More

    ಹಾಲು ಕುಡಿಯುತ್ತಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಯನ್ನು ಕರೆದರೂ ನಿರ್ಲಕ್ಷ್ಯ; ಇಹಲೋಕ ತ್ಯಜಿಸಿದ ಒಂದು ದಿನದ ಮಗು…

    ಕಲಬುರಗಿ: ವೈದ್ಯರ ನಿರ್ಲಕ್ಷ್ಯಕ್ಕೆ ಒಂದು ದಿನದ ಹಸುಗೂಸು ಸಾವನಪ್ಪಿದೆ ಎಂಬ ಆರೋಪ ಅಫಜಲಪುರ ಪಟ್ಟಣದ ತಾಲೂಕ ಸರಕಾರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಕೇಳಿಬಂದಿದೆ.

    ಅಫಜಲಪುರ ಪಟ್ಟಣದ ತಾಲೂಕ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ನೌಶಹಾದ್ ಬೇಗಂ ಹಾಗೂ ಅಬ್ಲುಲ್ ಹಳ್ಯಾಳ ಎಂಬುವವರ ಮಗು ಸಾವನ್ನಪ್ಪಿದ್ದು ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವು ಎಂದು ಪೋಷಕರು ಆರೋಪಿಸಿದ್ದಾರೆ.

    ಇದೀಗ ಅಫಜಲಪುರ ಪಟ್ಟಣದ ನಿವಾಸಿಗಳಾದ ಪೋಷಕರು ಮಗು ಸಾವನ್ನಪ್ಪಿದ ದುಃಖದಲ್ಲಿ ಆಸ್ಪತ್ರೆ ಬಾಗಿಲು ಬಂದ್ ಮಾಡಿ ಪ್ರತಿಭಟನೆ ನಡಸುತ್ತಿದ್ದಾರೆ.

    ನೌಶಹಾದ್​ ಬೇಗಂ 22ರಂದು ಡೆಲಿವೆರಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. 23ರಂದು ಗಂಡು ಮಗು ಜನನವಾಗಿತ್ತು. 23ರಂದು ರಾತ್ರಿ ವೇಳೆ ಮಗು ಹಾಲು ಕುಡಿಯುತ್ತಿಲ್ಲ ಎಂದು ಸಿಬ್ಬಂದಿಗಳಿಗೆ ಕರೆದಿದ್ದು ಸ್ಪಂದಿಸಲಿಲ್ಲ ಎಂದು ಪೋಷಕರು ಆರೋಪ ಮಾಡಿದ್ದಾರೆ. ವೈದ್ಯರಿಲ್ಲ ಎಂದರೆ ನಮಗೆ ಕಲಬುರಗಿ ಹೋಗಲು ಬಿಡಿ ಎಂದು ಗೊಗರೆದರೂ ಸಿಬ್ಬಂದಿಗಳು ಕ್ಯಾರ್​ ಮಾಡಿಲ್ಲ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts