More

    ನಾಗರಹಳ್ಳಿ ಶಾಲೆ ಹಳೇ ಕಟ್ಟಡ ಪರಿಶೀಲನೆ

    ಮುಂಡರಗಿ: ತಾಲೂಕಿನ ನಾಗರಹಳ್ಳಿ ಗ್ರಾಮಕ್ಕೆ ಬಿಇಒ ಆರ್.ಆರ್. ಸದಲಗಿ ಅವರು ಶುಕ್ರವಾರ ಭೇಟಿ ನೀಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ಕಟ್ಟಡವನ್ನು ಪರಿಶೀಲಿಸಿದರು.

    ಶಾಲೆಯ ಗೇಟ್​ಗಳನ್ನು ಎಸ್​ಡಿಎಂಸಿಯವರು ಹಾಗೂ ಶಾಲೆ ಮುಖ್ಯಶಿಕ್ಷಕರು ದುರಸ್ತಿಪಡಿಸಬೇಕು. ಕಟ್ಟಡದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಳೇ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದ್ದು, ಸದ್ಯ ಕೋವಿಡ್-19ರ ಹಿನ್ನೆಲೆಯಲ್ಲಿ ಮಕ್ಕಳು ಬರುತ್ತಿಲ್ಲ. ಹೀಗಾಗಿ ಇಬ್ಬರು ಶಿಕ್ಷಕರು ಹಳೇ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

    ಗ್ರಾಮಸ್ಥರು ಅನವಶ್ಯಕವಾಗಿ ಶಾಲೆಯ ಹಳೇ ಕಟ್ಟಡದಲ್ಲಿ ಕುಳಿತುಕೊಳ್ಳುವುದು, ಬೇರೆ-ಬೇರೆ ಚಟುವಟಿಕೆಗಳಿಗೆ ಬಳಸದಂತೆ ಎಸ್​ಡಿಎಂಸಿಯವರು ನಿಗಾ ವಹಿಸಬೇಕು ಎಂದು ಬಿಇಒ ಸೂಚಿಸಿದರು.

    ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ಬಿಇಒ, ‘ಶಾಲೆ ಪ್ರಾರಂಭಗೊಂಡ ನಂತರ ನಲಿ-ಕಲಿ ತರಗತಿಗಳನ್ನು ಹಳೆಯ ಕಟ್ಟಡದಲ್ಲಿ ನಡೆಸಬೇಕು ಎಂದು ನಿರ್ಧರಿಸಲಾಗಿದೆ. ಜತೆಗೆ ಕಟ್ಟಡದಲ್ಲಿ ಸ್ವಚ್ಛತೆ ಮತ್ತು ಸದ್ಭಳಕೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

    ಕ್ಷೇತ್ರ ಸಮನ್ವಯ ಅಧಿಕಾರಿ ಗಂಗಾಧರ ಅಣ್ಣಿಗೇರಿ, ಬಿಆರ್​ಪಿ ಆರ್.ಎಲ್. ಬದಾಮಿ, ಮುಖ್ಯಶಿಕ್ಷಕಿ ಸಿ.ಎಸ್. ಹಳ್ಳಿಕೇರಿ, ಸಿಆರ್​ಪಿ ಐ.ಎಸ್. ಮುಲ್ಲಾ ಉಪಸ್ಥಿತರಿದ್ದರು.

    ‘ಶಾಲೆಯ ಹಳೇ ಕಟ್ಟಡ ದುರ್ಬಳಕೆ’ ಶೀರ್ಷಿಕೆಯಡಿ ನ. 27ರಂದು ‘ವಿಜಯವಾಣಿ’ಯಲ್ಲಿ ವಿಸõತ ವರದಿ ಪ್ರಕಟಿಸಲಾಗಿತ್ತು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts