More

    ಮೈಸೂರಿನಲ್ಲಿ ಅಂತರ್ಜಾತಿ, ಅಂತರಧರ್ಮೀಯರ ಮದುವೆ ಸಮಾವೇಶ

    ಮೈಸೂರು: ಜನಸ್ಪಂದನ ಟ್ರಸ್ಟ್ ವತಿಯಿಂದ ಅಂತರ್ಜಾತಿ, ಅಂತರಧರ್ಮೀಯರ ಮದುವೆ ಸಮಾವೇಶವನ್ನು ಶೀಘ್ರದಲ್ಲೇ ಮೈಸೂರಿನಲ್ಲಿ ಆಯೋಜನೆ ಮಾಡಲಾಗುವುದು ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತಿಳಿಸಿದರು.


    ಜ್ಞಾನ ಮತ್ತು ಶಿಕ್ಷಣ ಹೆಚ್ಚಾದರೂ ಜಾತಿ ವ್ಯವಸ್ಥೆ ಗಟ್ಟಿಯಾಗಿ ಬೇರೂರಿದೆ. ಈಗಿನ ಆಧುನಿಕ ಸಮಾಜವು ಜಾತಿ ವ್ಯವಸ್ಥೆಯತ್ತ ಸಾಗುತ್ತಿದೆ. ಮದುವೆ ಸಂದರ್ಭದಲ್ಲಿ ವ್ಯಕ್ತಿತ್ವ ನೋಡುತ್ತಿಲ್ಲ, ಜಾತಿ ನೋಡುತ್ತಿದ್ದಾರೆ. ಮಾರ್ಯದೆಗೇಡು ಹೆಸರಿನಲ್ಲಿ ಹೆಣ್ಣು ಮಕ್ಕಳು ಹತ್ಯೆಯೂ ನಡೆಯುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಈ ಕುರಿತು ಜಾಗೃತಿ ಮೂಡಿಸಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


    ಬಹಳಷ್ಟು ಅಂತರ್ಜಾತಿ, ಅಂತರಧರ್ಮೀಯರ ಮದುವೆ ಯಶಸ್ವಿಯಾಗಿವೆ. ಬೇರೆ ಜಾತಿ, ಧರ್ಮದವರಾದರೂ ಪತಿ-ಪತ್ನಿಯಾಗಿ ಸೌಹಾರ್ದ ಬದುಕು ಸಾಗಿಸುತ್ತಿದ್ದಾರೆ. ಅಂತಹ ದಂಪತಿಗಳನ್ನು ಕರೆದು ಸಮಾವೇಶದಲ್ಲಿ ಸನ್ಮಾನಿಸಲಾಗುವುದು ಎಂದರು.


    ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಂತರ್ಜಾತಿ, ಅಂತರಧರ್ಮೀಯರ ಮದುವೆಗಾಗಿ ಪ್ರತ್ಯೇಕ ವಿಭಾಗ ತೆರೆಯಬೇಕು. ಈ ಕುರಿತು ಉಂಟಾಗುವ ಸಮಸ್ಯೆಗಳ ನಿವಾರಣೆಗೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ವಿಭಾಗ ತೆರೆಯಬೇಕು. ಇವರ ಮಕ್ಕಳಿಗೆ ಮೀಸಲಾತಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.


    ರಾಜ್ಯದಲ್ಲಿ ಕಳೆದ ವರ್ಷ 20,365 ಅಂತರ್ಜಾತಿ, ಅಂತರಧರ್ಮೀಯರ ಮದುವೆಗಳು ನೋಂದಣಿಯಾಗಿವೆ. ಈ ವಿಷಯದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿ ಇದೆ. ಯಾದಗಿರಿ ಜಿಲ್ಲೆ ಕೊನೇ ಸ್ಥಾನದಲ್ಲಿ ಇದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು ಎಂದು ಹೇಳಿದರು.


    ಕಿರುಕುಳ, ದೌರ್ಜನ್ಯ ಎಸಗಿದರೆ ನಮ್ಮ ಟ್ರಸ್ಟ್‌ನ ಸಹಾಯವಾಣಿ ಸಂಖ್ಯೆಗೆ (9886752274, 9880390463) ಕರೆ ಮಾಡಬಹುದು. ಪೊಲೀಸ್, ತಹಸೀಲ್ದಾರ್ ಸೇರಿದಂತೆ ಇತರ ಅಧಿಕಾರಿಗಳ ನೆರವು ಪಡೆದುಕೊಂಡು ಸಂತ್ರಸ್ತರ ಬೆಂಬಲಕ್ಕೆ ನಿಲ್ಲುತ್ತೇವೆ. ಅಂತರ್ಜಾತಿ, ಅಂತರಧರ್ಮೀಯರ ಮದುವೆಯಾದವರು ಸಹ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದರು.


    ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಸಾಹಿತಿ ಪ್ರೊ.ಕಾಳೆಗೌಡ ನಾಗವಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts