More

    ಹಾವೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

    ಹಾವೇರಿ: ಹಗ್ಗ ಜಗ್ಗಾಟ, ಮ್ಯೂಸಿಕಲ್ ಚೇರ್, ಓಟದ ಸ್ಪರ್ಧೆ, ಫ್ಯಾನ್ಸಿ ಡ್ರೆಸ್, ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಮಹಿಳಾ ಮಣಿಗಳು ಮಿಂಚಿದರು. ಪುರುಷರಿಗಿಂತ ನಾವೇನೂ ಕಮ್ಮಿ ಇಲ್ಲ ಎಂಬಂತೆ ಮಹಿಳೆಯರು ಪಾಲ್ಗೊಂಡು ಕ್ರೀಡಾ ಸ್ಪೂರ್ತಿ ಮೆರೆದರು.
    ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
    100 ಮೀಟರ್ ಓಟದ ಸ್ಪರ್ಧೆಯ 40 ವರ್ಷದೊಳಗಿನ ಮಹಿಳೆಯರ ವಿಭಾಗದಲ್ಲಿ ಭಾಗ್ಯಲಕ್ಷ್ಮೀ ಬೇವಿನಹಳ್ಳಿ, ಎಸ್.ಯು.ಪೂಜಾರ, ಚಂದ್ರಮ್ಮ ಮೂಲಿಮನಿ ಹಾಗೂ 40 ವರ್ಷ ಮೇಲ್ಪಟ್ಟ ಸ್ಪರ್ಧೆಯಲ್ಲಿ ಹಾವೇರಿಯ ಶಾಬೀರಾಬಾನು ದೊಡ್ಮನಿ, ರಾಣೆಬೆನ್ನೂರಿನ ಸುಜಾತಾ ಉಪ್ಪಾರ, ಶಿಗ್ಗಾಂವಿಯ ಎಂ.ಎಂ.ತೋಟದ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.
    ಮ್ಯೂಸಿಕಲ್ ಚೇರ್ ವಿಭಾಗದಲ್ಲಿ ಭಾರತಿ ವಾಲಿ, ಜಯಶ್ರೀ ಲೋಕನಗೌಡ್ರ ಹಾಗೂ ಕಸ್ತೂರಿ ಗಿರ್ಜಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. 40 ವರ್ಷದೊಳಗಿನ ವಯೋಮಾನದವರಿಗಾಗಿ ಆಯೋಜಿಸಿದ್ದ 4/100 ರಿಲೇ ಸ್ಪರ್ಧೆಯಲ್ಲಿ ರಂಜನಾ ಭಟ್, ರೇಖಾ ಬಿ.ಎಂ., ನಂದಿನಿ ಐ.ಬಿ. ಹಾಗೂ ರೇಖಾ ಹಾಲಮಠ ಪ್ರಥಮ ಹಾಗೂ ಬ್ಯಾಡಗಿ ತಾಲೂಕಿನ ರೇಣುಕಾ ಲಮಾಣಿ, ಮಲ್ಲಮ್ಮ ಚಲವಾದಿ, ಮಮತಾ ಯತ್ನಳ್ಳಿ, ಶಕುಕಂತಲಾ ಕೊಕ್ಕನವರ ದ್ವಿತೀಯ ಸ್ಥಾನ ಪಡೆದುಕೊಂಡರು.
    ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ರಾಜೇಶ್ವರಿ ಸಾರಂಗಮಠ ಪ್ರಥಮ, ಪುಷ್ಪಾ ಸೊಲಬನಗೌಡರ ದ್ವಿತೀಯ, ರತ್ನಾಬಾಯಿ ತೃತೀಯ, ಪಿ.ಆರ್.ಭಾಗ್ಯಲಕ್ಷ್ಮೀ ನಾಲ್ಕನೇ ಸ್ಥಾನ, ಜ್ಯೋತಿ ಜಂಬಗಿ ಐದನೇ ಹಾಗೂ ವಿದ್ಯಾ ಹಾವನೂರ 6ನೇ ಸ್ಥಾನ ಪಡೆದುಕೊಂಡರು.
    ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಅಬಕಾರಿ ಇಲಾಖೆ ಉಪ ಆಯುಕ್ತೆ ಶೈಲಜಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗೀತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಎಸ್, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ತಿಮ್ಮೇಶಕುಮಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕುರಹಟ್ಟಿ, ಗೀತಾ ಬಾಳಿಕಾಯಿ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts