More

    VIDEO| ಕಂಠಪೂರ್ತಿ ಕುಡಿದು ದಂಪತಿಯಿಂದ ಕಾರು ಚಾಲನೆ: ನಸುಕಿನ ಜಾವವೇ ನಡೆಯಿತು ಭೀಕರ ಅಪಘಾತ!

    ಹೈದರಾಬಾದ್​: ಡ್ರಂಕ್​ ಆ್ಯಂಡ್​ ಡ್ರೈವ್​ ಪ್ರಕರಣವೊಂದರಲ್ಲಿ ವೇಗವಾಗಿ ಬರುತ್ತಿದ್ದ ಕಾರು ಅಡ್ಡಾದಿಡ್ಡಿಯಾಗಿ ಚಲಿಸಿ, ಹೈದರಾಬಾದಿನ ಮಧುಪುರ್​​ ಏರಿಯಾದಲ್ಲಿರುವ ಅಂಡರ್​ಪಾಸ್​ ಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ಶುಕ್ರವಾರ ನಸುಕಿನ ಜಾವ ನಡೆದಿದೆ. ಭೀಕರ ಅಪಘಾತ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್​ ಸಹ ಆಗಿದೆ.

    ಸೈಬರಾಬಾದ್​ ಸಂಚಾರಿ ಪೊಲೀಸರ ಪ್ರಕಾರ ಕಂಠಪೂರ್ತಿ ಕುಡಿದಿದ್ದ ಮಹಿಳೆ ಕಾರು ಚಾಲನೆ ಮಾಡುತ್ತಿದ್ದರು. ಆಕೆಯ ಪಾನಮತ್ತ ಪತಿ ಸಹ ಕಾರಿನಲ್ಲಿದ್ದರು. ವೇಗವಾಗಿ ಚಾಲನೆ ಮಾಡುವಾಗ ನಿಯಂತ್ರಣ ಕಳೆದುಕೊಂಡು ಕಾರು ಅಂಡರ್​ಪಾಸ್​ ಗೋಡೆಗೆ ಗುದ್ದಿ ಪಲ್ಟಿ ಹೊಡೆದಿದೆ. ಗಾಯಗೊಂಡಿದ್ದ ದಂಪತಿಯನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿ ಸೀಟ್​ ಬೆಲ್ಟ್​ ಧರಿಸಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ.

    ಇದನ್ನೂ ಓದಿ: ಮುನಿರತ್ನ ಸೇರ್ಪಡೆ ಪ್ರಶ್ನೆಯೇ ಬಂದಿಲ್ಲ

    ಈ ಬಗ್ಗೆ ಮಧುಪುರ್​ ಠಾಣಾ ಇನ್ಸ್​ಪೆಕ್ಟರ್​ ಮಾತನಾಡಿ, ದಂಪತಿ ಸಣ್ಣಪುಟ್ಟ ಗಾಯಗಳಿಂದ ಬಚಾವ್​ ಆಗಿದ್ದಾರೆ. ಇಬ್ಬರು ಸಹ ಶಮ್ಶಾಬಾದ್​ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಪಘಾತ ನಡೆದಾಗ ಅವರು ಮಧುಪುರ್​ದಿಂದ ಬರುತ್ತಿದ್ದರು. ವಾಹನವನ್ನು ವಶಕ್ಕೆ ಪಡೆದಿದ್ದೇವೆ. ಸದ್ಯ ಇಬ್ಬರು ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ದಂಪತಿ ವಿರುದ್ಧ ಮಧುಪುರ್​ ಠಾಣೆಯಲ್ಲಿ ಡ್ರಂಕ್​ ಆ್ಯಂಡ್​ ಡ್ರೈವ್​ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್​)

    ವೈರಲ್​ ಆಗಿರೋ ರಿಕ್ಷಾ ಸವಾರನ ಮನಕಲಕುವ ವಿಡಿಯೋ ಭಾರತದಲ್ಲ: ನಿಜಾಂಶವೇ ಬೇರೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts