More

    ಮಧ್ಯವರ್ತಿಗಳ ಬಳಿ ಹೋಗಿ ಮೋಸ ಹೋಗದಿರಿ: ಅಂಗವಿಕಲರಿಗೆ ದಾವಣಗೆರೆ ಡಿಸಿ ಮಹಾಂತೇಶ್ ಕಿವಿಮಾತು

    ದಾವಣಗೆರೆ: ನಿಮ್ಮ ಕೆಲಸ ಮಾಡಲು ನಾವಿದ್ದೇವೆ. ನಿಮ್ಮ ಹಕ್ಕು, ಸೌಲಭ್ಯಗಳನ್ನು ಪಡೆಯಲು ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ. ಮಧ್ಯವರ್ತಿಗಳ ಬಳಿ ಹೋಗಿ ಮೋಸ ಹೋಗದಿರಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಂಗವಿಕಲರಿಗೆ ಕಿವಿಮಾತು ಹೇಳಿದರು.

    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಕುರಿತು ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಯುಡಿಐಡಿ ಕಾರ್ಡ್ ಮಾಡಿಸಲು 2 ಸಾವಿರ ರೂ. ಹಣ ಕೇಳುತ್ತಿದ್ದಾರೆ ಎಂದು ಸಂಕಲ್ಪ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ದೂರಿದಾಗ ಪ್ರತಿಕ್ರಿಯಿಸಿದ ಡಿಸಿ, ಕಾರ್ಡ್ ವಿತರಣೆ ಉಚಿತವಾಗಿದೆ. ವೈದ್ಯರು ಅಥವಾ ಮಧ್ಯವರ್ತಿಗಳು ಹಣ ಕೇಳಿದರೆ ಸಾರ್ವಜನಿಕರು ನೇರವಾಗಿ ಜಿಲ್ಲಾಧಿಕಾರಿ ಕಚೇರಿ ದೂ.ಸಂ. 08192-257778 ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದರು.

    ನಕಲಿ ಅಂಗವಿಕಲರನ್ನು ತಪಾಸಣೆಗೆ ಒಳಪಡಿಸುವ ಅವಶ್ಯಕತೆ ಇದೆ ಎಂದು ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ ಹೇಳಿದಾಗ ಶೇಕಡವಾರು ಅಂಗವಿಕಲತೆ ಬಗ್ಗೆ ತಜ್ಞರ ಸಮಿತಿ ರಚಿಸಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಡಿಸಿ ಸ್ಪಷ್ಟಪಡಿಸಿದರು.

    ಮಾರ್ಚ್ 31 ರೊಳಗೆ ಅವೈಜ್ಞಾನಿಕ ರ‌್ಯಾಂಪ್‌ಗಳನ್ನು ತೆರವುಗೊಳಿಸಿ ವೈಜ್ಞಾನಿಕವಾಗಿ ನಿರ್ಮಿಸಿ ವರದಿ ನೀಡಬೇಕು. ಅಗತ್ಯವಿರುವೆಡೆ ಶೌಚಗೃಹ ನಿರ್ಮಿಸುವಂತೆಯೂ ಜಿಲ್ಲಾಧಿಕಾರಿ ಹೇಳಿದರು.

    ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಆನಂದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್‌ಕುಮಾರ್, ಸಿಆರ್‌ಸಿ ನಿರ್ದೇಶಕ ಜ್ಞಾನವೇಲು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಾನಂದ ಕುಂಬಾರ, ಗೋಪಾಲಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts