More

    ಆಶಾ ಕಾರ್ಯಕರ್ತೆ ನೇಮಕ ರದ್ದುಪಡಿಸಲು ಒತ್ತಾಯ

    ರೋಣ: ತಾಲೂಕಿನ ಹೊಸಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ನೇಮಕಾತಿ ರದ್ದುಗೊಳಿಸುವಂತೆ ಗ್ರಾಮದ ಮಹಿಳೆಯರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಎದುರು ಶುಕ್ರವಾರ ಧರಣಿ ನಡೆಸಿದರು.

    ಗ್ರಾಮದ ಸಂಗೀತಾ ಮಾದರ ಮಾತನಾಡಿ, ಗ್ರಾಮ ಸಭೆ ನಡೆಸಿ ಆಶಾ ಕಾರ್ಯಕರ್ತೆಯರನ್ನು ಆಯ್ಕೆ ಮಾಡುವಂತೆ ಮೇಲಧಿಕಾರಿಗಳ ಆದೇಶವಿದೆ. ಆದರೆ, ನಿಯಮ ಕಡೆಗಣಿಸಿ ಆರೋಗ್ಯ ಇಲಾಖೆಯವರು ಗ್ರಾಮದ ರೇಖಾ ಘೊರ್ಪಡೆ ಅವರನ್ನು ಏಕಪಕ್ಷೀಯವಾಗಿ ಆಯ್ಕೆ ಮಾಡಿದ್ದಾರೆ. ಗ್ರಾಮದಲ್ಲಿ ವಿದ್ಯಾವಂತ ದಲಿತ ಬಡ ಕುಟುಂಬದ ವಿಧವೆಯರಿದ್ದಾರೆ. ಅಂಥವರಿಗೆ ಕಾನೂನು ರೀತಿ ಅವಕಾಶ ನೀಡಿದರೆ ಆ ಒಂದು ಕುಟಂಬಕ್ಕೆ ಆಸರೆಯಾಗುತ್ತದೆ. ಅದನ್ನು ಬಿಟ್ಟು ಗ್ರಾಪಂ ಠರಾವು ಇಲ್ಲದೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೂ ತರದೆ ಆಶಾ ಕಾರ್ಯಕರ್ತೆ ನೇಮಕ ಮಾಡಲಾಗಿದೆ. ಇದನ್ನು ರದ್ದುಪಡಿಸಿ ಅರ್ಹರನ್ನು ಗ್ರಾಮಸಭೆಯಲ್ಲಿ ನಿಯುಕ್ತಿ ಮಾಡಬೇಕು ಎಂದು ಆಗ್ರಹಿಸಿದರು.

    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ವೈದ್ಯಾಧಿಕಾರಿ ಡಾ. ಬಿ.ಎಸ್. ಭಜಂತ್ರಿ, ಕಾನೂನು ರೀತಿ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು. ಆದರೆ, ಇದಕ್ಕೆ ಪ್ರತಿಭಟನಾನಿರತರು ಸೊಪ್ಪು ಹಾಕದ ಕಾರಣ, ರೇಖಾ ಘೊರ್ಪಡೆ ಆಯ್ಕೆಯ ಬಗ್ಗೆ ತಕರಾರು ಇರುವುದರಿಂದ ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಗ್ರಾಪಂ ವಿಸ್ತೀರ್ಣಾಧಿಕಾರಿ ಆದೇಶ ನೀಡಿದರು. ಅಲ್ಲದೆ, ತಕರಾರು ವಿಚಾರಣೆ ಮುಗಿಯುವವರೆಗೆ ರೇಖಾ ಘೊರ್ಪಡೆ ಅವರಿಗೆ ಕರ್ತವ್ಯ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದರಿಂದ ಪ್ರತಿಭಟನಾ ನಿರತರು ಪ್ರತಿಭಟನೆ ಹಿಂಪಡೆದರು.

    ಹನುಮವ್ವ ತಳವಾರ, ಗೀತಾ ತಳವಾರ, ಶಂಕ್ರಪ್ಪ ಕೊತಬಾಳ, ರೋಣಪ್ಪ ಮಾದರ, ಯಮನಪ್ಪ ಮಾದರ, ದುರ್ಗಪ್ಪ ಮಾದರ, ಬಸವರಾಜ ಮಾದರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts