More

    ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ … ಕನ್ನಡದಲ್ಲಿ ಮಾತಾಡಿದ ಕಿಚ್ಚ

    ಪಣಜಿ: ಜನವರಿ 16ರಿಂದ 24ರವರೆಗೆ ಗೋವಾದ ಪಣಜಿಯಲ್ಲಿ ಆಯೋಜನೆಗೊಂಡಿರುವ 51ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಶನಿವಾರ ಸಂಜೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಎಂಟು ದಿನಗಳ ಕಾಲ ನಡೆಯುವ ಈ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ದೇಶವಿದೇಶಗಳ 224 ಸಿನಿಮಾಗಳು ಪ್ರದರ್ಶನವಾಗಲಿವೆ.

    ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣನ ಜತೆ ರಚಿತಾ ರಾಮ್?

    ಡಾ. ಶ್ಯಾಮಪ್ರಸಾದ್​ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ನಡೆದ ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನಡೆದಿದೆ. ಈ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ನಟ-ನಿರ್ದೇಶಕ ಸುದೀಪ್​, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಹಿರಿಯ ನಿರ್ದೇಶಕ ಪ್ರಿಯದರ್ಶನ್ ಮುಂತಾದವರು ಹಾಜರಿದ್ದರು. ಈ ಸಂದರ್ಭದಲ್ಲಿ ಸುದೀಪ್​, ಗಣ್ಯರೊಂದಿಗೆ ಸೇರಿ ದೀಪ ಹಚ್ಚಿ ಈ ಚಿತ್ರೋತ್ಸವಕ್ಕೆ ಚಾಲನೆ ಕೊಟ್ಟರು.

    ವಿಶೇಷವೆಂದರೆ, ಸುದೀಪ್​ ಕನ್ನಡದಲ್ಲೇ ತಮ್ಮ ಮಾತುಗಳನ್ನು ಪ್ರಾರಂಭಿಸಿದ್ದು. ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರತಿಯೊಬ್ಬರಿಗೂ ಕನ್ನಡ ಚಿತ್ರರಂಗದ ಪರವಾಗಿ ಹಾಗೂ ಕರ್ನಾಕಟದ ಪರವಾಗಿ ಈ ಕಿಚ್ಚನಿಂದ ನಮಸ್ತೆ …’ ಎಂದು ಹೇಳಿದರು.

    ಆ ನಂತರ ಇಂಗ್ಲೀಷ್​ನಲ್ಲಿ ತಮ್ಮ ಮಾತು ಮುಂದುವರೆಸಿದ ಅವರು, ‘ಜಗತ್ತಿನಲ್ಲಿ ಜನರನ್ನು ಬೆಸೆಯಬೇಕೆಂದರೆ, ಅದು ಸಿನಿಮಾ ಮತ್ತು ಕ್ರೀಡೆಯಿಂದ ಮಾತ್ರ ಸಾಧ್ಯ. ಆ ಸಿನಿಮಾದಿಂದಾಗಿಯೇ ನಾವೆಲ್ಲಾ ಇಲ್ಲ ಜತೆಯಾಗಿದ್ದೇವೆ. ಕರೊನಾದಿಂದ ಜತ್ತಿನಾದ್ಯಂತ ಸಂಬಂಧಗಳು ಸಾಕಷ್ಟು ವೃದ್ಧಿಯಾಗಿವೆ. ಕರೊನಾದಿಂದ ಜನ ಹತ್ತಿರವಾಗಿದ್ದು, ಸಿನಿಮಾ ಸಹ ಹೊಸ ಕರೊನಾ ಆಗಲಿ, ಜನರನ್ನು ಬೆಸೆಯಲಿ ಎಂಬುದು ನನ್ನ ಹಾರೈಕೆ’ ಎಂದು ಹೇಳಿದರು.

    ಇದನ್ನೂ ಓದಿ: ಚಿತ್ರರಂಗದಲ್ಲಿ ಸಂಕ್ರಾಂತಿ; ಹಳೇ ಲಯದತ್ತ ಚಿತ್ರೋದ್ಯಮ..

    ಈ ಚಿತ್ರೋತ್ಸವದಲ್ಲಿ ಚಿತ್ರಪ್ರದರ್ಶನದ ಜತೆಗೆ ಹಲವು ಸೆಮಿನಾರುಗಳು ಸಹ ಆಯೋಜನೆಗೊಂಡಿವೆ. ಇಟಲಿಯ ಜನಪ್ರಿಯ ಛಾಯಾಗ್ರಾಹಕ ವಿಟ್ಟೋರಿಯೋ ಸ್ಟೊಟೇರೋ ಅವರಿಗೆ ಜೀವನಮಾನದ ಅತ್ಯುತ್ತಮ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

    ಡಾರ್ಲಿಂಗ್ ಕೃಷ್ಣನ ಜತೆ ರಚಿತಾ ರಾಮ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts