More

    ಮಾಹಿತಿ ಪಡೆದು ರಾಜ್ಯಕ್ಕೆ ಪ್ರವೇಶ ನೀಡಿ

    ಬೋರಗಾಂವ: ಗಡಿಭಾಗ ಕೊಗನೋಳಿ ಚೆಕ್‌ಪೋಸ್ಟ್‌ನಲ್ಲಿ ಹೊರ ರಾಜ್ಯದಿಂದ ಬರುತ್ತಿರುವ ಪ್ರತಿಯೊಬ್ಬರ ಮಾಹಿತಿ ಪಡೆದು ನಂತರವೇ ರಾಜ್ಯದಲ್ಲಿ ಪ್ರವೇಶ ನೀಡಲು ಈಗಾಗಲೇ ಸೂಚಿಸಲಾಗಿದೆ. ಕರೊನಾ ವೈರಸ್ ಸಂಪೂರ್ಣ ತೊಲಗಿಸಲು ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

    ಸಮೀಪದ ಕೊಗನೋಳಿ ಚೆಕ್‌ಪೋಸ್ಟ್‌ಗೆ ಇತ್ತೀಚೆಗೆ ಭೇಟಿ ನೀಡಿದ ವೇಳೆ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಹೊರ ರಾಜ್ಯದಿಂದ ರಾಜ್ಯಕ್ಕೆ ಬಂದಿರುವ ನಾಗರಿಕರ ಸಮಸ್ಯೆ ಆಲಿಸಿ ಮಾತನಾಡಿದರು. ಕರೊನಾ ವೈರಸ್‌ನಿಂದ ರಾಜ್ಯದ ಅನೇಕ ನಾಗರಿಕರು ಮಹಾರಾಷ್ಟ್ರ, ಗುಜರಾತ, ಗೋವಾ, ರಾಜಸ್ಥಾನ ಸೇರಿ ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದಾರೆ. ಇಂಥವರಿಗೆ ನಿಯಮದಡಿಯಲ್ಲಿ ರಾಜ್ಯದಲ್ಲಿ ಪ್ರವೇಶ ನೀಡಲಾಗುತ್ತಿದೆ. ಕಳೆದ 15 ದಿನಗಳಿಂದ ಜಿಲ್ಲಾಡಳಿತ ವತಿಯಿಂದ ಕೊಗನೋಳಿ ಚೆಕ್‌ಪೋಸ್ಟ್ ಬಳಿ ಪ್ರವೇಶ ನೀಡಲಾಗುತ್ತಿದೆ. ಹಲವರಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದ್ದು, ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಬೇಕು ಎಂದರು.

    ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ, ಎಸ್.ಪಿ. ಲಕ್ಷ್ಮಣ ನಿಂಬರಗಿ, ಉದ್ಯಮಿ ಅಭಿನಂದನ ಪಾಟೀಲ, ಮುಖಂಡ ಉತ್ತಮ ಪಾಟೀಲ, ಅಶೋಕಕುಮಾರ ಅಸೂದೆ, ಪ್ರಕಾಶ ಗಾಯಕವಾಡ, ಪ್ರವೀಣ ಪಾಟೀಲ, ಬಂಡಾ ಪಾಟೀಲ, ಶ್ರೀನಿವಾಸ ಪಾಟೀಲ, ಲಕ್ಷ್ಮಣ ಅಬಣೆ, ಮಹಾದೇವ ಇಂಗವಲೆ, ರಾಮಚಂದ್ರ ಕಾಗಲೆ, ಉಮೇಶ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts