಕಾಲ ತಿರುಗೇಟು ನೀಡಲು ಯತ್ನಿಸಿದರೂ ಕುಲದೀಪ್ ಅವಕಾಶ ನೀಡಲಿಲ್ಲ. ಹಿಂದಿನ ಪಂದ್ಯಗಳಲ್ಲಿ ಸ್ಫೋಟಿಸಿದ್ದ ರಸೆಲ್ (24), ಪ್ಯಾಟ್ ಕಮ್ಮಿನ್ಸ್ (4) ವಿಫಲರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts