More

    ಪ್ಲೇಆಫ್ ನಿರೀಕ್ಷೆಯಲ್ಲಿ ರಾಜಸ್ಥಾನ ರಾಯಲ್ಸ್; ಗೆಲುವಿನ ವಿದಾಯಕ್ಕೆ ಸಿಎಸ್‌ಕೆ ಸಜ್ಜು

    ಮುಂಬೈ: ಪ್ಲೇಆಫ್ ಹಂತಕ್ಕೇರಲು ಕೇವಲ ಒಂದು ಹೆಜ್ಜೆಯಷ್ಟೇ ಹಿಂದಿರುವ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-15ರ ತನ್ನ ಕಡೇ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಶುಕ್ರವಾರ ಬ್ರಬೋರ್ನ್ ಸ್ಟೇಡಿಯಂನಲ್ಲಿ ಎದುರಿಸಲಿದೆ. ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಸಿಎಸ್‌ಕೆ ಬಹುತೇಕ ಅನನುಭವಿಗಳಿಗೆ ಮಣೆ ಹಾಕುತ್ತಿರುವ ಸಂಜು ಸ್ಯಾಮ್ಸನ್ ಪಡೆ ಸುಲಭ ಗೆಲುವಿನ ಲೆಕ್ಕಾಚಾರದಲ್ಲಿದೆ. ಜಯದ ಜತೆಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಅವಕಾಶವನ್ನು ಹೊಂದಿದೆ. ಆರಂಭಿಕ ಪಂದ್ಯಗಳಲ್ಲಿ ಅಬ್ಬರಿಸಿದ್ದ ಜೋಸ್ ಬಟ್ಲರ್, ಸತತ 4 ಪಂದ್ಯಗಳಲ್ಲೂ ದೊಡ್ಡ ಮೊತ್ತ ಪೇರಿಸಲು ವಿಫಲರಾಗಿದ್ದಾರೆ.
    * ಆತ್ಮವಿಶ್ವಾಸದಲ್ಲಿ ರಾಜಸ್ಥಾನ
    ಟೂರ್ನಿಯಲ್ಲಿ ಇದುವರೆಗೂ 627 ರನ್ ಬಾರಿಸಿರುವ ಜೋಸ್ ಬಟ್ಲರ್, ರಾಜಸ್ಥಾನ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ. ಇದುವರೆಗೂ ತಲಾ 3 ಶತಕ, ಅರ್ಧಶತಕ ಬಾರಿಸಿದ್ದಾರೆ. ಆದರೆ, ಕಡೇ 4 ಪಂದ್ಯಗಳಲ್ಲಿ ಕನಿಷ್ಠ 30 ರನ್ ಗಡಿ ದಾಟಲು ವಿಫಲರಾಗಿದ್ದಾರೆ. ಹೀಗಾಗಿ ಬಟ್ಲರ್ ಲಯಕ್ಕೆ ಮರಳಬೇಕಿದೆ. ಮತ್ತೊಂದೆಡೆ ಯಜುವೇಂದ್ರ ಚಾಹಲ್ (24ವಿಕೆಟ್) ಬೌಲಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗುತ್ತಾ ಬಂದಿದ್ದಾರೆ. ಈ ಜೋಡಿಯೇ ತಂಡದ ಪ್ರಮುಖ ಬೆನ್ನೆಲುಬಾಗಿದೆ. ಕನ್ನಡಿಗ ಪ್ರಸಿದ್ಧ ಕೃಷ್ಣ, ಆರ್.ಅಶ್ವಿನ್, ಟ್ರೆಂಟ್ ಬೌಲ್ಟ್ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಮತ್ತೊಂದೆಡೆ, ಸಿಎಸ್‌ಕೆ ತಂಡ ಅನುಭವಿಗಳಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಗಳಿವೆ. ವೇಗಿ ದೀಪಕ್ ಚಹರ್ ಅನುಪಸ್ಥಿತಿಯಲ್ಲಿ ಮುಕೇಶ್ ಸಿಂಗ್, ಸಿಮ್ರಾನ್ ಜೀತ್ ಸಿಂಗ್, ಬೇಬಿ ಮಾಲಿಂಗ ಖ್ಯಾತಿ ಮಥೀಶಾ ಪಥಿರಾಣಾ ಗಮನಸೆಳೆಯುತ್ತಿದ್ದಾರೆ.

    ಟೀಮ್ ನ್ಯೂಸ್:
    ರಾಜಸ್ಥಾನ: ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಬಹುದು.
    ಕಳೆದ ಪಂದ್ಯ: ಲಖನೌ ವಿರುದ್ಧ 24 ರನ್ ಜಯ

    ಸಿಎಸ್‌ಕೆ: ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಸಿಎಸ್‌ಕೆ ಕೆಲ ಹೊಸ ಮುಖಗಳಿಗೆ ಅವಕಾಶ ನೀಡಬಹುದು.
    ಕಳೆದ ಪಂದ್ಯ: ಗುಜರಾತ್ ಎದುರು 7 ವಿಕೆಟ್ ಸೋಲು

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 25, ಸಿಎಸ್‌ಕೆ: 15, ರಾಜಸ್ಥಾನ : 10

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts