More

    ಗಣಿ, ಕ್ರಷರ್​ಗಳ ಸ್ಥಳ ಪರಿಶೀಲನೆ ನಡೆಸಿ ಪರವಾನಗಿ ನೀಡಿ

    ಕಾರವಾರ: ಗಣಿ ಮತ್ತು ಕಲ್ಲು ಪುಡಿ ಮಾಡುವ ಘಟಕಗಳಿಗೆ ಲೈಸೆನ್ಸ್ ನೀಡುವ ಪೂರ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಗಣಿ, ಕಲ್ಲು ಪುಡಿ ಘಟಕಗಳ ಜಿಲ್ಲಾ ಟಾಸ್ಕ್ ಫೋರ್ಸ್ ಹಾಗೂ ನಿಯಂತ್ರಣ ಪ್ರಾಧಿಕಾರದ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆಸಿ ಅವರು ಮಾತನಾಡಿದರು. ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡುವಂತಹ ಸ್ಥಳಗಳಲ್ಲಿ ಗಣಿಗಾರಿಕೆ ಮಾಡುವಂತಿದ್ದರೆ ಅಂತಹ ಅರ್ಜಿಗಳಿಗೆ ಅನುಮೋದನೆ ನೀಡಬಾರದು ಎಂದು ಆದೇಶಿಸಿದರು.

    ಕಲ್ಲು ಗಣಿ ಲೈಸೆನ್ಸ್ ಮಂಜೂರಾತಿಗೆ ಒಟ್ಟು 16 ಅರ್ಜಿ ಸಲ್ಲಿಸಲಾಗಿದ್ದು, ಸರ್ಕಾರದ ನಿಯಮಗಳನುಸಾರವಾಗಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಬೇಕು. ಯಾವುದೇ ಸಾರ್ವಜನಿಕ ಕಟ್ಟಡಗಳು, ರಸ್ತೆ ಕಾಲುವೆ ಮತ್ತು ರೈಲ್ವೆ ಹಳಿಗಳು, ಅರಣ್ಯಪ್ರದೇಶ, ವನ್ಯಜೀವಿ ಪ್ರದೇಶದಿಂದ ದೂರದಲ್ಲಿರುವ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ಸ್ಥಾಪಿಸಲು ಅನುಮತಿ ನೀಡಬೇಕು ಎಂದರು.

    ತಾತ್ಕಾಲಿಕ ಕ್ರಷರ್ ಘಟಕದ ಅವಧಿ ವಿಸ್ತರಣೆಯೂ ಈಗಾಗಲೇ ಮುಕ್ತಾಯಗೊಡಿದ್ದು, ನಂತರವೂ ನಿಯಮ ಬಾಹಿರವಾಗಿ ಘಟಕ ನಡೆಸುತ್ತಿರುವವರ ವಿರುದ್ಧ ಕ್ರಮ ವಹಿಸಿ, ದಂಡ ವಿಧಿಸಿ ಎಂದು ಸೂಚಿಸಿದರು.

    ಜಿಪಂ ಸಿಇಒ ಪ್ರಿಯಾಂಗಾ ಎಂ., ಕಾರವಾರ ಉಪವಿಭಾಗಾಧಿಕಾರಿ ಜಯಲಕ್ಷ್ತ್ರಿ್ಮ ರಾಯಕೋಡ, ಎಎಸ್​ಪಿ ಎಸ್. ಬದರಿನಾಥ, ಡಿಎಫ್​ಒ ಪ್ರಶಾಂತಕುಮಾರ ಕೆ.ಸಿ. ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts