More

    ಟೋಕಿಯೋ ಒಲಿಂಪಿಕ್ಸ್: ಕೋಚ್​​ಗಳಿಗೆ ಬಂಪರ್ ಆಫರ್ ನೀಡಿದ ‘ಇಂಡಿಯನ್ ಅಥ್ಲೀಟ್ ಅಸೋಸಿಯೇಷನ್’

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಅಥ್ಲೀಟ್​​​ಗಳಿಗೆ ಪದಕ ಗೆಲ್ಲಲು ನೆರವಾಗುವ ತರಬೇತುದಾರನಿಗೆ (ಕೋಚ್) ಇಂಡಿಯನ್ ಅಥ್ಲೀಟ್ ಅಸೋಸಿಯೇಷನ್ ನಗದು ಹಣ ನೀಡುವುದಾಗಿ ಘೋಷಿಸಿದೆ.

    ಇದನ್ನೂ ಓದಿ: ‘ಪದಕ ಗೆಲ್ಲುವ ನನ್ನ ಕನಸು ನನಸಾಗಿದೆ’, ಅದನ್ನು ದೇಶಕ್ಕೆ ಅರ್ಪಿಸುತ್ತೇನೆ: ಮೀರಾಬಾಯಿ ಚಾನು

    ಐಒಎ ಹೇಳಿರುವ ಪ್ರಕಾರ, ಒಬ್ಬ ಕ್ರೀಡಾಪಟು ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ತರಬೇತುದಾರನಿಗೆ 12.05 ಲಕ್ಷ ರೂಪಾಯಿ ನೀಡಲಾಗುತ್ತದೆ. ಅದೇ ರೀತಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರೆ, ಕ್ರಮವಾಗಿ 10 ಮತ್ತು 7.05 ಲಕ್ಷ ರೂ. ಗಳನ್ನು ನೀಡುವುದಾಗಿ ಐಒಎ ತಿಳಿಸಿದೆ.

    ತರಬೇತುದಾರರು ಕ್ರೀಡಾಪಟುಗಳಿಗೆ ಹುರಿದುಂಬಿಸಿ, ಅವರಿಗೆ ಆತ್ಮಸ್ಥೈರ್ಯ ತುಂಬಲು ನೆರವಾದರೆ ನಗದು ಹಣ ಪಡೆಯಲು ಸಾಧ್ಯವಾಗುತ್ತದೆ. ಅದೇ ರೀತಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರ ಕೋಚ್ ವಿಜಯ್ ಶರ್ಮಾ 10 ಲಕ್ಷ ರೂ. ನಗದು ಪಡೆಯಲು ಅರ್ಹರಾಗಿದ್ದಾರೆ ಎಂದು ಐಒಎ ನಿರ್ದೇಶಕ ರಾಜೀವ್ ಮೆಹ್ತಾ ಮಾಹಿತಿ ನೀಡಿದ್ದಾರೆ.

    ಇಂದು ನಡೆದ ಮಹಿಳಾ ವೇಟ್ ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕಕ್ಕೆ ಕೊರಳೊಡ್ಡುವ ಮೂಲಕ ಭಾರತ 2ನೇ ದಿನವೇ ಪದಕ ಪಡೆದು ಶುಭಾರಂಭ ಮಾಡಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts