More

    ಸರ್ಕಾರ ಸೂಕ್ತ ರಕ್ಷಣೆ ಕೊಟ್ರೆ ಸತ್ಯ ಹೇಳ್ತೇನೆ: ಸ್ಯಾಂಡಲ್​ವುಡ್​ ಕುರಿತು ಇಂದ್ರಜಿತ್​ ಲಂಕೇಶ್​ ಸ್ಫೋಟಕ ಹೇಳಿಕೆ!

    ಬೆಂಗಳೂರು: ಗುರುವಾರವಷ್ಟೇ ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್​ಸಿಬಿ) ರಾಜ್ಯ ರಾಜಧಾನಿಯಲ್ಲಿ ಬೃಹತ್​​ ಡ್ರಗ್ಸ್​ ಜಾಲವನ್ನು ಭೇದಿಸಿದ್ದು, ಡ್ರಗ್ಸ್​ ಜಾಲದಲ್ಲಿ ಸ್ಯಾಂಡಲ್​ವುಡ್ ಹೆಸರು ಸಹ ಕೇಳಿಬಂದಿತ್ತು. ಇದರ ಬೆನ್ನಲ್ಲೇ ನಟ, ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ​

    ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿರುವ ಅವರು ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ನನಗೆ ಸರ್ಕಾರದಿಂದ ಸೂಕ್ತವಾದ ರಕ್ಷಣೆ ಕೊಟ್ರೆ ಇನ್ನಷ್ಟು ಸತ್ಯಗಳನ್ನು ಹೇಳುತ್ತೇನೆ. ನಮ್ಮಲ್ಲಿ ರೇವ್ ಪಾರ್ಟಿಗಳು ನಡೆಯುತ್ತವೆ. ಅದರಲ್ಲಿ ಯುವ ನಟ-ನಟಿಯರು ಮಾದಕ ವಸ್ತುಗಳನ್ನ ಬಳಸ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

    ಇದನ್ನೂ ಓದಿ: ಕೌನ್ಸಿಲ್​ ಸಭೆ ಮಧ್ಯೆಯೇ ಸೆಕ್ಸ್​ನಲ್ಲಿ ಬಿಜಿಯಾದ ಸರ್ಕಾರಿ ಅಧಿಕಾರಿ: ವೈರಲ್​ ಆಯ್ತು ವಿಡಿಯೋ!

    ಈ ಕುರಿತು ಸೂಕ್ತವಾದ ತನಿಖೆ ನಡೆಯಬೇಕು ಡ್ರಗ್ಸ್ ಮಾಫಿಯಾದಿಂದ ಆಡಿ, ಜಾಗ್ವಾರ್ ಕಾರು ಪಡೆದ ಕಲಾವಿದರ ಹೆಸರು ಬಹಿರಂಗ ಆಗಬೇಕು. ಸರಿಯಾದ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ತನಿಖೆಗೆ ನನ್ನ ಸಂಪೂರ್ಣ ಸಹಕಾರ ಕೊಡುತ್ತೇನೆ. ಅಧಿಕಾರಿಗಳು ಕರೆದರೆ ತನಿಖೆಗೆ ಇನ್ನಷ್ಟು ಮಾಹಿತಿ ಕೊಡುತ್ತೇನೆಂದು ಹೇಳಿದರು.

    ಇದ್ದಕ್ಕಿದ್ದಂತೆ ಹಣ-ಹೆಸರು ಮಾಡುವ ಉದ್ದೇಶದಿಂದ ಹೀಗಾಗಿದೆ. ಹಲವು ಯುವ ನಟ-ನಟಿಯರು ಅದರ ಜಾಲದಲ್ಲಿದ್ದಾರೆ. ಹಲವು ಪಾರ್ಟಿಗಳಲ್ಲಿ ನಡೆಯೋ ಈ ರೀತಿ ವಿಚಾರ ನಮ್ಮ ಗಮನಕ್ಕಿದೆ. ಈ ಹಿಂದೆ ಆಗಿರೋ ಕೆಲವು ಘಟನೆಯಲ್ಲಿ ಅದರ ಘಾಟು ಬಡಿದಿದೆ. ಆದರೆ ತನಿಖಾಧಿಕಾರಿಗಳು ಅವರ ಹೆಸರನ್ನು ಬಹಿರಂಗಪಡಿಸಬೇಕು. ಅದು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಈ ಹಿಂದೆ ಕೂಡ ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಕೆಲವು ನಟಿಯರು ಅನ್ನೋ ಮಾತು ಕೇಳಿ ಬಂತು. ಆದ್ರೆ, ಅದು ಬಹಿರಂಗ ಆಗಲಿಲ್ಲ. ಹೀಗಾಗಿ ಬಹಿರಂಗ ಆಗಬೇಕೆಂದು ಒತ್ತಾಯಿಸಿದರು. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಕೊಹ್ಲಿ- ಅನುಷ್ಕಾ ತಂದೆ-ತಾಯಿ ಆಗುತ್ತಿರುವುದಕ್ಕೆ ಟ್ರೋಲ್​ ಆಗುತ್ತಿದ್ದಾನೆ ಬಾಲಿವುಡ್​ ಸ್ಟಾರ್​ ದಂಪತಿ ಪುತ್ರ..!

    ಅಮೆರಿಕದಲ್ಲಿ ಕಮಲ ಅರಳೀತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts