More

    ಮೂಲಸೌಕರ್ಯ ಒದಗಿಸಲು ಆಗ್ರಹ

    ಕೊಪ್ಪಳ: ವಾರ್ಡ್‌ನಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದ್ದು, ಸದಸ್ಯ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ನಗರದ 21ನೇ ವಾರ್ಡ್ ನಿವಾಸಿಗಳು ಶುಕ್ರವಾರ ಡಾ.ಸಿಂಪಿ ಲಿಂಗಣ್ಣ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

    ರಾಘವೇಂದ್ರ ಮೆಟಲ್ ಸ್ಟೋರ್ ಪಕ್ಕದಲ್ಲಿ ಹಾದು ಹೋಗುವ ರಸ್ತೆ ಹಾಳಾಗಿದ್ದು, ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ಚರಂಡಿ ಹೂಳು ತುಂಬಿ ದರ್ನಾತ ಬೀರುತ್ತಿದೆ. ಬೀದಿ ದೀಪಗಳು ಸರಿಯಾಗಿಲ್ಲ. ಹೆಚ್ಚು ಜನ ಸಂಚಾರ ಇರುವ ಕಡೆ ಸಾರ್ವಜನಿಕ ಶೌಚಗೃಹ, ಮೂತ್ರಗೃಹಗಳಿಲ್ಲ. ಕಸದ ಡಬ್ಬಿಗಳನ್ನು ಅಳವಡಿಸಿಲ್ಲ. ಈ ಬಗ್ಗೆ ವಾರ್ಡ್ ಸದಸ್ಯ ಗುರುರಾಜ ಹಲಗೇರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ, ಸ್ಪಂದಿಸುತ್ತಿಲ್ಲ. ಸಮಸ್ಯೆ ಹೇಳಿದರೆ ವಾಟ್ಸಾೃಪ್ ಮಾಡುವಂತೆ ಹೇಳುತ್ತಾರೆಂದು ಆರೋಪಿಸಿದರು.

    ಪ್ರತಿಭಟನೆ ವಿಷಯ ತಿಳಿದು ನಗರಸಭೆ ವ್ಯವಸ್ಥಾಪಕ ಪರಿರಾಜ ಸ್ಥಳಕ್ಕೆ ಆಗಮಿಸಿದರು. ನಿವಾಸಿಗಳು ವಾರ್ಡ್‌ಗೆ ಕರೆದುಕೊಂಡು ಹೋಗಿ ಸಮಸ್ಯೆಗಳ ದರ್ಶನ ಮಾಡಿಸಿದರು. ವಾರದೊಳಗೆ ಪರಿಹರಿಸುವಂತೆ ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪೌರಾಯುಕ್ತರ ಗಮನಕ್ಕೆ ತಂದು ಸಮಸ್ಯೆ ನಿವಾರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.

    ನಿವಾಸಿಗಳಾದ ಪ್ರಾಣೇಶ ಮಾದಿನೂರು, ಬಸವರಾಜ ನೀರಲಗಿ, ಬಸವರಾಜ ಕರುಗಲ್, ಚಂದ್ರಶೇಖರಗೌಡ ಪಾಟೀಲ್, ಶಿವಕುಮಾರ್ ಕೋಣಂಗಿ, ಬಸವರಾಜ ಕೋರಿ, ಸುವರ್ಣ ನೀರಲಗಿ, ವಿಜಯಕುಮಾರ್ ಪದಕಿ, ಎ.ಬಿ.ದಿಂಡೂರು, ಪ್ರವೀಣ ಶರ್ಮಾ, ರಾಕೇಶ್, ಶರಣಪ್ಪ ಹಕ್ಕಂಡಿ, ಗಿರಿಜಮ್ಮ ಕರುಗಲ್, ದತ್ತುರಾವ್ ಪದಕಿ, ಕೃಷ್ಣ ಪದಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts