More

    ಪೊಲಿಟಿಕಲ್​ ಸೈನ್ಸ್​ ಕಡೆಗೆ ಇನ್​ಸೈಟ್ಸ್​: ಹೊಸ ಪಯಣಕ್ಕೆ ವಿನಯಕುಮಾರ್​ ತುಡಿತ

    ವಿಚಾರದಲ್ಲಿ ಸ್ಪಷ್ಟತೆ, ಆಲೋಚನೆಯಲ್ಲಿ ಪಕ್ವತೆ, ಸಿದಾಟಛಿಂತದ ಬದಟಛಿತೆ. ಉತ್ತಮ ರಾಜಕಾರಣಿಗೆ ಇರಬೇಕಾದ ಮೌಲ್ಯಗಳಿವು. ಇದರ ಜತೆಗೆ ಸಾಮಾಜಿಕ ಕಳಕಳಿಯೂ ಸೇರಿಕೊಂಡರೆ ಬದಲಾವಣೆ ತರಲು ಸಾಧ್ಯ. ಈ ಎಲ್ಲ ಗುಣಗಳ ಸಂಗಮದಂತಿರುವ ಜಿ.ಬಿ. ವಿನಯಕುಮಾರ್​ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಗೆ ಕಾಂಗ್ರೆಸ್​ ಟಿಕೆಟ್​ನ ಪ್ರಬಲ ಆಕಾಂಕ್ಷಿಯಾಗಿರುವ ಅವರು, ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಹಳ್ಳಿಗಳನ್ನು ಸುತ್ತಿ ಜನರೊಂದಿಗೆ ಬೆರೆಯುತ್ತಿದ್ದಾರೆ. ಗ್ರಾಮೀಣ ಬಡ ಕುಟುಂಬದ ಹಿನ್ನೆಲೆಯಿಂದ ಬಂದ ವಿನಯಕುಮಾರ್​ ಸ್ವಂತ ಪ್ರಯತ್ನ, ಸತತ ಪರಿಶ್ರಮದಿಂದ ಎತ್ತರಕ್ಕೆ ಏರಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿನ ಯಶಸ್ಸಿನ ನಂತರ ರಾಜಕಾರಣದಲ್ಲಿ ಸಾಧನೆ ಮಾಡಲು ಹೊರಟಿದ್ದಾರೆ.

    Vinaykumar

    ಕೋಚಿಂಗ್​ನಲ್ಲಿ ಯಶಸ್ಸು ಸ್ವತಃ ಐಎಎಸ್​ ಆಗದಿದ್ದರೇನಂತೆ, ಆಸಕ್ತರಿಗೆ ತರಬೇತಿ ನೀಡಿ ಅಧಿಕಾರಿಗಳನ್ನಾಗಿ ಮಾಡೋಣ ಎಂದುಕೊಂಡು 2014ರಲ್ಲಿ ಬೆಂಗಳೂರಿನ ವಿಜಯನಗರದ ಖಾಸಗಿ ಶಾಲೆಯೊಂದರಲ್ಲಿ ತರಗತಿ ಕೊಠಡಿಯನ್ನು ಆರಂಭಿಸಿದರು. ಅರ್ಜಿ ಸಲ್ಲಿಸಿದ್ದ 311 ಜನರಲ್ಲಿ 40 ಮಂದಿಯನ್ನು ಆಯ್ಕೆ ಮಾಡಿ ಕೋಚಿಂಗ್​ ಆರಂಭಿಸಿದರು. 13 ಜನ ಪ್ರಿಲಿಮ್ಸ್​ನಲ್ಲಿ, 9 ಮಂದಿ ಮೇನ್ಸ್​ನಲ್ಲಿ ಪಾಸ್​ ಆದರು. 5 ಜನ ಅಖಿಲ ಭಾರತ ಮಟ್ಟದ ರ್ಯಾಂಕ್​ ಪಡೆದರು. 4 ಜನ ಐಎಎಸ್​ ಅಧಿಕಾರಿಗಳಾದರು. 2016 ರಲ್ಲಿ ಇನ್​ಸೈಟ್ಸ್​ ಸಂಸ್ಥೆಯಲ್ಲಿ ತರಬೇತಿ ಪಡೆದ ಕೋಲಾರದ ಕೆ.ಆರ್​.ನಂದಿನಿ ಅಖಿಲ ಭಾರತ ಮಟ್ಟದ ಮೊದಲ ರ್ಯಾಂಕ್​ ಗಳಿಸಿದರು. ಕಳೆದ 9 ವರ್ಷಗಳಲ್ಲಿ 1200 ಜನ ಐಎಎಸ್​, ಐಪಿಎಸ್​ ಮತ್ತು ಐಆರ್​ಎಸ್​ ಅಧಿಕಾರಿಗಳಾಗಿರುವುದು ಈ ಸಂಸ್ಥೆಯ ಸಾಧನೆಯಾಗಿದೆ. ಪ್ರಸ್ತುತ 12 ಸಾವಿರ ವಿದ್ಯಾರ್ಥಿಗಳು ಸಂಸ್ಥೆಯಲ್ಲಿದ್ದಾರೆ. ಬೆಂಗಳೂರು, ಧಾರವಾಡ, ಮೈಸೂರು, ಬೆಳ್ಳೂಡಿಯ ಕನಕ ಗುರು ಪೀಠದ ಶಾಖಾಮಠ, ಮಂಗಳೂರು, ದೆಹಲಿ, ಲಕ್ನೋ, ಹೈದರಾಬಾದ್​ ಮತ್ತು ಶ್ರೀನಗರದಲ್ಲಿ ಸಂಸ್ಥೆಯು ಶಾಖೆಗಳನ್ನು ಹೊಂದಿದೆ.

    Vinaykumar

    ರಾಜಕಾರಣದ ಸೆಳೆತ
    ಶಿಕ್ಷಣ ಕ್ಷೇತ್ರದಲ್ಲಿನ ಯಶಸ್ಸಿನ ನಂತರ ವಿನಯ್​ಕುಮಾರ್​ ರಾಜಕಾರಣದತ್ತ ಹೊರಳಿದ್ದಾರೆ. ಪಾರ್ಲಿಮೆಂಟ್​ ಮೆಟ್ಟಿಲು ಹತ್ತುವುದು ಅವರ ಮುಂದಿರುವ ಗುರಿ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದಟಛಿತೆ ನಡೆಸಿದ್ದಾರೆ. ಕಾಂಗ್ರೆಸ್​ ಪಕ್ಷದ ಟಿಕೆಟ್​ನ ಪ್ರಬಲ ಆಕಾಂಕ್ಷಿಯಾಗಿರುವ ಅವರು ತಾವೇ ಅಭ್ಯರ್ಥಿಯಾಗುವುದು ಖಚಿತ ಎನ್ನುವ ಆತ್ಮವಿಶ್ವಾಸ ಹೊಂದಿದ್ದಾರೆ. ಕ್ಷೇತ್ರದಲ್ಲಿರುವ 1 ಸಾವಿರ ಗ್ರಾಮಗಳ ಪೈಕಿ 600 ಹಳ್ಳಿಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ. ಗ್ರಾಮ ವಾಸ್ತವ್ಯದ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. 550 ಕಿ.ಮೀ. ಪಾದಯಾತ್ರೆ ಮಾಡಿ ತಮ್ಮ ವಿಚಾರಗಳ ಮೂಲಕ ಜನಜಾಗೃತಿ ಮೂಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಸಭೆ, ಸಮಾರಂಭಗಳಲ್ಲಿ ಪಾಲ್ಗೊಂಡು ಕ್ಷೇತ್ರದ ಬಗ್ಗೆ ತಮಗಿರುವ ಕನಸುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಭಿವೃದಿಟಛಿ ಎಂದರೆ ಕೇವಲ ರಸ್ತೆ, ನೀರು, ಚರಂಡಿ ಅಷ್ಟೇ ಅಲ್ಲ ಎನ್ನುವ ಅವರು ಜನರ ಬದುಕಿನಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ದೊಡ್ಡಮಟ್ಟದ ಯೋಜನೆಗಳನ್ನು ತರುವುದಾಗಿ ಹೇಳುತ್ತಿದ್ದಾರೆ. ಐಐಟಿಯಂಥ ಉನ್ನತ ಸಂಸ್ಥೆಯನ್ನು ದಾವಣಗೆರೆಗೆ ತರಬೇಕು. ಕೊಂಡಜ್ಜಿಯಲ್ಲಿ ರಾಷ್ಟ್ರೀಯ ನಾಟಕ ಶಾಲೆ ಸ್ಥಾಪನೆ, ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ಡಿಸೈನ್​ನಂಥ ಸಂಸ್ಥೆಗಳನ್ನು ಮಾಡುವುದು. ಹರಿಹರ&ದಾವಣಗೆರೆ ನಡುವೆ ದೊಡ್ಡ ಕ್ರೀಡಾ ಸಮುಚ್ಚಯ ನಿರ್ಮಾಣ. ಹೊಸ ಕೈಗಾರಿಕೆಗಳ ಸ್ಥಾಪನೆ, ಉದ್ಯೋಗ ಸೃಜನೆ. ಒಟ್ಟಾರೆ ಇಡೀ ಕ್ಷೇತ್ರವನ್ನು ಶ್ರೀಮಂತಗೊಳಿಸುವುದು ವಿನಯ್​ ಕುಮಾರ್​ ಅವರ ಆಲೋಚನೆಗಳಾಗಿವೆ. ಯುವಜನ ಸಬಲೀಕರಣ, ಶಾಲೆಗಳ ಉನ್ನತಿಕರಣ ಆಗಬೇಕು ಎನ್ನುತ್ತಾರೆ. ರಾಜಕಾರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ನನಗೆ ರೋಲ್​ ಮಾಡೆಲ್​. ಸೈದಾಟಛಿಂತಿಕವಾಗಿ ಜವಾಹರಲಾಲ್​ ನೆಹರು, ಸಂಸದೀಯ ಪಟುವಾಗಿ ಅಟಲ್​ ಬಿಹಾರಿ ವಾಜಪೇಯಿ ಬೌದಿಟಛಿಕವಾಗಿ ಮನಮೋಹನ್​ ಸಿಂಗ್​ ಇಷ್ಟವಾಗುತ್ತಾರೆ ಎನ್ನುತ್ತಾರೆ ವಿನಯಕುಮಾರ್​.

    Vinaykumar

    ಮುದ್ದಾದ ಕುಟುಂಬ
    ವಿನಯ್​ಕುಮಾರ್​ ಅವರದು ಮುದ್ದಾದ ಸಂಸಾರ. ಸ್ವಾತಿ, ಅವರ ಬಾಳ ಸಂಗಾತಿ. ವಿಹಾನ್​ ವಿಶ್ವ ಮತ್ತು ಪ್ರದ್ಯುನ್​ ವಿಶ್ವ ಎಂಬ ಮಕ್ಕಳಿದ್ದಾರೆ. ಸಿನಿಮಾ ನೋಡುವುದು ವಿನಯ್​ ಅವರ ಹವ್ಯಾಸ. ಆಸ್ಕರ್​ ಶೋಗಳನ್ನು ಇಷ್ಟಪಟ್ಟು ನೋಡುತ್ತಾರೆ. ಉತ್ತಮ ಸಿನಿಮಾ ವೀಕ್ಷಿಸುವುದು, ಉತ್ತಮ ಪುಸ್ತಕ ಓದುವುದು, ಉತ್ತಮ ಸ್ಥಳಕ್ಕೆ ಭೇಟಿ ನೀಡುವುದು ನನಗಿಷ್ಟ ಎಂದು ಅವರು ಹೇಳುತ್ತಾರೆ.

    Vinaykumar

    ಹಾರ್ದಿಕ ಸ್ವಾಗತ
    ದಾವಣಗೆರೆ ವೀರಶೈವ ಲಿಂಗಾಯತ ಮಹಾಸಭಾ ಮಹಾಧಿವೇಶನ ಯಶಸ್ವಿಯಾಗಲಿ. ಆಗಮಿಸುತ್ತಿರುವ ರಾಜ್ಯದ ಎಲ್ಲ ಗಣ್ಯರು ಹಾಗೂ ನಾಗರಿಕರಿಗೆ ಹಾರ್ದಿಕ ಸ್ವಾಗತ.

    ಹಳ್ಳಿಯಲ್ಲಿ ಬದುಕಿನ ಪಾಠ
    ದಾವಣಗೆರೆ ನಗರಕ್ಕೆ ಹತ್ತಿರದಲ್ಲಿರುವ ಕಕ್ಕರಗೊಳ್ಳದ ವಿನಯಕುಮಾರ್​ ಗ್ರಾಮೀಣ ಪ್ರತಿಭೆ. ತಂದೆ ಬಸವಂತಪ್ಪ ಗುದಗತ್ತಿ ಅವರದು ಉಪನ್ಯಾಸಕ ವೃತ್ತಿ. ತಾಯಿ ರೇಣುಕಾ ಒಡೆಯರ್​ ಗೃಹಿಣಿ. ಬಾಲ್ಯವನ್ನು ಕಳೆದಿದ್ದು ಪಾಳು ಬಿದ್ದ ದನದ ಮನೆಯಲ್ಲಿ. ಕಷ್ಟವನ್ನು ಕಂಡುಂಡು ಬೆಳೆದರು. ಹೊಲದಲ್ಲಿ ಗೋವಿನಜೋಳ ಸುಲಿಯಲು ಹೋಗುತ್ತಿದ್ದರಂತೆ. ಆ ಎಲ್ಲ ಅನುಭವ ಅವರನ್ನು ಗಟ್ಟಿಯಾಗಿಸಿತು. ಹುಟ್ಟೂರಿನ ಶ್ರೀ ಶಾರದಾ ವಿದ್ಯಾಪಿಠ ಶಾಲೆಯಲ್ಲಿ 1ರಿಂದ 5 ನೇ ತರಗತಿಯ ವ್ಯಾಸಂಗ ಮಾಡಿದರು. ಮುಂದೆ ಜೋಯಿಸ ಮಾಸ್ಟರ್​ ಮತ್ತು ಚನ್ನಬಸಪ್ಪ ಮೇಷ್ಟ್ರ ಪ್ರೋತ್ಸಾಹದಿಂದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹಿರಿಯೂರು ತಾಲೂಕು ಉಡುವಳ್ಳಿಯ ನವೋದಯ ಶಾಲೆಯಲ್ಲಿ 6 ರಿಂದ 12ನೇ ತರಗತಿವರೆಗೆ ವ್ಯಾಸಂಗ ಮಾಡಿದರು. ಅಲ್ಲಿ ಅವರ ಜ್ಞಾನದ ಮಟ್ಟ ವಿಸ್ತಾರಗೊಳ್ಳುತ್ತ ಹೋಯಿತು. ಪಠ್ಯೇತರ ಚಟುವಟಿಕೆಯಲ್ಲಿ ವಿನಯ್​ ಮುಂದಿದ್ದರು. 11ನೇ ತರಗತಿಯಲ್ಲಿ ಸ್ಕೂಲ್​ ಕ್ಯಾಪ್ಟನ್​ ಆಗಿದ್ದರು. ಪ್ರಾದೇಶಿಕ ಮತ್ತು ರಾಜ್ಯಮಟ್ಟದ ಕಬಡ್ಡಿ ಇನ್ನಿತರ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು. ಗ್ರಂಥಾಲಯದಲ್ಲಿ ಇಂಗ್ಲಿಷ್​ ಪುಸ್ತಕಗಳನ್ನು ಓದುವ ರೂಢಿ ಮಾಡಿಕೊಂಡರು. ಆಗಲೇ ಅವರು ಸ್ವತಂತ್ರವಾಗಿ ಬದುಕುವುದನ್ನು ಕಲಿತರು, ಮಹತ್ವಾಕಾಂಕ್ಷೆಯ ಬೀಜ ಮೊಳಕೆಯೊಡೆಯಿತು. ಸಿಇಟಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್​ ಬಂದಿತಾದರೂ ಆರ್ಥಿಕ ಸಮಸ್ಯೆಯಿಂದಾಗಿ ಇಂಜಿನಿಯರಿಂಗ್​ ಅಥವಾ ಮೆಡಿಕಲ್​ ಗೆ ಪ್ರವೇಶ ಪಡೆಯಲಿಲ್ಲ. ಬೆಂಗಳೂರಿನಲ್ಲಿ ತಳಿಶಾಸಣಉ ವಿಷಯದಲ್ಲಿ ಬಿಎಸ್ಸಿ ಸೇರಿಕೊಂಡರು. ಮನುಷ್ಯನಲ್ಲಿನ ಜೀನ್ಸ್​ ರಹಸ್ಯ ಅವರಿಗೆ ಪರಿಚಯವಾಗಿದ್ದು ಆಗಲೇ. ವಿಜ್ಞಾನಿಯಾಗಬೇಕು, ನೋಬೆಲ್​ ಪ್ರಶಸ್ತಿ ಪಡೆಯಬೇಕು ಎನ್ನುವ ಹಂಬಲ ಗರಿಗೆದರಿತು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಯುತ್ತಿದ್ದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಕುತೂಹಲದಿಂದ ಕೇಳುತ್ತಿದ್ದರಂತೆ.

    Vinaykumar

    ಐಎಎಸ್​ ಕನಸಿನ ಬೆನ್ನೇರಿ
    ಬಿಎಸ್ಸಿ ಅಂತಿಮ ವರ್ಷದಲ್ಲಿದ್ದಾಗ ವಿನಯ್​ ಐಎಎಸ್​ ಅಧಿಕಾರಿಯಾಗುವ ಕನಸು ಕಂಡರಂತೆ. ಶಾಲಾ ದಿನಗಳಲ್ಲಿ ಶಿಕ್ಷಕರಾಗಿದ್ದ ನರಸಿಂಹಪ್ಪ ಮತ್ತು ಟಾಮಿ ಜೋಸೆಫ್​ ಅವರು ಐಎಎಸ್​ ಬಗ್ಗೆ ಒಲವು ಮೂಡಿಸಿದ್ದರಂತೆ. ಬಿಎಸ್ಸಿ ನಂತರ ಬೆಂಗಳೂರಿನ ಸೆಂಟ್ರಲ್​ ಕಾಲೇಜಿನಲ್ಲಿ ರಾಸಾಯನಶಾಸಣಉದಲ್ಲಿ ಎಂಎಸ್ಸಿಗೆ ಸೇರಿದ ವಿನಯ್​ ಅವರಿಗೆ ಅದೇಕೋ ಅಲ್ಲಿ ಮುಂದುವರಿಯುವ ಮನಸಾಗದೆ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ, ಐಎಎಸ್​ ಮಾಡುವ ಗುಂಗಿನಲ್ಲೇ ತಂದೆಯವರು ಕೆಲಸ ಮಾಡುತ್ತಿದ್ದ ಸಾಲಿಗ್ರಾಮಕ್ಕೆ ತೆರಳಿದರು. ಮುಂದಿನ ದಾರಿ ಅಸ್ಪಷ್ಟವಾಗಿದ್ದರೂ ಐಎಎಸ್​ ಮಾಡಬೇಕು ಎನ್ನುವ ಮಹತ್ವಾಕಾಂಕ್ಷೆಯ ಬೆನ್ನೇರಿ ಪೂರ್ವತಯಾರಿ ಆರಂಭಿಸಿದರು. ಆಗ (2004&05) ಇನ್ನೂ ಇಂರ್ಟನೆಟ್​ನ ಆರಂಭದ ದಿನಗಳು. ಸಾಹಿತಿ ಡಾ. ಯು.ಆರ್​. ಅನಂತಮೂರ್ತಿ ಅವರು ಆ ಕಾಲದಲ್ಲಿ ಅವರದೇ ಆದ ಬ್ಲಾಗ್​ ಆರಂಭಿಸಿದ್ದರಂತೆ. ಅದರಿಂದ ಪ್ರೇರಣೆ ಪಡೆದ ವಿನಯ್​ ತಂದೆಯವರ ಸಹಕಾರದಿಂದ ಕಂಪ್ಯೂಟರ್​ ತಂದು ತಮ್ಮದೇ ಆದ ಬ್ಲಾಗ್​ ಶುರು ಮಾಡಿದರು. ಕೇಂದ್ರ ಲೋಕಸೇವಾ ಆಯೋಗದ ಮೇನ್ಸ್​ ಪರೀಕ್ಷೆಗಳನ್ನು 3 ಬಾರಿ ಬರೆದು, ಒಂದು ಸಲ ಸಂದರ್ಶನಕ್ಕೂ ಹಾಜರಾದರು. ಆ ಪ್ರಯತ್ನದಲ್ಲಿ ಕೇವಲ 2 ಅಂಕಗಳಿಂದ ರ್ಯಾಂಕ್​ ಕೈ ತಪ್ಪಿತಂತೆ. ಇನ್​ಸೈಟ್ಸ್​ ಆನ್​ ಇಂಡಿಯಾ ಡಾಟ್​ ಕಾಮ್​ ಎಂಬ ವೆಬ್​ಸೈಟ್​ ಮೂಲಕ ಪ್ರಜಾಪ್ರಭುತ್ವ, ತಂತ್ರಜ್ಞಾನ, ಸಂವಿಧಾನ, ವಿಪತ್ತು ನಿರ್ವಹಣೆ ಸೇರಿ ವೈವಿಧ್ಯಮಯ ವಿಷಯಗಳ ಕುರಿತು ಬರೆಯುತ್ತ ಹೋದರು. ಓದುಗರಿಂದ ಉತ್ತಮ ಪ್ರತಿಕ್ರಿಯೆ ದೊರೆಯತೊಡಗಿತು. ಈ ನಡುವೆ ಬದುಕು ಮತ್ತೊಂದು ತಿರುವು ಪಡೆಯಿತು. ಗ್ರಾಮ ಪಂಚಾಯಿತಿ ಅಭಿವೃದಿಟಛಿ ಅಧಿಕಾರಿಯಾಗಿ ಕರ್ಪೂರವಳ್ಳಿ ಗ್ರಾಮ ಪಂಚಾಯಿತಿಗೆ ನೇಮಕವಾದರು. ಮನೆ ಮನೆಗೆ ಭೇಟಿ ನೀಡಿ ಜನರೊಂದಿಗೆ ಬೆರೆತರು. ಆ ಗ್ರಾಮ ಪಂಚಾಯಿತಿಗೆಂದೇ ಪ್ರತ್ಯೇಕ ವೆಬ್​ಸೈಟ್​ ಸೃಷ್ಟಿಸಿದರು. ಕೊನೆಗೆ ಅಲ್ಲಿಯೂ ಮುಂದುವರಿಯದೆ ಹುದ್ದೆಗೆ ರಾಜೀನಾಮೆ ನೀಡಿದರು. ಗುರಿ ಐಎಎಸ್​ ಆಗಿತ್ತಾದರೂ ಅನಿವಾರ್ಯವಾಗಿ ಕೆಎಎಸ್​ ಬರೆದರು. ಅದರಲ್ಲಿ ಪಾಸ್​ ಆಗಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಆಯ್ಕೆಯಾದರು. ಆದರೆ ಬೇರೆ ಕಾರಣಕ್ಕಾಗಿ ಆ ನೇಮಕಾತಿ ಪಟ್ಟಿಯೇ ರದ್ದಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.

    Vinaykumar

    ಪುಸ್ತಕಗಳ ಒಡನಾಟ
    ವಿನಯಕುಮಾರ್​ಗೆ ಪುಸ್ತಕಗಳ ಒಡನಾಟ ಬೆಳೆದಿದ್ದರ ಹಿಂದೆ ಸ್ವಾರಸ್ಯಕರ ಕತೆಯಿದೆ. ತಂದೆಗೆ ಪುಸ್ತಕ ಓದುವ ಹವ್ಯಾಸ. ಸೆಕೆಂಡ್​ ಹ್ಯಾಂಡ್​ ಪುಸ್ತಕಗಳನ್ನು ತಂದು ಮನೆಯಲ್ಲಿ ಇಡುತ್ತಿದ್ದರು. ಆಗಾಗ ಅವುಗಳ ಮೇಲಿನ ಧೂಳು ತೆಗೆದು ಸ್ವಚ್ಛಗೊಳಿಸುವ ಕೆಲಸವನ್ನು ವಿನಯ್​ ಮಾಡುತ್ತಿದ್ದರಂತೆ. ಪುಸ್ತಕಗಳು ಇಲಿಗಳಿಗೆ ಆಹಾರವಾಗದಂತೆ ನೋಡಿಕೊಳ್ಳಬೇಕಿತ್ತು. ಪಿಯುಸಿವರೆಗೆ ಓದಿದ್ದ ತಾಯಿ ಮತ್ತು ಅವರ ಸ್ನೇಹಿತೆಯರಿಗೂ ಪುಸ್ತಕ ಓದುವ ಗೀಳು ಇತ್ತಂತೆ. ಕಾದಂಬರಿಗಳನ್ನು ಮನೆಯಿಂದ ಮನೆಗೆ ಕೊಟ್ಟು ಬರುವ ಡ್ಯೂಟಿಯನ್ನೂ ವಿನಯ್​ ಮಾಡುತ್ತಿದ್ದರು. ಹೀಗಾಗಿ 4ನೇ ತರಗತಿಯಲ್ಲಿ ಇದ್ದಾಗಿನಿಂದಲೇ ಅವರಿಗೆ ವಾಚನಾಭಿರುಚಿ ಮೂಡಿತು. ಪುಸ್ತಕಗಳ ಓದು ಅವರನ್ನು ಒಳಗಿನಿಂದ ಗಟ್ಟಿಗೊಳಿಸುತ್ತ ಬಂದಿತು.

    Vinaykumar

    ಲೋಕಸಭಾ ಚುನಾವಣೆಗೆ ಟಿಕೆಟ್​ ನೀಡಲು ಕಾಂಗ್ರೆಸ್​ ನಡೆಸಿರುವ ಸಮೀಕ್ಷೆಯಲ್ಲಿ ಕ್ರಿಯಾಶೀಲರ ಪೈಕಿ ನನ್ನ ಹೆಸರು ಮುಂಚೂಣಿಯಲ್ಲಿದೆ. ಟಿಕೆಟ್​ ಪಡೆಯುವ ವಿಶ್ವಾಸ ನನಗಿದೆ. ಎಲ್ಲ ಮಟ್ಟದ ನಾಯಕರನ್ನು ಭೇಟಿಯಾಗುತ್ತಿದ್ದೇನೆ. ಯುವಕರ ಮನಸ್ಸು ಗೆಲ್ಲುತ್ತಿರುವೆ. ನಾನು ಈ ಪ್ರಯತ್ನದಲ್ಲಿ ಯಶಸ್ವಿಯಾದರೆ ವಿದ್ಯಾವಂತರು, ಪ್ರತಿಭಾವಂತರು ರಾಜಕಾರಣಕ್ಕೆ ಬರಲು ಪ್ರೇರಣೆಯಾಗುತ್ತದೆ. ಜಾತ್ಯತಿತತೆ, ಸರಳತೆಯೇ ನನ್ನ ಶಕ್ತಿ. ಜೀವನದಲ್ಲಿ ಪರಿಶ್ರಮಪಟ್ಟಿದ್ದೇನೆ, ಯಾವುದೇ ಅಡ್ಡದಾರಿ ಹಿಡಿದಿಲ್ಲ. ಒಳ್ಳೆಯ ಉದ್ದೇಶದಿಂದ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಅಭಿವೃದಿಟಛಿಯೇ ನನ್ನ ಫೋಕಸ್​.

    | ಜಿ.ಬಿ. ವಿನಯಕುಮಾರ್​

    Vijaykumar

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts