More

    ಅಂತರ ಜಿಲ್ಲಾ ಗಡಿ ಅಪರಾಧ ತಡೆ ಸಭೆ

    ಕುಶಾಲನಗರ: ಪಟ್ಟಣದ ಪೊಲೀಸ್ ಉಪವಿಭಾಗದ ನೇತೃತ್ವದಲ್ಲಿ ಶುಕ್ರವಾರ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್ ನೇತೃತ್ವದಲ್ಲಿ ಅಂತರ ಜಿಲ್ಲಾ ಗಡಿ ಅಪರಾಧ ತಡೆ ಕುರಿತು ಸಭೆ ನಡೆಯಿತು.

    ಸಭೆಯಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಗಡಿ ಚೆಕ್ ಪೋಸ್ಟ್‌ಗಳಲ್ಲಿ ಸಮನ್ವಯ ಸಾಧಿಸುವುದು, ಕಟ್ಟುನಿಟ್ಟಾಗಿ ತಪಾಸಣೆ ಮಾಡುವುದರ ಜತೆಗೆ ಅಕ್ರಮ ಚಟುವಟಿಕೆಗೆ ತಡೆ ಹಾಕುವುದು ಮುಖ್ಯ ಉದ್ದೇಶವಾಗಿದೆ. ಗಡಿ ಭಾಗಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುವುದು, ಬಳಸುವುದನ್ನು ಕೂಡ ತಡೆಹಿಡಿಯಲು ಸುದೀರ್ಘ ಚರ್ಚೆ ನಡೆಸಲಾಯಿತು.

    ಗಾಂಜಾ ಮಾರಾಟಗಾರರು ಅಂದರೆ ಡ್ರಗ್ ಪೆಡ್ಲರ್‌ಗಳ ಬಗ್ಗೆಯೂ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಅನುಚಿತವಾಗಿ ಪೋಸ್ಟ್ ಮಾಡುವವರ ಬಗ್ಗೆಯೂ ಚರ್ಚೆ ನಡೆಯಿತು. ಹಳೆಯ ಅಪರಾಧಿಗಳು, ವಾಹನ ಕಳ್ಳರು, ದರೋಡೆ, ಸುಲಿಗೆ, ಕನ್ನ-ಕಳವು ಮಾಡುವರರು, ನಾಪತ್ತೆ ಆಗಿರುವ ಮಕ್ಕಳು, ಮಹಿಳೆಯರ ಬಗ್ಗೆ, ಗುರುತು ಪತ್ತೆಯಾಗದಿರುವ ಮೃತ ದೇಹಗಳ ಬಗ್ಗೆ, ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಹಲವು ದೂರುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.

    ಅಂತರ ಜಿಲ್ಲಾ ಗಡಿ ಅಪರಾಧ ಸಭೆಯಲ್ಲಿ ಡಿವೈಎಸ್ಪಿಗಳಾದ ಆರ್.ವಿ.ಗಂಗಾಧರಪ್ಪ, ಅಶೋಕ್, ಪ್ರಮೋದ್ ಮತ್ತು ಸಿಪಿಐಗಳಾದ ಪ್ರಕಾಶ್, ರಾಕೇಶ್, ಸಕಲೇಶಪುರ, ಹುಣಸೂರು, ಹೊಳೆನರಸೀಪುರ, ಪುತ್ತೂರು ಉಪ ವಿಭಾಗದ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts