More

    ಕಟ್ಟಡ ನಿರ್ಮಾಣ ಕಾಮಗಾರಿಗೆ ಸೋಂಕು!

    ಹುಬ್ಬಳ್ಳಿ: ಜನತಾ ಕರ್ಫ್ಯೂ ಹಾಗೂ ಲಾಕ್​ಡೌನ್​ನಲ್ಲಿ ಕಟ್ಟಡ ನಿರ್ವಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಕೊಟ್ಟಿದ್ದರೂ ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆ, ಕಾರ್ವಿುಕರ ಅಭಾವದಿಂದ ಪೆಟ್ಟು ಬಿದ್ದಿದೆ.

    ಕರೊನಾ ಸೋಂಕು ಹರಡದಿರಲು ಜನತಾ ಕರ್ಫ್ಯೂ ಜಾರಿಯಾಗುತ್ತಿದ್ದಂತೆ ಅವಳಿನಗರದಲ್ಲಿ ಶೇ.40 ಕಾಮಗಾರಿಗಳು ನೆಲಕ್ಕಚ್ಚಿವೆ. ಶೇ. 60ರಷ್ಟು ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ.

    ‘ಸ್ಮಾರ್ಟ್​ಸಿಟಿ’ ಯೋಜನೆಗೆ ತಕ್ಕುದಾಗಿ ಮನೆ, ಅಪಾರ್ಟ್​ವೆುಂಟ್ ನಿರ್ವಿುಸಲು ರಿಯಲ್ ಎಸ್ಟೇಟ್ ಉದ್ಯಮಿಗಳು ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ. ಸರ್ಕಾರದಿಂದ ಕೆಲವು ಅನುಮತಿಗಳು ಸಿಕ್ಕರೆ ಮೇ ತಿಂಗಳಲ್ಲಿ 100ರಿಂದ 150ಕ್ಕೂ ಹೆಚ್ಚು ಹೊಸ ವಸತಿ ಯೋಜನೆಗಳು ಅವಳಿ ನಗರದಲ್ಲಿ ತಲೆ ಎತ್ತುವ ಸಾಧ್ಯತೆ ಇದ್ದವು. ದುಬೈ ಮಾದರಿ ಹಾಗೂ ಪ್ರವಾಸೋದ್ಯಮ ಆಧಾರಿತವಾಗಿ ಕಟ್ಟಡಗಳನ್ನು ನಿರ್ವಿುಸಲು ಹಲವರು ಉದ್ದೇಶಿಸಿದ್ದರು. ಬೃಹತ್ ಕಟ್ಟಡಗಳ ನಿರ್ವಣದಿಂದ ಮಹಾನಗರ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಲು ಮುಂದಾಗಿತ್ತು. ಆದರೆ, ಇದೆಲ್ಲದಕ್ಕೂ ಕರೊನಾ ಕೊಳ್ಳಿ ಇಟ್ಟಿದೆ.

    ಬೆಲೆ ಹೆಚ್ಚಳ: ಒಂದು ತಿಂಗಳ ಹಿಂದೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಯಥಾಸ್ಥಿತಿಯಲ್ಲಿತ್ತು. ಈಗ ಎಲ್ಲವೂ ಹೆಚ್ಚಳವಾಗಿದೆ. ಸಿಮೆಂಟ್ ದರ ಚೀಲಕ್ಕೆ 430 ರೂ. ಇದೆ. ಇದಕ್ಕೂ ಮೊದಲು 280ರಿಂದ 350 ರೂ. ಇತ್ತು. ಟನ್​ಗೆ 48-50 ಸಾವಿರ ರೂ. ಇದ್ದ ಸ್ಟೀಲ್ ದರ ಈಗ 68 ಸಾವಿರ ರೂ. ಆಗಿದೆ. ಒಂದು ಲೋಡ್ ಮರಳಿಗೆ 35 ಸಾವಿರ ರೂ. ಇದೆ. ಎಂಸ್ಯಾಂಡ್ ಇದ್ದರೂ ಎಲ್ಲ ಹಂತದ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ. ಈ ರೀತಿ ಬೆಲೆ ದಿಢೀರ್ ಏರಿಕೆಯಾದರೆ, ಕಟ್ಟಡ ನಿರ್ಮಾಣ ಕಷ್ಟಕರ ಎನ್ನುತ್ತಾರೆ ಬಿಲ್ಡರ್​ಗಳು.

    ಕಾರ್ವಿುಕರ ಕೊರತೆ: ಕರೊನಾ ಎರಡನೇ ಅಲೆ ವಿಪರೀತವಾಗಿ ಹರಡುತ್ತಿರುವುದರಿಂದ ಕಾರ್ವಿುಕರು ಮಹಾನಗರ ತೊರೆದಿದ್ದಾರೆ. ಕಾರ್ವಿುಕರಿಗೆ ದಿನಕ್ಕೆ 500 ರೂ. ಕೂಲಿ ಕೊಡುತ್ತೇವೆ ಎಂದರೂ ಸಿಗುತ್ತಿಲ್ಲ. ನಗರದಲ್ಲಿ ಇದ್ದವರು ಮನೆಯಿಂದ ಹೊರಗಡೆ ಬರುತ್ತಿಲ್ಲ. ಹೊರಗಡೆ ಬಂದರೂ ಪೊಲೀಸರ ವಿಚಾರಣೆಗೆ ಹೆದರುತ್ತಿದ್ದಾರೆ. ಹೀಗಾಗಿ, ಕಟ್ಟಡ ಕಾರ್ವಿುಕರಿಲ್ಲದೆ ಮನೆ, ಅಪಾರ್ಟ್​ವೆುಂಟ್ ಕಾಮಗಾರಿಗಳೆಲ್ಲ ಸ್ಥಗಿತಗೊಂಡಿವೆ.

    ಬೊಕ್ಕಸಕ್ಕೆ ನಷ್ಟ: ರಿಯಲ್ ಎಸ್ಟೇಟ್ ಉದ್ಯಮ ಎಷ್ಟು ಬೆಳೆಯುತ್ತದೋ ಅಷ್ಟು ಆದಾಯ ರಾಜ್ಯದ ಬೊಕ್ಕಸ ಸೇರುತ್ತದೆ. ಜನತಾ ಕರ್ಫ್ಯೂನಿಂದಾಗಿ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ಬೊಕ್ಕಸಕ್ಕೆ ಬರೆ ಬಿದ್ದಿದೆ. ಪರಿಣಾಮ ಮುಂದೊಂದು ದಿನ ಜಿಡಿಪಿ ವೃದ್ಧಿಗೂ ಹೊಡೆತ ಬೀಳಲಿದೆ.

    ಗ್ಯಾರೇಜ್, ಊಟದ ವ್ಯವಸ್ಥೆ ಆಗಲಿ

    ಮರಳು ಹಾಗೂ ಇತರ ಕಟ್ಟಡ ಸಾಮಗ್ರಿ ತರಲು ಲಾರಿಗಳ ಓಡಾಟಕ್ಕೆ ಅನುಮತಿ ಇದ್ದರೂ ತೊಂದರೆಯಾಗುತ್ತಿದೆ. ಏಕೆಂದರೆ, ವಾಹನಗಳ ನಿರ್ವಹಣೆಗೆ ಅಗತ್ಯವಿರುವ ಗ್ಯಾರೇಜ್, ಆಟೋಮೊಬೈಲ್ ಬಿಡಿಭಾಗಗಳ ಮಳಿಗೆ ತೆರೆಯಲು ಅನುಮತಿ ನೀಡಿಲ್ಲ. ಚಾಲಕರಿಗೆ ಊಟದ ವ್ಯವಸ್ಥೆ ಮಾಡಲು ತೊಂದರೆಯಾಗುತ್ತಿದೆ. ಇದನ್ನೆಲ್ಲ ಸರಿಪಡಿಸಬೇಕು ಎಂದು ಆಗ್ರಹಿಸುತ್ತಾರೆ ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಪ್ರಭಾಕರ ಉಪಾಧ್ಯ.

    ರಾಜ್ಯ ಸರ್ಕಾರ ಕಟ್ಟಡ ನಿರ್ವಣಕ್ಕೆ ಆದ್ಯತೆ ಮೇರೆಗೆ ಅನುಮತಿ ನೀಡಿದೆ. ಆದರೆ, ಸಾರಿಗೆ ವ್ಯವಸ್ಥೆಯನ್ನೇ ಬಂದ್ ಮಾಡಿದೆ. ಕಾರ್ವಿುಕರು ಸಿಗುತ್ತಿಲ್ಲ. ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಕಂಡಿದೆ. ಇದರಿಂದ ಕರೊನಾ ಸಂದರ್ಭದಲ್ಲಿ ಮನೆ, ಅಪಾರ್ಟ್​ವೆುಂಟ್ ನಿರ್ಮಾಣ ಸಾಧ್ಯವಾಗುತ್ತಿಲ್ಲ.

    -ಪ್ರದೀಪ ರಾಯ್ಕರ್, ಕ್ರೆಡೈ ಸಂಯೋಜಿತ ರಾಜ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts