More

    ಕಲ್ಪವೃಕ್ಷಕ್ಕೆ ಕೀಟಕಾಟ

    ಗೆದ್ದಲು: ಲಕ್ಷಣ:ಇವು ಮೊದಲಿಗೆ ಸಸಿ ಮಡಿಗಳ ಮೇಲೆ ದಾಳಿ ಮಾಡುತ್ತವೆ. ಬಿತ್ತನೆ ಕಾಯಿಗಳನ್ನು ತಿಂದು ಹಾಕುತ್ತವೆ. ಸಸಿಗಳು ಒಣಗುತ್ತವೆ. ಕೈಯಿಂದ ಎಳೆದರೆ ಕಿತ್ತು ಬರುತ್ತವೆ. ಮರಗಳನ್ನಾದರೆ ಕಾಂಡಕ್ಕೆ ಸುತ್ತಿಕೊಂಡು ಮೇಲೇರುತ್ತಾ ಹೋಗುತ್ತವೆ. ಹಸಿ ಇರುವ ಭಾಗವನ್ನು ತಿಂದು ಹಾಕುತ್ತವೆ.

    ಪರಿಹಾರ: ಗೆದ್ದಲನ್ನು ನಿಯಂತ್ರಿಸುವ ಕಣಗಿಲೆ, ದಾಲ್ಚಿನ್ನಿ, ಮಸೆ ಮುಂತಾದ ಮರಗಳ ಕಟ್ಟಿಗೆ ಅಥವಾ ಸೊಪ್ಪನ್ನು ಸಸಿ ಮಡಿ ಮಾಡುವ ಮೊದಲು ಬುಡದಲ್ಲಿ ಹಾಕಿಕೊಳ್ಳುವುದರಿಂದ ಗೆದ್ದಲು ಬರುವುದಿಲ್ಲ. ಒಂದೊಮ್ಮೆ ಬಂದರೆ ತಕ್ಷಣ ಬೇವಿನೆಣ್ಣೆ ಮತ್ತು ಸೀಮೆ ಎಣ್ಣೆಗಳ ಮಿಶ್ರಣವನ್ನು ಸಸಿ ಮಡಿಯಲ್ಲಿರುವ ಕಾಯಿಗಳಿಗೆ ತಾಗದಂತೆ ಸಿಂಪಡಿಸಬಹುದು. ತೀವ್ರವಾಗಿ ಕಂಡು ಬಂದರೆ ಸಸಿಗಳ ಬುಡಕ್ಕೆ 10 ಮಿಲಿಲೀಟರ್ ಕ್ಲೋರೋಪೈರಿಪಾಸ್​ನ್ನು ಒಂದು ಲೀಟರ್ ನೀರಿನೊಂದಿಗೆ ಸೇರಿಸಿ ಸುರಿಯುವುದು ಅಗತ್ಯ. ನಾಟಿ ಮಾಡಿದ ಗಿಡಕ್ಕೆ ತೀವ್ರವಾಗಿ ಬಂದರೆ ಅವುಗಳ ಪ್ರತಿ ಗಿಡದ ಬುಡಕ್ಕೆ ಸುಮಾರು 5 ಲೀಟರ್ ಇದೇ ದ್ರಾವಣ ಹಾಕಬೇಕು. ಅನ್ಯಥಾ ಕೆಲವೊಮ್ಮೆ ತಾನಾಗಿ ಕಡಿಮೆಯಾಗುತ್ತದೆ.

    ಕಲ್ಪವೃಕ್ಷಕ್ಕೆ ಕೀಟಕಾಟಹಿಟ್ಟು ತಿಗಣೆ: ಲಕ್ಷಣ: ಬಿಳಿ ತಿಗಣೆಗಳು ಹೊಂಬಾಳೆಯ ರಸವನ್ನು ಹೀರುತ್ತವೆ. ಅದು ಒಣಗಿದಂತಾಗುತ್ತದೆ.

    ಪರಿಹಾರ: ಒಂದು ಲೀಟರ್ ನೀರಿಗೆ ಡೈಮಿಥೋಯೇಟ್ 30 ಇಸಿ 1.7 ಮಿಲಿಲೀಟರ್ ಅಥವಾ 0.5 ಮಿಲಿಲೀಟರ್ ಇಮಿಡಾಕ್ಲೋಪ್ರಿಡ್ 17.8ಎಸ್​ಎಲ್​ನ್ನು ಬೆರೆಸಿ ಸಿಂಪಡಿಸಿ.

    ಗೊಣ್ಣೆಹುಳುಗಳು: ಲಕ್ಷಣ: ಮರಿಹುಳುಗಳು ಇಂಗ್ಲಿಷ್​ನ ಸಿ ಆಕಾರದಲ್ಲಿ ಇರುತ್ತವೆ. ಒಂದೇ ಸಮನೆ ಬೇರುಗಳನ್ನು ತಿನ್ನುವ ಕಾರಣ ಸಸಿಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ.

    ಪರಿಹಾರ: ಇವು ಸಂಜೆ ಏಳು ಗಂಟೆ ನಂತರ ಭೂಮಿಯಿಂದ ಹೊರ ಬರುತ್ತವೆ. ಆಗ ಬದುಗಳ ಮೇಲೆ ಬೆಂಕಿ ಹಾಕಿದರೆ ಅವೆಲ್ಲಾ ಬೆಂಕಿಗೆ ಆಕರ್ಷಣೆ ಹೊಂದಿ ಬಿದ್ದು ಸಾಯುತ್ತವೆ. ಮಳೆ ಬಿದ್ದ ದಿನ ಹೆಚ್ಚಾಗಿ ಹೊರಬರುತ್ತವೆ. ಆಗ ಬೆಂಕಿ ಹಾಕಲಾಗದು. ಅದಕ್ಕಾಗಿ ಮರದ ಕಾಂಡಕ್ಕೆ ಬೇವಿನ ಸೊಪ್ಪನ್ನು ಕಟ್ಟಿ ಅದಕ್ಕೆ ಕ್ಲೋರೋಪೈರಿಫಾಸ್ 20ಇಸಿಯನ್ನು ಒಂದು ಲೀಟರ್ ನೀರಿಗೆ 2 ಮಿಲಿಲೀಟರ್ ಮಿಶ್ರ ಮಾಡಿ ಸಿಂಪಡಿಸಿ. ಹೊರ ಬಂದ ದುಂಬಿಗಳು ಬೇವಿನಸೊಪ್ಪಿನ ಮೇಲೆ ಕೂರುತ್ತವೆ. ಅದನ್ನು ತಿಂದವುಗಳು ಅಲ್ಲಿಯೇ ಸತ್ತು ಬೀಳುತ್ತವೆ. ಸಣ್ಣ್ಣ ಸಸಿಗಳಲ್ಲಿ ಇದರ ಬಾಧೆ ಕಂಡುಬಂದಲ್ಲಿ ಕ್ಲೋರೋಪೈರಿಫಾಸ್ 20 ಇಸಿಯನ್ನು ಒಂದು ಲೀಟರ್ ನೀರಿಗೆ 10 ಮಿಲಿಲೀಟರ್ ಮಿಶ್ರ ಮಾಡಿ ಗಿಡಗಳ ಬುಡಕ್ಕೆ ಸುರಿಯಬೇಕಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts