More

    ಹುಬ್ಬಳ್ಳಿಯಲ್ಲಿ ಇನ್ಪೋಸಿಸ್ ಕಂಪನಿ ಕಾರ್ಯಚಟುವಟಿಕೆ ಆರಂಭಿಸಲು ಆಗ್ರಹ

    ಹುಬ್ಬಳ್ಳಿ: ರೈತರ ಜಮೀನು ಪಡೆದು ಕಂಪನಿ ಕಾರ್ಯಾರಂಭ ಮಾಡದ ಹಿನ್ನೆಲೆಯಲ್ಲಿ ಇಲ್ಲಿಯ ಗೋಕುಲ ರಸ್ತೆ ಇನ್ಪೋಸಿಸ್ ಸಂಸ್ಥೆ ಎದುರು ಆಮ್ ಆದ್ಮಿ ಪಾರ್ಟಿ ವತಿಯಿಂದ ಶುಕ್ರವಾರ ವಿನೂತನ ಕಾರ್ಯಕ್ರಮ ನಡೆಯಿತು.

    ‘ಹುಬ್ಬಳ್ಳಿ ಕಾಲಿಂಗ್’ ಎಂಬ ಅಭಿಯಾನದ ಮೂಲಕ ಕೂಡಲೇ ಈ ಭಾಗದಲ್ಲಿ ಕಂಪನಿ ಕಾರ್ಯಚಟುವಟಿಕೆ ಆರಂಭಿಸಿ ಉದ್ಯೋಗಾವಕಾಶ ಹೆಚ್ಚಿಸುವಂತೆ ವಿಶೇಷ ಗಮನ ಸೆಳೆಯಲಾಯಿತು.

    ‘ಹುಬ್ಬಳ್ಳಿ ಕಾಲಿಂಗ್ ಐಟಿ ಬಿಟಿ’, ‘ಲೆಟ್ ಅಸ್ ಸ್ಟಾರ್ಟ್ ಇನೊ್ಪೕಸಿಸ್’ ಮತ್ತು ‘ಇನ್ಪೋಸಿಸ್ ಪ್ರಾರಂಭವಾಗಲಿ, ಹುಬ್ಬಳ್ಳಿಯಲ್ಲಿ ಐಟಿ ಉದ್ದಿಮೆ ಉದಯವಾಗಲಿ’ ಎಂಬ ಘೋಷಣೆಗಳನ್ನು ಆಪ್ ಕಾರ್ಯಕರ್ತರು ಕೂಗಿದರು.

    ಇನೊ್ಪೕಸಿಸ್ ಸಿಬ್ಬಂದಿಗೆ ಹೂಗುಚ್ಛ ನೀಡಿ ಶುಭ ಕೋರಿದ ಕಾರ್ಯಕರ್ತರು ನಂತರ ಮನವಿಪತ್ರ ಸಲ್ಲಿಸಿದರು. ರೈತರಿಂದ ಸ್ವಾಧೀನ ಪಡಿಸಿಕೊಂಡ ಸುಮಾರು 43 ಎಕರೆ ಭೂಮಿಯನ್ನು ಇನ್ಪೋಸಿಸ್ ಕಂಪನಿಗೆ ಎಂಟು ವರ್ಷಗಳ ಹಿಂದೆ ನೀಡಲಾಗಿತ್ತು. ಆದರೆ, ಕಟ್ಟಡ ಮತ್ತು ಸೌಲಭ್ಯಗಳು ಪೂರ್ಣಗೊಂಡು ಮೂರು ವರ್ಷ ಕಳೆದರೂ ಕಂಪನಿ ಯಾವುದೇ ಅರ್ಥಪೂರ್ಣ ಕೆಲಸ ಹುಬ್ಬಳ್ಳಿಯಲ್ಲಿ ಪ್ರಾರಂಭಿಸದಿರುವುದು ಉದ್ಯೋಗಾಕಾಂಕ್ಷಿಗಳಿಗೆ ತೀವ್ರ ನಿರಾಶೆ ಮೂಡಿಸಿದೆ. ಕಾರ್ಯಾರಂಭಕ್ಕೆ ಏನು ಸಮಸ್ಯೆ ಇದೆ ಎಂದು ಸರ್ಕಾರ ತಿಳಿದುಕೊಂಡು ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಪ್ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ದೂರಿದರು.

    ಹುಬ್ಬಳ್ಳಿಯಲ್ಲಿ ಬೇಗನೆ ಕಂಪನಿ ಕೆಲಸ ಪ್ರಾರಂಭಿಸುವಂತೆ ಇನ್ಪೋಸಿಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಲೀಲ್ ಪರೇಖ ಅವರಿಗೆ ಮನವಿ ರವಾನಿಸಲಾಯಿತು. ಅಭಿಯಾನದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರತಿಭಾ ದಿವಾಕರ, ಶಶಿಕುಮಾರ ಸುಳ್ಳದ, ವಿಕಾಸ ಸೊಪ್ಪಿನ, ಡೇನಿಯಲ್ ಐಕೊಸ್, ಲತಾ ಅಂಗಡಿ, ರೂಪಾಲಿ ನರಗುಂದ, ರುಕ್ಮಿಣಿ, ಯುವ ಐಟಿ ಉದ್ಯಮಿ ಸನಾ ಕುದರಿ, ಹಸನ್​ಅಲಿ ಶೇಖ್, ಡಾ. ವಿ.ಬಿ. ಮಾಗನೂರ, ಮೆಹಬೂಬ್ ಹೊಸಮನಿ, ಶಿವಕುಮಾರ ಬಾಗಲಕೋಟ, ಮೆಹಬೂಬ ಹರವಿ, ಮಂಜುನಾಥ ಸುಳ್ಳದ, ಶೌಕತ್ ಅಲಿ, ಕೃಷ್ಣ ಗೆಜ್ಜಿ, ಮಹಾಂತೇಶ ಡಿಡಲಕೊಪ್ಪ, ಸಂತೋಷ ಮಾನೆ, ತ್ಯಾಗರಾಜ ಅಮಲಪಟ್ಟಿ, ಕಾರ್ಯಕರ್ತರು, ಸಾರ್ವಜನಿಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts