More

    ಮಹಿಳೆಯ ಶ್ವಾಸನಾಳದಲ್ಲಿ ಸ್ಕಾರ್ಫ್ ಪಿನ್!: ದೇರಳಕಟ್ಟೆ ಯೇನೆಪೊಯ ಆಸ್ಪತ್ರೆಯ ವೈದ್ಯರಿಂದ ಶಸ್ತ್ರಚಿಕಿತ್ಸೆ

    ಉಳ್ಳಾಲ (ದ.ಕ.): ಕುತ್ತಿಗೆ ಭಾಗದಲ್ಲಿ ನೋವು ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 28 ವರ್ಷದ ಮಹಿಳೆಯ ಶಸ್ತ್ರಚಿಕಿತ್ಸೆ ನಡೆಸಿದ ದೇರಳಕಟ್ಟೆ ಯೇನೆಪೊಯ ಆಸ್ಪತ್ರೆಯ ವೈದ್ಯರು ಶ್ವಾಸನಾಳದಲ್ಲಿದ್ದ ಸ್ಕಾರ್ಫ್ ಪಿನ್ ಹೊರತೆಗೆದಿದ್ದಾರೆ.

    ಬಟ್ಟೆ ಧರಿಸುವ ವೇಳೆ ಬಾಯಲ್ಲಿ ಕಚ್ಚಿದ್ದ ಪಿನ್ ಬಾಯಿ ಮೂಲಕ ದೇಹದೊಳಗೆ ಹೋಗಿತ್ತು. ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಮಹಿಳೆಯನ್ನು ದಾಖಲಿಸಲಾಗಿತ್ತು. ಕ್ಷಕಿರಣ ಪರೀಕ್ಷೆ ನಡೆಸಿದಾಗ ಶ್ವಾಸನಾಳದಲ್ಲಿ ಸ್ಕಾರ್ಫ್ ಪಿನ್ ಪತ್ತೆಯಾಯಿತು. ಶಸ್ತ್ರಚಿಕಿತ್ಸೆ ನಡೆಸುವಂತೆ ಇಎನ್‌ಟಿ ವಿಭಾಗಕ್ಕೆ ಸೂಚಿಸಲಾಗಿತ್ತು. ಇಎನ್‌ಟಿ ವಿಭಾಗದ ಹಿರಿಯ ವೈದ್ಯ ದೀಕ್ಷಿತ್ ರಾಜಮೋಹನ್ ಮತ್ತು ಕಿರಿಯ ವೈದ್ಯೆ ಅಮೃತಾ ಮತ್ತು ಡಾ.ಜಾಸಿಮ್ ಎಮರ್ಜೆನ್ಸಿ ಬ್ರೋಂಕೊಸ್ಕೋಪಿ ಚಿಕಿತ್ಸೆ ನೀಡಿದರು. ಅನಸ್ತೇಶಿಯಾ ವಿಭಾಗದ ಪ್ರೊ.ಹಬೀಬ್ ರಹ್ಮಾನ್ ಮತ್ತು ಡಾ.ಎಜಾಝ್ ಸಹಕರಿಸಿದರು.

    ಶಸ್ತ್ರಚಿಕಿತ್ಸೆ ಮೂಲಕ ಪಿನ್ ಹೊರತೆಗೆಯಲಾಗಿದ್ದು, ಎರಡು ದಿನ ನಿಗಾ ವಹಿಸಿ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಉಸಿರಾಟದ ನಾಳದಲ್ಲಿ ಕೆಲವು ಬಾರಿ ಸಿಕ್ಕಿಕೊಳ್ಳುವ ವಸ್ತುಗಳು ಜೀವಕ್ಕೆ ಅಪಾಯಕಾರಿಯಾಗಬಲ್ಲವು. ಅದನ್ನು ತುರ್ತು ಚಿಕಿತ್ಸೆ ಮೂಲಕ ತೆಗೆಯದಿದ್ದಲ್ಲಿ ಕ್ಲಿಷ್ಟಕರವಾಗಬಹುದು. ಈ ಚಿಕಿತ್ಸಾ ಕ್ರಮ ಅನಸ್ತೇಶಿಯಾ ಮತ್ತು ಸರ್ಜರಿ ಮಾಡುವ ವೈದ್ಯರಿಗೆ ಸವಾಲಾಗಿತ್ತು ಎಂದು ಡಾ.ದೀಕ್ಷಿತ್ ರಾಜ್‌ಮೋಹನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts