More

    ಶಾಸನಗಳ ಅಧ್ಯಯನಕ್ಕೆ ಒತ್ತು ನೀಡಿ

    ಬೆಳಗಾವಿ: ಬೆಳಗಾವಿ ಪರಿಸರದಲ್ಲಿರುವ ಪ್ರಾಚ್ಯ ಅವಶೇಷಗಳನ್ನು ಶೋಧಿಸುವ ಹೊಣೆಗಾರಿಕೆ ಈ ಭಾಗದ ಸಂಶೋಧಕರ ಮೇಲಿದೆ. ಜಿಲ್ಲೆಯ ಶಾಸನಗಳ ಕುರಿತು ತಲಸ್ಪರ್ಶಿ ಅಧ್ಯಯನವಾಗಬೇಕಿದೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಂ.ಜೆ.ಮಂಜುನಾಥ ಅಭಿಪ್ರಾಯಪಟ್ಟರು.

    ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ‘ಕನ್ನಡ ಲಿಪಿ ಬೆಳವಣಿಗೆ ಮತ್ತು ಶಾಸನ ಅಧ್ಯಯನ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕನ್ನಡದಲ್ಲಿ ಹಲ್ಮಿಡಿ ಶಾಸನಕ್ಕಿಂತ ಮೊದಲೇ ರಚನೆಯಾದ ಹಲವು ಶಾಸನಗಳಿವೆ. ಸಂಶೋಧಕರು ಅವುಗಳನ್ನು ಶೋಧಿಸಬೇಕು. ಪ್ರಸ್ತುತ ಸಂದರ್ಭದಲ್ಲಿ ಶಾಸನಗಳ ಅಧ್ಯಯನದ ಅಗತ್ಯತೆ ಹೆಚ್ಚಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಸ್. ಎಂ.ಗಂಗಾಧರಯ್ಯ ಮಾತನಾಡಿ, ನಮ್ಮಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶಾಸನಗಳ ಅಧ್ಯಯನ ಆಗಬೇಕಿದೆ. ಈ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸೋಣ ಎಂದರು. ಡಾ.ಗಜಾನನ ನಾಯ್ಕ, ಡಾ.ಮಹೇಶ ಗಾಜಪ್ಪನವರ, ಡಾ.ಹನುಮಂತಪ್ಪ ಸಂಜೀವಣ್ಣವರ, ಡಾ.ಶೋಭಾ ನಾಯಕ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ.ಪಿ.ನಾಗರಾಜ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts