More

    ರೈತರಿಗೆ ಜೀವ ತುಂಬಿದ ಹವ್ಯಕ ವಾಟ್ಸ್​ಆಪ್ ಗ್ರೂಪ್

    ಸಾಗರ: ಕೃಷಿ ಉತ್ಪನ್ನಗಳನ್ನು ಬೆಳೆದ ರೈತರು ಲಾಕ್​ಡೌನ್ ಹಿನ್ನೆಲೆಯಲ್ಲಿ ಬೇರೆಡೆ ಸಾಗಿಸಲಾಗದೆ ಪರದಾಡುವಂತಾಗಿತ್ತು. ಇಂತಹ ಸಂದರ್ಭದಲ್ಲಿ ಉತ್ಪನ್ನಗಳ ಮಾರಾಟಕ್ಕೆ ರೈತರು ಹಾಗೂ ಗ್ರಾಹಕರ ನಡುವೆ ಸೇತುವೆಯಾಗಿ ಸಾಗರ ಹವ್ಯಕ ವಾಟ್ಸ್​ಆಪ್ ಗ್ರೂಪ್ ಕಾರ್ಯನಿರ್ವಹಿಸಿ ರೈತರಿಗೆ ಆಸರೆಯಾಯಿತು.

    ಹೌದು… ಕರೊನಾ ಹೊಡೆತಕ್ಕೆ ಸಿಲುಕಿ ಪ್ರತಿಯೊಂದು ಕ್ಷೇತ್ರವೂ ನಲುಗಿದೆ. ಇದಕ್ಕೆ ಕೃಷಿ ವಲಯವೂ ಹೊರತಲ್ಲ. ಇಂತಹ ಸಂದರ್ಭದಲ್ಲಿ ರೈತರ ಕಣ್ಣೀರು ಒರೆಸುವ ಕೆಲಸವನ್ನು ಸಾಗರ ಹವ್ಯಕ ವಾಟ್ಸ್​ಆಪ್ ಗ್ರೂಪ್ ಮಾಡಿದೆ.

    ಕೆಳಗಿನಮನೆ ಗಣಪತಿ ಹೆಗಡೆ ಹೆಚ್ಚಿನ ಮಗೆ ಸೌತೆಕಾಯಿ ಬೆಳೆದಿದ್ದರು. ಲಾಕ್​ಡೌನ್​ನಿಂದ ಇದನ್ನು ಪೇಟೆಗೆ ಕೊಂಡೊಯ್ಯಲಾಗದ ಸ್ಥಿತಿ ಎದುರಾಯಿತು. ಈ ನಿಟ್ಟಿನಲ್ಲಿ ಸಾಗರದಲ್ಲಿ ಹವ್ಯಕ ಸಾಗರ ವಾಟ್ಸ್​ಆಪ್ ಗ್ರೂಪ್ ನಡೆಸುತ್ತಿರುವ ಕುಗ್ವೆಯ ನಂದನ ರಾವ್, ಕೆ.ಪಿ.ಜಗದೀಶ್ ಮತ್ತು ಅಶೋಕ ಸಿದ್ದನಕೈ ಮಗೆಸೌತೆ ಬಗ್ಗೆ ವಿವರವೊಂದನ್ನು ತಮ್ಮ ಜಾಲತಾಣದಲ್ಲಿ ಪೋಸ್ಟ್ ಮಾಡಿದರು. ಗ್ರಾಹಕರು ಮನೆಗೆ ಬಂದು ಖರೀದಿಸಿದ್ದು 10 ದಿನಗಳಲ್ಲಿ ಎರಡೂವರೆ ಕ್ವಿಂಟಾಲ್ ಮಗೆಕಾಯಿ ಮಾರಾಟವಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆಧುನಿಕ ತಂತ್ರಜ್ಞಾನ ನೆರವಾಗಿದೆ.

    ಮಗೆಕಾಯಿಗೆ ಭಾರಿ ಡಿಮ್ಯಾಂಡ್: ಮಲೆನಾಡು, ಉತ್ತರಕನ್ನಡ ಮತ್ತು ದಕ್ಷಿಣಕನ್ನಡ ಭಾಗದಲ್ಲಿ ಮಗೆಸೌತೆ ಬೆಳೆಯುತ್ತಾರೆ. ಬಳ್ಳಿಯಲ್ಲಿ ಬಿಡುವ ಮಗೆಸೌತೆಗೆ ಭಾರಿ ಡಿಮ್ಯಾಂಡ್. ಅದರಲ್ಲೂ ಮಳೆಗಾಲಕ್ಕೆ ಇದು ಹೇಳಿ ಮಾಡಿಸಿದ ಆಹಾರ. 6 ತಿಂಗಳಿಗೂ ಹೆಚ್ಚು ಕಾಲ ಕೆಡದಂತೆ ಸಂರಕ್ಷಿಸಬಹುದು.

    ಶಿರವಂತೆ, ಬರದವಳ್ಳಿ, ವರದಾ ನದಿಯ ಉಪನದಿಗಳ ದಂಡೆಗಳಲ್ಲಿ ಬೆಳೆಯುತ್ತಾರೆ. ಇನ್ನು ಕಸಬಾ ಹೋಬಳಿಯಲ್ಲಿಯೂ ಈ ಬೆಳೆ ನೋಡುತ್ತೇವೆ. ಲಾಕ್​ಡೌನ್​ನಿಂದ ಸಾಗರ ನಗರಕ್ಕೆ ಬೆಳೆಗಾರರೇ ಕೆಲವೆಡೆ ತಂದು ಮಾರಾಟ ಮಾಡಿದರು.

    ಶಾಸಕ ಹಾಲಪ್ಪ ಅವರ ಎಲ್​ಬಿ ಕಾಲೇಜಿನ ಒಡನಾಡಿಗಳು ಒಂದು ತಂಡ ರಚಿಸಿಕೊಂಡು ಸಾಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಳೆಗಾರರೇ ತರಕಾರಿಗಳನ್ನು ನೇರ ಮಾರಾಟ ಮಾಡುವ ವ್ಯವಸ್ಥೆ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts