More

    2020ರಲ್ಲಿ ಷೇರುಹೂಡಿಕೆದಾರರಿಗೆ 32.5 ಲಕ್ಷ ಕೋಟಿ ರೂಪಾಯಿ ಲಾಭ

    ಮುಂಬೈ: ಜಗತ್ತನ್ನೆ ತಲ್ಲಣಗೊಳಿಸಿದ ವರ್ಷ 2020. ಆದಾಗ್ಯೂ ಭಾರತೀಯ ಷೇರುಪೇಟೆ ಹೂಡಿಕೆದಾರರ ಸಂಪತ್ತು ಕಳೆದ ವರ್ಷ 32.5 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ. ಶೇಕಡ 15.75ರ ಪ್ರಗತಿಯನ್ನು ಸೆನ್ಸೆಕ್ಸ್ ದಾಖಲಿಸಿದೆ. ಇದೇ ರೀತಿ ನಿಫ್ಟಿ ಶೇಕಡ 14.90 ರಿಟರ್ನ್ಸ್ ಕೊಟ್ಟಿದೆ. ನಿಫ್ಟಿ 14,000ದ ಗಡಿ ದಾಟಿದರೆ, ಸೆನ್ಸೆಕ್ಸ್ 47, 896.97 ಅಂಶಕ್ಕೇರಿ ಸಾರ್ವಕಾಲಿಕ ಎತ್ತರದ ದಾಖಲೆ ಬರೆದ ವರ್ಷವೂ ಹೌದು.

    ಮಾರುಕಟ್ಟೆ ಬಂಡವಾಳದ ದೃಷ್ಟಿಯಿಂದ ಗಮನಿಸಿದರೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಲಿಸ್ಟೆಡ್ ಕಂಪನಿಗಳ ಷೇರು ಮೌಲ್ಯ ನಿನ್ನೆ ಅನ್ವಯವಾಗುವಂತೆ 188 ಲಕ್ಷ ಕೋಟಿ ರೂಪಾಯಿ. 2019ರ ಡಿಸೆಂಬರ್​ 31ರ ಲೆಕ್ಕಾಚಾರ ಪ್ರಕಾರ ಈ ಮೌಲ್ಯ 155.53 ಲಕ್ಷ ಕೋಟಿ ರೂಪಾಯಿ ಇತ್ತು. ಕಂಪನಿಗಳ ಷೇರುಗಳನ್ನು ಅವಲೋಕಿಸಿದರೆ ಇಂಡಸ್​ಇಂಡ್ ಬ್ಯಾಂಕ್​ ಟಾಪ್ ಲೂಸರ್ ಆಗಿದ್ದು ಶೇಕಡ 46 ನಷ್ಟ ಅನುಭವಿಸಿದೆ. ಕೋಲ್ ಇಂಡಿಯಾ ಶೇಕಡ 36, ಇಂಡಿಯನ್ ಆಯಿಲ್ ಶೇಕಡ 28 ನಷ್ಟ ಅನುಭವಿಸಿವೆ.

    ಇದನ್ನೂ ಓದಿ: Web Exclusive|ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಕಡಿತ

    ನಿಫ್ಟಿ ಫಾರ್ಮಾ ಲಿಸ್ಟ್​ನಲ್ಲಿರುವ ಷೇರುಗಳು ಶೇಕಡ 60 ಬೆಳವಣಿಗೆ ದಾಖಲಿಸಿದರೆ, ನಿಫ್ಟಿ ಐಟಿ ಸೂಚ್ಯಂಕ ಶೇಕಡ 55, ನಿಫ್ಟಿ ಮೆಟಲ್​ ಲಿಸ್ಟ್​ನ ಷೇರುಗಳು ಶೇಕಡ 16, ನಿಫ್ಟಿ ಎಫ್​ಎಂಸಿಜಿ ಲಿಸ್ಟ್​ ಷೇರುಗಳು ಶೇಕಡ 15ರ ತನಕ ಲಾಭಾಂಶವನ್ನು 2020ರ ಜನವರಿ 1ರಿಂದ ಡಿಸೆಂಬರ್ 31ರ ತನಕ ಅವಧಿಯಲ್ಲಿ ದಾಖಲಿಸಿವೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ವಿಷಿಂಗ್ ಯೂ ಎ ಹ್ಯಾಪಿ 2021 !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts