More

    ಆಗಸ್ಟ್​ 5ರಂದು ಅಯೋಧ್ಯೆ, ಜಮ್ಮು-ಕಾಶ್ಮಿರದಲ್ಲಿ ಉಗ್ರದಾಳಿಯ ಸಂಭವ; ಭದ್ರತೆ ಮತ್ತಷ್ಟು ಬಿಗಿ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಅಯೋಧ್ಯೆಯಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ದಳಗಳು ಎಚ್ಚರಿಕೆ ನೀಡಿವೆ ಎಂದು ಉನ್ನತ ಮೂಲಗಳಿಂದ ವರದಿಯಾಗಿದೆ.

    ಆಗಸ್ಟ್​ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆ ನಡೆಯಲಿದೆ. ಹಾಗೇ ಜಮ್ಮುಕಾಶ್ಮೀರದಲ್ಲಿ ಆರ್ಟಿಕಲ್​ 370ನ್ನು ರದ್ದುಗೊಳಿಸಿ ಆ.5ಕ್ಕೆ ಒಂದು ವರ್ಷ ತುಂಬುತ್ತದೆ. ಹಾಗಾಗಿ ಅಂದು ಅಯೋಧ್ಯೆ ಮತ್ತು ಜಮ್ಮು-ಕಾಶ್ಮೀರ ಎರಡೂ ಕಡೆಗಳಲ್ಲಿ ಉಗ್ರದಾಳಿಯ ಸಂಭವ ಇದೆ ಎಂದು ಹೇಳಲಾಗಿದೆ.

    ಪಾಕಿಸ್ತಾನಿ ಸೇನೆ ತರಬೇತಿ ನೀಡಿರುವ ಹಲವು ತಾಲಿಬಾನ್​ ಉಗ್ರರು ಈ ದಾಳಿಗೆ ಹೊಂಚು ಹಾಕಿದ್ದಾರೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಕೆಎಫ್​ಸಿ ಪಾದರಕ್ಷೆ ಬಿಡುಗಡೆ ಮಾಡಿದ ಕ್ರೋಕ್ಸ್​; ನೋಡಲಷ್ಟೇ ಅಲ್ಲ, ವಾಸನೆಯೂ ಪಕ್ಕಾ ಫ್ರೈಡ್ ಚಿಕನ್​​ನಂತೆ !

    ಅಷ್ಟೇ ಅಲ್ಲ ಸ್ವಾತಂತ್ರ್ಯೋತ್ಸವದಂದೂ ಉಗ್ರದಾಳಿಯಾಗುವ ಸಂಭವ ಇದೆ ಎಂದು ಹಿಂದೆಯೇ ಗುಪ್ತಚರ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರ, ಅಯೋಧ್ಯೆ, ದೆಹಲಿಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

    ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆ ಕೂಡ ಈಗಾಗಲೇ ಬಿಜೆಪಿ ನಾಯಕರಿಗೆ ಬೆದರಿಕೆ ಹಾಕಿದೆ. (ಏಜೆನ್ಸೀಸ್​)

    ರಿಯಾ ವಿರುದ್ಧ 15 ಕೋಟಿ ರೂ. ಕದ್ದ ಆರೋಪ, ಎಫ್​ಐಆರ್​ ವಿವರ ಕೇಳಿದ ಜಾರಿ ನಿರ್ದೇಶನಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts