More

    ಇನ್‌ಸ್ಪೆಕ್ಟರ್‌ಗೆ 4 ವರ್ಷ, ಪತ್ನಿಗೆ 3 ವರ್ಷ ಜೈಲು ಶಿಕ್ಷೆ; ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣ

    ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ ಒಬ್ಬರಿಗೆ 4 ವರ್ಷ ಮತ್ತು ಅವರ ಪತ್ನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ 23ನೇ ಅಪರ ಸಿಟಿ ಸಿವಿಲ್ ಸೆಷನ್ ಕೋರ್ಟ್ ತೀರ್ಪು ನೀಡಿದೆ.

    ಇನ್‌ಸ್ಪೆಕ್ಟರ್ ಶಮಿ ಉರ್ ರೆಹಮಾನ್ ಮತ್ತು ಇವರ ಪತ್ನಿ ಬಿಲ್ಕಿಶ್ ಜಹನ್ ಅಲಿಯಾಸ್ ಷರ್‌ತಾಜ್ ಬೇಗಂ ಶಿಕ್ಷೆಗೆ ಗುರಿಯಾದವರು. 2006ರಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಆಗಿದ್ದ ಶಮಿ ವಿರುದ್ಧ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.

    ಪೊಲೀಸರ ತನಿಖೆ ವೇಳೆ 79.79 ಲಕ್ಷ ರೂ. (ಶೇ. 230) ಅಕ್ರಮ ಆಸ್ತಿ ಪತ್ತೆಯಾಗಿತ್ತು. ಈ ವಿರುದ್ಧ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಸಿಸಿಎಚ್-24 ನ್ಯಾಯಾಧೀಶರಾದ ಕೆ. ಲಕ್ಷ್ಮೀನಾರಾಯಣ್ ಭಟ್, ಇನ್‌ಸ್ಪೆಕ್ಟರ್ ಶಮಿ ಉರ್ ರೆಹಮಾನ್‌ಗೆ 4 ವರ್ಷ ಜೈಲು, 50 ಸಾವಿರ ರೂ. ದಂಡ ಮತ್ತು ಒಳಸಂಚು ರೂಪಿಸಿದ್ದ ಅವರ ಪತ್ನಿಗೆ 3 ವರ್ಷ ಜೈಲು ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

    ವಿಮಾನಕ್ಕೆ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ಬಚಾವಾದ ಕಾರು!

    ಮನೆ ಮೇಲೇ ಕುಸಿದ ಗುಡ್ಡ, ಮಕ್ಕಳಿಬ್ಬರು ಮಣ್ಣಿನಡಿ ಸಿಲುಕಿ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts