More

    ಬದನೆಕಾಯಿ ಬೆಳೆಯಲು ಇನ್ಫೋಸಿಸ್ ಉದ್ಯೋಗ ತೊರೆದು ರೈತನಾದ ಟೆಕ್ಕಿ; 40 ಸಾವಿರ ರೂ. ಸಂಬಳಕ್ಕಿಂತ ದುಪ್ಪಟ್ಟು ಹಣ ಗಳಿಕೆ!

    ತಮಿಳುನಾಡು: ಜ್ಞಾನಾರ್ಜನೆಗಾಗಿ ಓದು, ನಾವು ಮಾಡುವ ಜೀವನೋಪಾಯಕ್ಕಾಗಿ ಎನ್ನುವ ಮಾತಿದೆ. ಬೇರೆಯವರಿಗೆ ನೋವು ಹಾಗೂ ಮೋಸ ಮಾಡದೆ ಶ್ರಮವಹಿಸಿ ಮಾಡುವ ಪ್ರತಿಯೊಂದು ಕೆಲಸವು ನಮ್ಮ ಜೀವನವನ್ನು ಕಟ್ಟಿಕೊಡುತ್ತಿದೆ. ನಾವು ಮಾಡುವ ಕೆಲಸದ ಬಗ್ಗೆ ನಮಗೆ ಶ್ರದ್ಧೆ, ಗೌರವ ಇದ್ದರೆ ಯಶಸ್ಸು ಖಂಡಿತಾ ನಮ್ಮದಾಗುತ್ತದೆ.

    ಎಸಿ ರೂಮ್​​ನಲ್ಲಿ ಕುಳಿತು ಮಾಡುವ ಕೆಲಸ ಮಾತ್ರ ನಮ್ಮ ಜೀವನ ರೂಪಿಸುತ್ತದೆ. ಕೃಷಿಯಿಂದ ಲಾಭ ಇಲ್ಲ ಎಂದು ಹೇಳುವ ಯುವಪೀಳಿಗೆ ಮಧ್ಯೆ ತಮಿಳುನಾಡಿನ ನಿವಾಸಿಯಾಗಿರುವ 27 ವರ್ಷದ ಯುವಕನೊಬ್ಬ ಕೃಷಿ ಮಾಡುತ್ತಾ ಯಶಸ್ಸು ಕಂಡಿದ್ದಾನೆ.

    ವೆಂಕಟಸಾಮಿ ವಿಘ್ನೇಶ್, ಅವರು ಇನ್ಫೋಸಿಸ್‌ನ ಕೆಲಸವನ್ನು ತೊರೆದು ಜಪಾನ್‌ನಲ್ಲಿ ಬದನೆ ಕೃಷಿಯನ್ನ ಮಾಡುತ್ತಿದ್ದಾರೆ. ಇನ್ಫೋಸಿಸ್‌ನಲ್ಲಿ ಪಾವತಿಸುತ್ತಿದ್ದಕ್ಕಿಂತ ದುಪ್ಪಟ್ಟು ಹಣ ಸಂಪಾದನೆ ಮಾಡುತ್ತಾ ಇಂದಿನ ಯುವಪೀಳಿಗೆಗೆ ಉತ್ತಮ ಉದಾಹರಣೆಯಾಗಿ ಬೆಳೆದಿದ್ದಾರೆ.

    ಇದನ್ನೂ ಓದಿ: ಪೋರ್ನ್​ ಸ್ಟಾರ್​ ಆಗಿರುವುದು ದೇವರ ಇಚ್ಛೆ! ಶಿಕ್ಷಕಿ ಹುದ್ದೆ ತೊರೆದು ನೀಲಿತಾರೆಯಾದ ಟಿಲಿಯಾ ಬೋಲ್ಡ್​ ಹೇಳಿಕೆ

    ವೆಂಕಟಸಾಮಿ ವಿಘ್ನೇಶ್ ತಮಿಳುನಾಡು ಮೂಲದವರಾಗಿದ್ದು, ಕೃಷಿ ಕುಟುಂಬಕ್ಕೆ ಸೇರಿದವರು. ಇನ್ಫೋಸಿಸ್‌ನಲ್ಲಿ ವಿಘ್ನೇಶ್​ಗೆ ಕೆಲಸ ಸಿಕ್ಕಾಗ ಅವರ ಕುಟುಂಬಸ್ಥರು ಸಂತೋಷಪಟ್ಟರು. ಆದರೆ ವಿಘ್ನೇಶ್​ ಕೆಲವು ದಿನಗಳ ನಂತರ ಇರುವ ಕೆಲಸಕ್ಕೆ ಗುಡ್​​ಬೈ ಹೇಳಿದರು. ಇರುವ ಕೆಲಸವನ್ನೂ ತೊರೆದಾಗ ಮುಂದೇನು ಎಂದು ಯೋಚನೆ ಮಾಡುತ್ತಿದ್ದಾಗ ಕೃಷಿಯ ಮೇಲಿನ ಪ್ರೀತಿ ವಿಘ್ನೇಶ್ ಅವರನ್ನು ಸೆಳೆದಿತ್ತು.

    ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ದಾಸರಹಳ್ಳಿ ಧನಂಜಯ ಪರ ಅವರ ತಂದೆ ಗಂಗಾಧರಯ್ಯ ಬಿರುಸಿನ ಪ್ರಚಾರ
    ಸಾಧನೆ ಹಿಂದಿನ ಪರಿಶ್ರಮದ ಕುರಿತಾಗಿ ಮಾತನಾಡಿದ ಯುವ ರೈತ ವಿಘ್ನೇಶ್, “ಲಾಕ್‌ಡೌನ್ ಸಮಯದಲ್ಲಿ ಕೆಲಸ ಬಿಟ್ಟಿದ್ದೆ. ನಾನು ನನ್ನ ಕುಟುಂಬದ ತೋಟಗಳ ಕೆಲಸಗಳತ್ತ ಒಲವು ತೋರಲು ಪ್ರಾರಂಭಿಸಿದೆ. ಜಪಾನ್‌ನಲ್ಲಿ ಅವಕಾಶವಿರುವ ಜಾಹೀರಾತು ಪ್ರಕಟವಾಗಿತ್ತು. ಜಪಾನೀಸ್ ಭಾಷೆ ಮತ್ತು ಸಂಸ್ಕೃತಿಯಲ್ಲಿ ತರಬೇತಿಯನ್ನು ನೀಡುವ ಸಂಸ್ಥೆಯ ಬಗ್ಗೆ ಸ್ನೇಹಿತರೊಬ್ಬರು ನನಗೆ ಹೇಳಿದ್ದರು. ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ದೇಶದಲ್ಲಿ ಉದ್ಯೋಗಗಳನ್ನು ಹುಡುಕುವಲ್ಲಿ ಸಹಾಯ ಮಾಡಿತು. ನಿಹಾನ್ ಎಜುಟೆಕ್ ಸಂಸ್ಥೆಗೆ ದಾಖಲಾದೆ: ಎಂದಿದ್ದಾರೆ.

    ಇದನ್ನೂ ಓದಿ:  ಎಂಬಿಬಿಎಸ್​ ಓದಿದ ಈ ಸರ್ಕಾರಿ ವೈದ್ಯರ ಸಂಬಳ ಸೆಕ್ಯೂರಿಟಿ ಗಾರ್ಡ್​ಗೆ ಸಮಾನ! ಟ್ವಿಟರ್​ನಲ್ಲಿ ಆಕ್ರೋಶ ಹೊರಹಾಕಿದ ಬೆಂಗಳೂರಿಗ

    “ಸಂಸ್ಥೆಗೆ ದಾಖಲಾದ ಆರು ತಿಂಗಳ ನಂತರ, ಜಪಾನ್‌ನಲ್ಲಿ ಬದನೆಕಾಯಿ ಫಾರ್ಮ್‌ನಲ್ಲಿ ಕೃಷಿ ಕೆಲಸಗಾರನಾಗಿ ಸೇರಿದೆ. ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ತಿಂಗಳಿಗೆ 40,000 ರೂ. ಸಂಬಳ ಪಡೆಯುತ್ತಿದ್ದೆ. ಆದರೆ ಈಗ ಕೃಷಿ ಮಾಡುತ್ತಾ ತಿಂಗಳಿಗೆ ಸುಮಾರು 80,000 ರೂ. ಗಳಿಕೆ ಮಾಡುತ್ತಿದ್ದೇನೆ. ನನ್ನ ತಿಂಗಳ ಆದಾಯ ದುಪ್ಪಟ್ಟಾಗಿದೆ” ಎಂದು ಹೇಳಿದ್ದಾರೆ.

    ಇದನ್ನೂ ಓದಿ:  ಲೋಕಸಭಾ ಚುನಾವಣೆ ಎಫೆಕ್ಟ್​! ಸುಮಲತಾ ಪದೇಪದೆ ಕೆಣಕುತ್ತಿದ್ರು ತುಟಿ ಬಿಚ್ಚದ ಜೆಡಿಎಸ್​ ನಾಯಕರು

    “ಇಲ್ಲಿ, ನಾನು ಕಂಪನಿಯ ಕ್ವಾರ್ಟರ್ಸ್‌ನಲ್ಲಿ ಉಚಿತವಾಗಿ ವಾಸಿಸುತ್ತಿದ್ದೇನೆ ಜಪಾನ್‌ನಲ್ಲಿ ನಾನು ಶಾಶ್ವತವಾಗಿ ಉಳಿಯಲು ಯೋಜಿಸುವುದಿಲ್ಲ. ನನ್ನ ಅವಧಿ ಮುಗಿದ ನಂತರ, ಭಾರತಕ್ಕೆ ಹಿಂತಿರುಗಿ ಇಲ್ಲಿ ಕಲಿಯುತ್ತಿರುವ ಕೃಷಿ ತಂತ್ರಗಳನ್ನು ಇತರರಿಗೆ ಕಲಿಸುತ್ತೇನೆ” ಎಂದು ಹೇಳುತ್ತಾ ತಾವು ಮಾಡುತ್ತಿರುವ ಕೆಲಸದ ಕುರಿತಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ಮೋದಿ ಅವರು ಭ್ರಷ್ಟರು, ಕ್ರಿಮಿನಲ್ಸ್ ಪರ ಪ್ರಚಾರ ಮಾಡುತ್ತಿದ್ದಾರೆ: ದಿನೇಶ್ ಗುಂಡೂರಾವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts