More

    PHOTOS| ಅಂಬಾನಿ ಮನೆಯಲ್ಲಿ ಅದ್ಧೂರಿ ಹೋಳಿ ಸಂಭ್ರಮ: ಬಣ್ಣದ ರಂಗಿನಲ್ಲಿ ಮಿಂದೆದ್ದ ಸ್ಟಾರ್​ಗಳು!​

    ಮುಂಬೈ: ಭಾರತದ ಕುಬೇರ ಮುಖೇಶ್​ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಅಳಿಯ ಆನಂದ್​ ಪಿರಮಲ್​ ಅವರು ಶುಕ್ರವಾರ ಆಯೋಜಿಸಿದ್ದ ವರ್ಣಮಯ ಹೋಳಿ ಪಾರ್ಟಿಗೆ ಕೆಲ ಬಾಲಿವುಡ್​ ಸ್ಟಾರ್​ಗಳು ಆಗಮಿಸಿ ರಂಗು ಚೆಲ್ಲಿದರು. ​

    ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್​ ಜೊನಸ್(ಜೋನಾಸ್​)​, ಜಾಕ್ವೆಲಿನ್​ ಫರ್ನಾಂಡೀಸ್​, ವಿಕ್ಕಿ ಕುಶಾಲ್​, ಮಾಧುರಿ ದೀಕ್ಷಿತ್​, ಕತ್ರಿನಾ ಕೈಫ್​ ಮತ್ತು ರಾಜ್​ಕುಮಾರ್ ರಾವ್​ ಸೇರಿ ಇನ್ನಿತರ ನಟ-ನಟಿಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.​

    ಹೋಳಿ ಹಬ್ಬವನ್ನು ಪತ್ನಿ ಪ್ರಿಯಾಂಕಾ ಜತೆಯಲ್ಲಿ ಸಂಪೂರ್ಣವಾಗಿ ಎಂಜಾಯ್​ ಮಾಡಿರುವ ನಿಕ್​, ಇದೇ ಖುಷಿಯಲ್ಲಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವರ್ಣರಂಜಿತ ಫೋಟೋ ಮತ್ತು ವಿಡಿಯೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

    ಹೋಳಿ ಸಂಭ್ರಮ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ನಿಕ್​, ಇದು ನನ್ನ ಮೊದಲ ಹೋಳಿ ಸಂಭ್ರಮವಾಗಿದೆ. ನನ್ನ ಎರಡನೇ ತವರು ಭಾರತದ ಅತ್ಯದ್ಭುತ ಜನರೊಂದಿಗೆ ಹೋಳಿ ಸಂಭ್ರಮ ತುಂಬಾ ಖುಷಿಕೊಟ್ಟಿತು ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts