More

    ಮಾಜಿ ಸಿಎಂ ಸಿದ್ದು ವಿರುದ್ಧ ಬ್ರಹ್ಮಾಸ್ತ್ರ ಬಿಟ್ಟ ಮುಖ್ಯಮಂತ್ರಿ ಬೊಮ್ಮಾಯಿ!

    ಬೆಂಗಳೂರು: ಚುನಾವಣೆ ಇನ್ನೇನು ಹತ್ತಿರದಲ್ಲೇ ಇದ್ದು ಅದಕ್ಕೆ ತಕ್ಕಂತೆ ರಾಜಕೀಯ ಬೆಳವಣಿಗೆಗಳು ಕ್ಷಿಪ್ರವಾಗಿ ನಡೆಯುತ್ತಿವೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ್ದಾರೆ.

    ಇದನ್ನೂ ಓದಿ: ಸರ್ಕಾರಿ ವ್ಯವಸ್ಥೆ ಸಾಮಾನ್ಯರಿಗೆ ತಲುಪಲು ತಂತ್ರಜ್ಞಾನ-ಸೇವಾ ಮನೋಭಾವ ಅಗತ್ಯ: ಸಿಎಂ ಬೊಮ್ಮಾಯಿ

    ಚುನಾವಣೆ ಹತ್ತಿರದಲ್ಲಿದೆ ಎನ್ನುವಾಗಲೇ ಸಿದ್ದರಾಮಯ್ಯ ವಿರುದ್ಧ 8 ಸಾವಿರ ಕೋಟಿ ರೂ.ಯ ಗಂಭೀರ ಆರೋಪವನ್ನು ಮಾಡಲಾಗಿದೆ. ಇದೀಗ ಅರ್ಕಾವತಿ ರಿಡೋ‌ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧದ ವರದಿಯನ್ನು ಸಿಎಂ ಬಹಿರಂಗಗೊಳಿಸಿದ್ದಾರೆ.

    ಅರ್ಕಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ವರದಿಯನ್ನು ತಯಾರಿಸಿತ್ತಯ. ಇದೀಗ ಆ ವರದಿಯನ್ನೇ ಮುಖ್ಯಮಂತ್ರಿ ಬಹಿರಂಗಗೊಳಿಸಿದ್ದಾರೆ.

    ಇದೇ ಮೊದಲ ಬಾರಿಗೆ ಕೆಂಪಣ್ಣ ಆಯೋಗದ ವರದಿ ಓದಿದ ಸಿಎಂ, ವರದಿಯಲ್ಲಿ ಡಿನೋಟಿಪೈ ನಲ್ಲಿ ಭ್ರಷ್ಟಾಚಾರ ಇದೆ ಎಂದು ಹೇಳಿದ್ದಾರೆ. ಚುನಾವಣೆಯೂ ಹತ್ತಿರದಲ್ಲೇ ಇದ್ದು ಅರ್ಕಾವತಿ ರಿಡೋ ಪ್ರಕರಣ ಮತ್ತೆ ಜೀವ ಪಡೆಯುವ ಸಾಧ್ಯತೆ ಇದೆ. ಚುನಾವಣೆಗೆ ಸಿದ್ದರಾಮಯ್ಯ ವಿರುದ್ಧ ಇದೇ ಅಸ್ತ್ರ ಬಳಸಲು ಬಿಜೆಪಿ ನಿರ್ಧಾರಿಸಿದ್ದು ಸಿಎಂ ಹೇಳಿಕೆಯಿಂದ ಸಿದ್ದರಾಮಯ್ಯ ಹಾಗು ಕಾಂಗ್ರೆಸ್ ಪಾಳಯ ಕಕ್ಕಾ ಬಿಕ್ಕಿಯಾಗಿದೆ.

    ಸದನದಲ್ಲಿ ಜಸ್ಟೀಸ್​ ಕೆಂಪಣ್ಣ ಆಯೋಗದ ವರದಿಯನ್ನು ಬಹಿರಂಗಪಡಿಸಿದ ಮುಖ್ಯಮಂತ್ರಿ, ಸಿದ್ದರಾಮಯ್ಯ ಮೇಲೆ ಅಕ್ರಮದ ಆರೋಪ ಮಾಡಿದ್ದಾರೆ.

    ಸಿದ್ದರಾಮಯ್ಯ ವರದಿ ಬಹಿರಂಗ ಮಾಡಲಿಲ್ಲ ಎಂದು ಸಿಎಂ ಆರೋಪ ಮಾಡಿದ್ದು ಸಿಎಂ ಬೊಮ್ಮಾಯಿ‌ಗೆ ಆರೋಪಕ್ಕೆ ಸಿದ್ದರಾಮಯ್ಯ ಸುದ್ದಿಗೊಷ್ಠಿ ಕರೆದಿದ್ದಾರೆ. ಬೆಳಗ್ಗೆ ೧೦ ಗಂಟೆಗೆ ಸರ್ಕಾರಿ ನಿವಾಸದಲ್ಲಿ ಸುದ್ದಿಗೊಷ್ಠಿ ನಡೆಯಲಿದ್ದು ರೀ-ಡೂ ಪ್ರಕರಣ ವಿಚಾರವಾಗಿ ದಾಖಲೆ ಬಿಡುಗಡೆ ಮಾಡಲಿದ್ದಾರೆ. ದಾಖಲೆ ಬಿಡುಗಡೆ ಮಾಡಿ ಯಾವ ಕಾರಣಕ್ಕೆ ಜಸ್ಟೀಸ್ ಕೆಂಪಣ್ಣ ವರದಿ ಬಹಿರಂಗ ಮಾಡಿಲ್ಲ ಎಂದು ಸ್ಪಷ್ಟನೆ ನೀಡಲಿದ್ದಾರೆ.

    ಇದನ್ನೂ ಓದಿ: CM ಬೊಮ್ಮಾಯಿ ತಡವಾಗಿ ಬಂದಿದ್ದಕ್ಕೆ ಸನ್ಮಾನವನ್ನೇ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬ್ಯೋನ್‌ ಬೋರ್ಗ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts