More

    ಕೈಲಾದ ಸಹಾಯ ಮಾಡುವುದು ಇನ್ನರ್‌ವ್ಹೀಲ್ ಧ್ಯೇಯ

    ಕುಶಾಲನಗರ: ಸ್ಥಳೀಯರ ಬೇಡಿಕೆಗಳನ್ನು ಕೈಲಾದ ಮಟ್ಟಿಗೆ ಒದಗಿಸುವ, ಈಡೇರಿಸುವ ಪ್ರಯತ್ನ ಮಾಡುವುದು ಇನ್ನರ್ ವ್ಹೀಲ್ ಕ್ಲಬ್‌ನ ಧ್ಯೇಯೋದ್ದೇಶ ಎಂದು ಡಿಸ್ಟ್ರಿಕ್ಟ್ 318ರ ಅಧ್ಯಕ್ಷೆ ಪೂರ್ಣಿಮಾ ರವಿ ಹೇಳಿದರು.

    ಅಂತಾರಾಷ್ಟ್ರೀಯ ಇನ್ನರ್‌ವ್ಹೀಲ್ ಸಂಸ್ಥೆಯ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಕುಶಾಲನಗರ ಇನ್ನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಶುಕ್ರವಾರ ಎಪಿಸಿಎಂಎಸ್‌ನ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀಮತಿ ಕುಶಾಲನಗರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಅಂತಾರಾಷ್ಟ್ರೀಯ ಇನ್ನರ್‌ವ್ಹೀಲ್ ಸಂಸ್ಥೆಯಡಿಯಲ್ಲಿ ಜಿಲ್ಲೆಯಲ್ಲಿ 53 ಕ್ಲಬ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, 1880 ಮಹಿಳಾ ಸದಸ್ಯರಿದ್ದಾರೆ. ಸಂಸ್ಥೆಯಿಂದ ಇದುವರೆಗೆ 1ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಸೇವಾ ಕಾರ್ಯಗಳನ್ನು ನಡೆಸಲಾಗಿದೆ ಎಂದರು.

    ಸಂಸ್ಥೆಯ ಶತಮಾನೋತ್ಸವ ಅಂಗವಾಗಿ ಜಿಲ್ಲೆಯಲ್ಲಿ ನೂರು ಹೆಣ್ಣು ಮಕ್ಕಳಿಗೆ ಬೈಸಿಕಲ್ ವಿತರಣೆ ಮಾಡುವ ಯೋಜನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

    ಕುಶಾಲನಗರ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ನೇಹಾ ಜಗದೀಶ್, ಉಪಾಧ್ಯಕ್ಷೆ ಚಿತ್ರಾ ರಮೇಶ್, ಕಾರ್ಯದರ್ಶಿ ಜಾಸ್ಮಿನ್ ಪ್ರಕಾಶ್, ಖಜಾಂಚಿ ಸುಪ್ರೀತಾ ರವಿ, ಮಾಜಿ ಅಧ್ಯಕ್ಷೆ ಆರತಿ ಶೆಟ್ಟಿ, ರೂಪ ಉಮಾಶಂಕರ್, ದೀಪಾ ಪೂಜಾರಿ, ಸಂಧ್ಯಾ ಪ್ರಮೋದ್, ದಿವ್ಯಾ ಸುಜಯ್, ಅಶ್ವಿನಿ ರೈ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts