More

    ಐಪಿಒ ಷೇರು ಖರೀದಿಸಲು ಮುಗಿಬಿದ್ದ ಹೂಡಿಕೆದಾರರು: ಗ್ರೇ ಮಾರುಕಟ್ಟೆಯಲ್ಲಿ 75 ರ ಷೇರಿಗೆ 171 ರೂಪಾಯಿಗೆ; ಲಾಭ ಮಾಡಿಕೊಳ್ಳಲು ಭಾರೀ ಅವಕಾಶ

    ಮುಂಬೈ: ಪ್ರಥಮ್ ಇಪಿಸಿ ಪ್ರೊಜೆಕ್ಟ್ಸ್​ (Patham EPC Projects) ಐಪಿಒ ಇಂದಿನಿಂದ ಅಂದರೆ ಮಾರ್ಚ್ 11 ರಿಂದ ಪ್ರಾರಂಭವಾಗಿದೆ. ಈ ಐಪಿಒದಲ್ಲಿ ಬಿಡ್​ ಮಾಡಲು ಮಾರ್ಚ್ 13 ರವರೆಗೆ ಹೂಡಿಕೆದಾರರಿಗೆ ಅವಕಾಶವಿದೆ. ಈ ಐಪಿಒ ಮೊದಲ ದಿನದ ಮೊದಲ ಗಂಟೆಯಲ್ಲಿ 100 ಪ್ರತಿಶತ ಚಂದಾದಾರಿಕೆಯಾಗಿದೆ. ಅಂದರೆ, ಹಂಚಿಕೆ ಮಾಡಲಾಗುತ್ತಿರುವ ಒಟ್ಟು ಷೇರುಗಳ ಸಂಖ್ಯೆಯ ಸರಿಸಮನಾಗಿ ಮೊದಲ ಒಂದು ಗಂಟೆಯಲ್ಲಿ ಖರೀದಿಗೆ ಹೂಡಿಕೆದಾರರು ಅರ್ಜಿಗಳನ್ನು ಸಲ್ಲಿಸಿದ್ದಾರೆ.

    ಈ ಕಂಪನಿಯ ಐಪಿಒದ ಬೆಲೆಯನ್ನು ಪ್ರತಿ ಷೇರಿಗೆ ರೂ 71 ರಿಂದ ರೂ 75 ಕ್ಕೆ ನಿಗದಿಪಡಿಸಿದೆ.

    ಮೊದಲ ದಿನವಾದ ಮಾರ್ಚ್​ 11ರ ಮಧ್ಯಾಹ್ನದವರೆಗೆ ಲಭ್ಯ ಮಾಹಿತಿ ಪ್ರಕಾರ, ಈ ಐಪಿಒ 4.32 ಪಟ್ಟು ಚಂದಾದಾರಿಕೆಯಾಗಿದೆ. ಚಿಲ್ಲರೆ ವಿಭಾಗದಲ್ಲಿ, 7.44 ಪಟ್ಟು ಚಂದಾದಾರಿಕೆಯಾಗಿದೆ. ಅರ್ಹ ಸಾಂಸ್ಥಿಕ ಖರೀದಿದಾರರ ವಿಭಾಗದಲ್ಲಿ ಇಲ್ಲಿಯವರೆಗೆ ಯಾವುದೇ ಚಂದಾದಾರಿಕೆಯನ್ನು ಸ್ವೀಕರಿಸಲಾಗಿಲ್ಲ. ಸಾಂಸ್ಥಿಕವಲ್ಲದ ಹೂಡಿಕೆದಾರರ ವಿಭಾಗದಲ್ಲಿ 2.82 ಪಟ್ಟು ಚಂದಾದಾರಿಕೆಯನ್ನು ಸ್ವೀಕರಿಸಲಾಗಿದೆ.

    ಈ ಐಪಿಒದಲ್ಲಿ 1600 ಷೇರುಗಳ ಒಂದು ಲಾಟ್​ ಇರುತ್ತದೆ. ಕನಿಷ್ಠ ಒಂದು ಲಾಟ್​ ಅನ್ನು ಹೂಡಿಕೆದಾರರು ಖರೀದಿಸಬೇಕು. ಇದರಿಂದಾಗಿ ಚಿಲ್ಲರೆ ಹೂಡಿಕೆದಾರರು ಕನಿಷ್ಠ 1,20,000 ರೂ. ಹಣ ತೊಡಗಿಸಬೇಕಾಗುತ್ತದೆ.

    ಈ ಐಪಿಒ ಗಾತ್ರ 36 ಕೋಟಿ ರೂ. ಇದೆ. ಕಂಪನಿಯು ಐಪಿಒ ಮೂಲಕ 48 ಲಕ್ಷ ಹೊಸ ಷೇರುಗಳನ್ನು ನೀಡಲಿದೆ. ಷೇರುಗಳ ಹಂಚಿಕೆಯನ್ನು ಕಂಪನಿಯು ಮಾರ್ಚ್ 14 ರಂದು ಮಾಡಲಿದೆ.

    ಗ್ರೇ (ಬೂದು) ಮಾರುಕಟ್ಟೆಯಲ್ಲಿ ಈ ಐಪಿಒ ಷೇರುಗಳಿಗೆ ಈಗಾಗಲೇ ಉತ್ತಮ ಬೇಡಿಕೆ ಇದೆ. ಈಗ ಈ ಷೇರುಗಳು ರೂ 96 ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿವೆ. ಅಂದರೆ, 75 ರೂಪಾಯಿ ಷೇರಿಗೆ 171 ರೂಪಾಯಿ ಬೆಲೆ ಬರುತ್ತಿದೆ. ಇದೇ ಟ್ರೆಂಡ್ ಈ ಷೇರು ಪಟ್ಟಿಯಾಗುವವರೆಗೂ ಮುಂದುವರಿದರೆ, ಐಪಿಒದಲ್ಲಿ ಮೊದಲ ದಿನವೇ ಹೂಡಿಕೆದಾರರಿಗೆ 100 ಪ್ರತಿಶತಕ್ಕಿಂತ ಹೆಚ್ಚಿನ ಲಾಭವನ್ನು ದೊರೆಯುತ್ತದೆ.

    ಬುಲೆಟ್​ ಟ್ರೇನ್​ನಂತೆ ಓಡುತ್ತಿರುವ ಷೇರು 1,166% ಹೆಚ್ಚಳ: ರೈಲು ಕಂಪನಿಗೆ ಈಗ ರೂ. 1900 ಕೋಟಿಯ ಟೆಂಡರ್​

    ಅನೇಕ ತಜ್ಞರು ಈ ಷೇರುಗಳನ್ನು ಖರೀದಿಸಲು ಸಲಹೆ ನೀಡಿದ್ದಾರೆ: ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿದರೆ ಲಾಭ ಖಚಿತ

    ರೂ 290ರಿಂದ 90ಕ್ಕೆ ಕುಸಿದ ಟಾಟಾ ಷೇರು: ಈಗ ಮತ್ತೆ ಬೇಡಿಕೆಯಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts